लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
16/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಕಲಿ ಪತ್ರಕರ್ತನ ಬಂದನ….ಮೂಡಿಗೆರೆ.
‎ಶ್ರೀಗಂಧ ಸಾಗಿಸುತ್ತಿದ್ದ ನಕಲಿ ಪತ್ರಕರ್ತ ಎಚ್.ಆರ್.ಮನ್ಸೂರ್ (48) ಇನ್ನೊಬ್ಬ ಆರೋಪಿ ಹ್ಯಾಂಡ್ ಪೋಸ್ಟ್ ನಿವಾಸಿ ಎಂ.ಕೆ.ಯೂಸೂಫ್ ಎಂಬುವವರನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, 15 ಸಾವಿರ ರೂ. ಮೌಲ್ಯದ 1.129 ಕೆಜಿ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ.
‎ಬುಧವಾರ ರಾತ್ರಿ ಹಂಡುಗುಳಿ ಸಮೀಪದ ನವಗ್ರಾಮದ ಬಳಿ ಬೈಕಿನಲ್ಲಿ ಇಬ್ಬರು ಶ್ರೀಗಂಧ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳ ತಂಡ ಬೈಕನ್ನು ಬೆನ್ನಟ್ಟಿ ಹಿಡಿದು ಪರಿಶೀಲಿಸುವಾಗ, ಶ್ರೀಗಂಧದ 8 ತುಂಡುಗಳು ಪತ್ತೆಯಾಗಿದೆ. ಆರೋಪಿಗಳಿಬ್ಬರು ಓಡಿ ತಪ್ಪಿಸಿಕೊಳ್ಳಲು ಪ್ರಯತಿಸಿದ್ದರು.
‎ಇಲಾಖೆ ಅಧಿಕಾರಿಗಳು, ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಜಿ.ಮಂಜುನಾಥ್, ಡಿಆರ್ ಎಫ್‌ಓ ಅಶ್ವಥ್, ಸಿಬ್ಬಂದಿಗಳಾದ ಜೆ.ಜಿ.ಉಮೇಶ್, ಎ.ಎಸ್.ಸುರೇಶ್, ಸುಮಂತ್ ನವರಾಜ್ ಇದ್ದರು.
ಶ್ರೀಗಂಧ ಬಂಧನಕೊಳ್ಳಗಾಗಿರುವ ಎಚ್.ಆರ್.ಮನ್ಸೂರ್ ಎಂಬಾತ  ಹಾಸನದ ಸ್ಥಳಿಯ ಪತ್ರಿಕೆಯೊಂದರ ವರದಿಗಾರನೆಂದು ಹೇಳಿಕೊಂಡು ಅಧಿಕಾರಿಗಳನ್ನು ಬೆದರಿಸಿ ಅಕ್ರಮ ದಂಧೆ ನಡೆಸುತ್ತಿದ್ದ ಆರೋಪಗಳು ಕೇಳಿ ಬಂದಿತ್ತು.

ಅಧಿಕಾರಿಯೊಬ್ಬರ ಹಣಕ್ಕೆ ಬೇಡಿಕೆ ಇಟ್ಟಿದ್ದ ದಿಕ್ಕು ತೋಚದ ಅಧಿಕಾರಿ ಈತನ ಮಾತಿಗೆ ಮರುಳಾಗಿ 22 ಸಾವಿರ ರೂ. ಹಣ ನೀಡಿದ್ದರು. ಆತ ಪತ್ರಕರ್ತ ನಲ್ಲದಿದ್ದರೂ ತಾಲೂಕು ಪತ್ರಕರ್ತರ ಸಂಘದಲ್ಲಿ ಗುರುತಿಸಿಕೊಂಡಿದ್ದ, ಆತನ ದಂಧೆಯ ಬಗ್ಗೆ ತಿಳಿದುಕೊಂಡ ಪತ್ರಕರ್ತರ ಸಂಘದ ಪ್ರತಿನಿಧಿಗಳು ಆತನನ್ನು ಕಳೆದವಾರ ಸಂಘದಿಂದ ಹೊರ ಹಾಕಿದ್ದರು. ಆತನ ಕಾರು ಮತ್ತು ಬೈಕಿಗೆ ಪ್ರೆಸ್ ಎಂದು ಬರೆಸಿಕೊಂಡಿದ್ದ ಅದೆ ಬೈಕಿನಲ್ಲಿ ಶ್ರೀಗಂಧ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಇಂತಹ ನಕಲಿ ಪತ್ರಕರ್ತನ ಅವಾಂತರದಿಂದಾಗಿ ಪ್ರಾಮಾಣಿಕ ಪತ್ರಕರ್ತರನ್ನು ಸಾರ್ವಜನಿಕರು ಕೆಟ್ಟ ದೃಷ್ಟಿಯಲ್ಲಿ ನೋಡುವಂತಾಗಿದೆ.

About Author

Leave a Reply

Your email address will not be published. Required fields are marked *

You may have missed