ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಬಿ.ಜೆ.ಪಿ. ಜೆಡಿಎಸ್ ಒಟ್ಟಾಗಿ ಸ್ಪರ್ಧೆ….
1 min read
ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಬಿ.ಜೆ.ಪಿ. ಜೆಡಿಎಸ್ ಒಟ್ಟಾಗಿ ಸ್ಪರ್ಧೆ
ಮೂಡಿಗೆರೆ ತಾಲ್ಲೂಕು
ಮೂಡಿಗೆರೆ: ನವೆಂಬರ್ 2ರಂದು ನಡೆಯಲಿರುವ ಮೂಡಿಗೆರೆ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ(ಟಿಎಪಿಸಿಎಂಎಸ್) ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಟಿ.ಎಂ. ಗಜೇಂದ್ರ ಹೇಳಿದರು.
ಅವರು ಮಂಗಳವಾರ ಮೂಡಿಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಟಿಎಪಿಸಿಎಂಎಸ್ ಚುನಾವಣೆ, ಹೆಚ್.ಡಿ.ದೇವೇಗೌಡರು, ಕುಮಾರಸ್ವಾಮಿ, ವರಿಷ್ಟರ ತೀರ್ಮಾನದಂತೆ 8 ಕ್ಷೇತ್ರ ಹೊಂದಾಣಿಕೆ ಜೆಡಿಎಸ್ ಕೆಲ ಸದಸ್ಯರು ಪಕ್ಷವಿರೋಧಿ ಚಟುವಟನೆ ಮತ್ತು ಗೊಂದಲ ಮೂಡಿಸುತ್ತಿದ್ದಾರೆ. ಮತದಾರರು ಕಿವಿಗೊಡಬಾರದು,
ಎನ್.ಡಿ.ಎ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಹೊಂದಾಣಿಕೆಯ, ಗ್ರಾಮ ಪಂಚಾಯಿತಿ
ಚುನಾವಣೆಯಿಂದ ಲೋಕಸಭಾ ಚುನಾವಣೆ ವರೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಬೇಕು ಎಂದು ವರಿಷ್ಟರು ತೀರ್ಮಾನ ಕೈಗೊಂಡಿದ್ದಾರೆ..
ವರಿಷ್ಟ ಪಕ್ಷದ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ದ ದೂರು ನೀಡುತ್ತೇವೆ. ಎರಡೂ ಪಕ್ಷ ಸೇರಿರುವುದ ರಿಂದ ಆನೆ ಬಲ ಬಂದಿದೆ. ಮೈತ್ರಿ ಪಕ್ಷವು ಎಲ್ಲಾ ಸ್ಥಾನಗಳನ್ನುಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.
ಬಾಳೂರು ಲಕ್ಷ್ಮಣಗೌಡ, ಹೂವಪ್ಪ, ಅಜಿತ್ ಬಾಳೂರು, ಅಶೋಕ್ ಗೌಡ, ಉತ್ತಮ್ ಹಂತೂರು,ಮಗ್ಗಲಮಕ್ಕಿ ರವಿ, ರೆಹಮಾನ್, ಸುರೇಂದ್ರ ಹ್ಯಾರಗುಡೆ, ನಿಡುವಾಳೆ ಚಂದ್ರು, ನೂರುಲ್ಲಾ, ಲೋಹಿತ್ .ಧರ್ಮೇಶ್, ಪ್ರಸನ್ನ, ಸಂದೇಶ್, ಮಂಜುನಾಥ್ ಮಡ್ಡಿಕೆರೆ, ರಘು ಉದುಸೆ ಇದ್ದರು.

