लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಂಪನ್ಮೂಲ ಕೇಂದ್ರವನ್ನು ವಿಮುಕ್ತಿ ನಿರ್ದೇಶಕರಾದ ಫಾದರ್ ಅರುಣ್ ಲೋಬೊ ರವರು ಉದ್ಘಾಟನೆ….

1 min read

ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ರಿ. ಬಣಕಲ್ ವತಿಯಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸಬ್ಲಿ ಶಾಲೆಗೆ ಮಕ್ಕಳ ಸಂಪನ್ಮೂಲ ಕೇಂದ್ರವನ್ನು ವಿಮುಕ್ತಿ ನಿರ್ದೇಶಕರಾದ ಫಾದರ್ ಅರುಣ್ ಲೋಬೊ ರವರು ಉದ್ಘಾಟನೆ ಮಾಡಿದರು. ಸಂಸ್ಥೆಯು ಮಹಿಳೆ, ಮಕ್ಕಳು ಮತ್ತು ದುರ್ಬಲ ವರ್ಗದವರ ಪರವಾಗಿ ಕೆಲಸಗಳನ್ನು ಮಾಡಲಾಗುತ್ತಿದ್ದು ವಿಶೇಷವಾಗಿ ಆರೋಗ್ಯ, ಶಿಕ್ಷಣ ಮತ್ತುನಾಯಕತ್ವ ಇಂತಹ ವಿಚಾರಗಳಲ್ಲಿ ಹೆಚ್ಚು ಮಹತ್ವವನ್ನ ಸಂಸ್ಥೆ ನೀಡುತ್ತದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ, ಮಕ್ಕಳ ಸಂಪನ್ಮೂಲ ಕೇಂದ್ರವು, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವುದು ಹಾಗೂ ಬೆಳೆಸುವುದು ಅಂತಯೇ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ, ಕಲಿಕೆ, ಬರವಣಿಗೆ, ಓದು, ಆಟ, ಮತ್ತು ಕಲೆ ಎಲ್ಲಾ ಅಂಶಗಳನ್ನು ಅರ್ಥೈಸಿಕೊಂಡು, ಇದಕ್ಕೆ ಪೂರಕವಾಗಿರುವಂತಹ ಪುಸ್ತಕಗಳು, ಕಂಪ್ಯೂಟರ್ ಶಿಕ್ಷಣ, ಹೊರಾಂಗಣ ಮತ್ತು ಒಳಾಂಗಣ ಆಟಗಳು, ಮತ್ತು ಇತರ ಚಟುವಟಿಕ ಸಾಮಗ್ರಿಗಳನ್ನು ಮಕ್ಕಳ ಸಂಪನ್ಮೂಲ ಕೇಂದ್ರದಲ್ಲಿ ನೀಡಲಾಗಿದ್ದು, ಇದರ ಸದ್ಬಳಕೆಯನ್ನು ಗ್ರಾಮದಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಕಲಿಕೆಯನ್ನು ಮಾಡಲು ಇಚ್ಚಿಸುವ ಎಲ್ಲಾ ಮಹಿಳೆಯರು ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಮರುಳ ಸಿದ್ದಪ್ಪನವರು ನಮ್ಮ ಶಾಲೆಯನ್ನ ಗುರುತಿಸಿ ಈ ಶಾಲೆಗೆ ಮಕ್ಕಳ ಸಂಪನ್ಮೂಲ ಕೇಂದ್ರವನ್ನ ಮಾಡಿ ಅಗತ್ಯ ಪಠ್ಯಪುಸ್ತಕಗಳು ಮತ್ತು ಪಠ್ಯೇತರ ಚಟುವಟಿಕೆಗಳನ್ನು ನೀಡಿರುವ ಸಂಸ್ಥೆಗೆ ನಾವು ಆಭಾರಿಯಾಗಿದ್ದೇವೆ ಎಂದು ತಿಳಿಸಿದರು ಸಂಪನ್ಮೂಲ ವ್ಯಕ್ತಿಯಾದ ನವೀನ್ ಆನೆದಿಬ್ಬ ಮಾತನಾಡಿ ಮಕ್ಕಳ ಸಂಪನ್ಮೂಲ ಕೇಂದ್ರಕ್ಕೆ ನೀಡಿರುವ ಪ್ರತಿಯೊಂದು ವಸ್ತುಗಳನ್ನು ಸದ್ಬಳಕೆ ಮಾಡಿಕೊಂಡು ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಅದೇ ರೀತಿಯಲ್ಲಿ ಇದರ ಜವಾಬ್ದಾರಿ ಶಾಲಾ ಶಿಕ್ಷಕರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಎಲ್ಲಾ ಪೋಷಕರ ಜವಾಬ್ದಾರಿ ಆಗಿರುತ್ತದೆ ಇದನ್ನು ಹಾಳಾಗದಂತೆ ಉಳಿಸಿಕೊಂಡು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ತಿಳಿಸಿದರು ವಿಮುಕ್ತಿ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಆರ್ಥಿಕ ಭಾನುರವರು ಇಂತಹ ಕಾರ್ಯಕ್ರಮ ಸಂಸ್ಥೆಯಿಂದ ಮಾಡುತ್ತಿರುವುದು ಶ್ಲಾಘನೀಯ ಎಲ್ಲರೂ ಇದನ್ನೂ ಬಳಸಿಕೊಳ್ಳೋಣ ಎಂದರು ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿತೈಷಿಗಳಾದಂತಹ ಡ್ಯಾನಿಯಲ್, ಬರ್ನಾದೇತ್, ವಿಮುಕ್ತಿ ಸಂಸ್ಥೆಯ ವಿಂದ್ಯಾ ಯೋಗೇಶ್, ಶಾಲೆಯ ಸಹ ಶಿಕ್ಷಕಿ ಸುದರ್ಶನಿ ವಿಮಕ್ತಿ ಸಂಸ್ಥೆಯಲ್ಲಿ ವಿವಿಧ ವಿಭಾಗಗಳಲ್ಲಿ ಶಿಕ್ಷಕಿರಾಗಿ ಕೆಲಸ ಮಾಡುತ್ತಿರುವ ಗೀತಾ ಕೆ ಆರ್, ಪ್ರಶಾಂತಿ, ರಮ್ಯಾ, ಶಶಿಕಲಾ, ಕವಿತಾ, ಗ್ರಾಮ ಪಂಚಾಯಿತಿ ಸದಸ್ಯರಾದ ಸರೋಜಾ ವಿಮುಕ್ತಿ ಸ್ವಸಹಾಯ ಸಂಘದ ಪದಾಧಿಕಾರಿಗಳು ಮತ್ತು ಮಹಿಳೆಯರು ಶಾಲಾ ಪೋಷಕರು, ಎಸ್ ಡಿ ಎಂ ಸಿ ಅಧ್ಯಕ್ಷರಾದ ಹರೀಶ್ ಪದಾಧಿಕಾರಿಗಳು ಉಪಸ್ಥಿತರಿದ್ದರು ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಇದ್ದರು.

About Author

Leave a Reply

Your email address will not be published. Required fields are marked *

You may have missed