ಜಿಲ್ಲೆಯ 3 ಹಿರಿಯ ಸ್ಕೌಟರ್ಗಳಿಗೆ ರಾಜ್ಯಪಾಲರ ಪುರಸ್ಕಾರ…..
1 min read
ಜಿಲ್ಲೆಯ 3 ಹಿರಿಯ ಸ್ಕೌಟರ್ಗಳಿಗೆ ರಾಜ್ಯಪಾಲರ ಪುರಸ್ಕಾರ
ಚಿಕ್ಕಮಗಳೂರು. ಇತ್ತೀಚಿಗೆ ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ನಡೆದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯದ ರಾಜ್ಯಪಾಲರಾದ ಸನ್ಮಾನ್ಯ “ತಾವರ್ಚಂದ್ ಗೆಹಲೋಟ್ರವರು ಸೈಟ್ ಚಳುವಳಿಯಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವರಿಗೆ ಪ್ರಶಂಸನಾ ಪತ್ರ ಹಾಗೂ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಯಿತು.
ಜಿಲ್ಲೆಯ. ಹಿರಿಯ ಸ್ಕೌಟರುಗಳಾದ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್ ಷಡಕ್ಷರಿ.. ಜಿಲ್ಲಾ ಕಾರ್ಯದರ್ಶಿ ನೀಲಕಂಠಚಾರ್ಯ ಮತ್ತು ಜಿಲ್ಲಾ ತರಬೇತಿ ಆಯುಕ್ತ ಸಂದ್ಯಾರಾಣಿ ಇವರುಗಳಿಗೆ ದೀರ್ಘ ಹಾಗೂ ಉತ್ತಮ ಸೇವೆಗಾಗಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

