ಶೃಂಗೇರಿಯ ಮಂಜುನಾಥಗೌಡರವರ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ “ಕನ್ನಡಕ್ಕಾಗಿ ದುಡಿದವರು”ಕಾರ್ಯಕ್ರಮ….
1 min read
ಕನ್ನಡದ ಕಟ್ಟಾಳು ; ಮಂಜುನಾಥಗೌಡ
ಶೃಂಗೇರಿ , ನವೆಂಬರ್ 2, ಕುರ್ಚಿ ಜೋಡಿಸಿ ಬ್ಯಾನರ್ ಕಟ್ಟುವುದು, ಅತಿಥಿಗಳನ್ನ ಬರಮಾಡಿಕೊಂಡು, ಕನ್ನಡಕ್ಕಾಗಿ ಬಾವುಟ ಹಿಡಿದು ಕನ್ನಡ ಕಟ್ಟಿದವರು ಮಂಜುನಾಥಗೌಡರು ಎಂದು ಕರ್ನಾಟಕ ವಿಕಾಸ ರಂಗದ ಅಧ್ಯಕ್ಷರಾದ ಕುಂದೂರು ಅಶೋಕ್ ತಿಳಿಸಿದರು.
ಇಂದು ಶೃಂಗೇರಿಯ ಮಂಜುನಾಥಗೌಡರವರ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ “ಕನ್ನಡಕ್ಕಾಗಿ ದುಡಿದವರು”ಕಾರ್ಯಕ್ರಮದಡಿಯಲ್ಲಿ ತೆರೆಮರೆಯಲ್ಲಿ ದುಡಿದ ಮಂಜುನಾಥಗೌಡರಿಗೆ ಅಭಿನಂದನೆ ಸಲ್ಲಿಸಿ, ಕನ್ನಡ ಪಂಡಿತರಾಗಿ ಸಂಬಳಕ್ಕೆ ಸೀಮಿತವಾಗದೆ ಕನ್ನಡ ಪರಿಚಾರಿಕೆ ಮಾಡಿದವರು ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದ ಪರಿಸರವಾದಿ ಹಾಗೂ ಲೇಖಕರಾದ ಕಲ್ಕುಳಿ ವಿಠ್ಠಲ್ ಹೆಗ್ಗಡೆ ಶೃಂಗೇರಿಯ ಎಲ್ಲಾ ಕನ್ನಡದ ಕೆಲಸಗಳಲ್ಲಿಯೂ ಮಂಜುನಾಥಗೌಡರು ಮುಂಚೂಣಿಯಲ್ಲಿ ಇರುತ್ತಾರೆ.
ಅವರೆಂದೂ ಸನ್ಮಾನ, ಪ್ರಶಸ್ತಿಗಾಗಿ ಕನ್ನಡದ ಪರಿಚಾರಿಕೆ ಮಾಡಿದವರಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶೃಂಗೇರಿ ಸುಬ್ಬಣ್ಣ,
ಹೆಚ್.ಎ.ಪ್ರಕಾಶ್ ಅಭಿನಂದನಾ ನುಡಿಗಳನ್ನು ಆಡಿದರು.ಕಾರ್ಯಕ್ರಮದಲ್ಲಿ,ಅಂಗುರುಡಿ ದಿನೇಶ್ ಸ್ವಾಗತಿಸಿದರು.ಛಾಯಾಪತಿ ಕಾರ್ಯಕ್ರಮ ನಿರೂಪಿಸಿ ಸಂತೋಷ್ ಕಾಳ್ಯವಂದಿಸಿದರು.

