लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎40 ವರ್ಷದ ಬಾವಿ ಜಲ ಸಮಾಧಿ……..

ಚಿಕ್ಕಮಗಳೂರು ಜಿಲ್ಲೆ. ಮೂಡಿಗೆರೆ ತಾಲ್ಲೂಕು. ಕಸಬಾ ಹೋಬಳಿಯ. ಹೆಸಗಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಳಗುಳ ಗ್ರಾಮದಲ್ಲಿ ಸುಮಾರು 40 ವರ್ಷಗಳ ಕಾಲ ಬಿಳಗುಳದ ಕೆ, ಎಂ, ರಸ್ತೆಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ,,, ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಇದ್ದ,, ಕಲ್ಲಿನ ಬಾವಿ  ಎರಡು ದಿನಗಳಿಂದ ಸುರಿದ ಬಾರಿ ಮಳೆಯಿಂದಾಗಿ,,, 40 ವರ್ಷದ ಬಾವಿ ಜಲ ಸಮಾಧಿ ಆಗಿ,,, ಬಿಳಗುಳ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದೆ,, ಕೆ, ಎಂ, ರಸ್ತೆಯ ಜನತೆ ಚಿಂತೆಯಲ್ಲಿ ಮುಳುಗಿದ್ದಾರೆ… ಸುಮಾರು 40 ವರ್ಷಗಳಿಂದ ನಮ್ಮ ದಾಹವನ್ನು ತೀರಿಸಿದ ಕುಡಿಯುವ ನೀರಿನ ಬಾವಿ ನಮಗಿಲ್ಲ,, ಮುಂದೇನು ನಮ್ಮ ಗತಿ ಎಂದು ಮನಸ್ಸಿನಲ್ಲಿ ಆಲೋಚನೆ ಮಾಡುತ್ತಿದ್ದಾರೆ,,

ಇದರ ಬಗ್ಗೆ ಸನ್ಮಾನ್ಯ ಶಾಸಕಿ ನಯನ ಮೋಟಮ್ಮ ಅಥವಾ ಸ್ಥಳೀಯ ಸರ್ಕಾರ ಹೆಸಗಲ್ ಗ್ರಾಮ ಪಂಚಾಯತಿ ಸೂಕ್ತ ಕ್ರಮ ಪರಿಹಾರ ಓದಗಿಸಿ ಜನತೆಗೆ ಅವಶ್ಯಕತೆ ಇರುವ ನೀರಿನ ಸಮಸ್ಯೆ ಬಗೆಹರಿಸುವರು ಎಂಬ ನಂಬಿಕೆಯಲ್ಲಿ ದಿನ ದೂಡುವಂತೆ ಆಗಿದೆ,,, ತಾಲ್ಲೂಕು ಮುಖ್ಯ ನಿರ್ವಾಹಣ ಅಧಿಕಾರಿ (E O ) ಸ್ಥಳಕ್ಕೆ ಭೇಟಿ ನೀಡಿ ಸಂಬಂದಿಸಿದ ಇಲಾಖೆಗೆ ಆದ ಅನಾಹುತದ ಬಗ್ಗೆ ಗಮನಕ್ಕೆ ತಂದು,, ಆದಷ್ಟು ಬೇಗ ಕೆ, ಎಂ, ರಸ್ತೆಯ ನಿವಾಸಿಗಳು ಮತ್ತು ವ್ಯಾಪಾರಸ್ಥರಿಗೆ ಆದಷ್ಟು ಬೇಗ ನೀರಿನ ವ್ಯವಸ್ಥೆ ಮಾಡುವರೇ ಎಂಬುದು ದೊಡ್ಡ ಪ್ರಶ್ನೆ ಆಗಿದೆ,  ಏನೇ ಇರಲಿ ಮೂಲ ಭೂತ ಸೌಕರ್ಯದಲ್ಲಿ ಕುಡಿಯುವ ನೀರು ಕೂಡ ಮುಖ್ಯವಾಗಿದೆ,, ಆದಷ್ಟು ಬೇಗ ಸ್ಥಳೀಯ ಸರ್ಕಾರ ಮತ್ತು ತಾಲ್ಲೂಕು ಆಡಳಿತ ಸರ್ಕಾರ ಊರಿಗೆ ನೀರಿನ ವ್ಯವಸ್ಥೆ ಮಾಡಲಿ ಎಂಬುದೇ ನಮ್ಮ ಮನವಿ,

‎ವರದಿ…

‎ಹಸೆನಾರ್ ಬಿಳಗುಳ….

ಸಮಾಜಸೇವಕ..

About Author

Leave a Reply

Your email address will not be published. Required fields are marked *

You may have missed