ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಚಿಕ್ಕಮಗಳೂರು :….
1 min read
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಚಿಕ್ಕಮಗಳೂರು :
ಬೆಳಿಗ್ಗೆ 9.30 ಗೆ ತಾಲ್ಲೂಕು ಕಚೇರಿಯಿಂದ ಕುವೆಂಪು ಕಲಾ ಮಂದಿರಕ್ಕೆ ಮೆರವಣಿಗೆ ವಿಜೃಂಭ್ರಣೆಯಿಂದ ನೆರವೇರಿತು
ಮೊದಲಿಗೆ ಶಿಶುನಾಳ ಶರೀಫರ ತತ್ವಪದ ಪ್ರಾರ್ಥನೆ,, ನಂತರ ನಾಡಗೀತೆ,,, ನಂತರ ದೀಪ ಬೆಳಗಿಸುವ ಮೂಲಕ ಪ್ರಾರಂಭವಾಯಿತು,,, ಕಾರ್ಯಕ್ರಮದಲ್ಲಿ ಚಿಕ್ಕ ಮಗಳೂರಿನ ಮಾನ್ಯ ಶಾಸಕರಾದ ತಮ್ಮಯ್ಯ ನವರು ಅಧ್ಯಕ್ಷತೆ ವಹಿಸಿಕೊಂಡಿದ್ದರು,, ವಾಲ್ಮೀಕಿ ಜಯಂತಿಯ ಕುರಿತು ಮಾತಾಡಿದರು,,,ವಿಧಾನ ಪರಿಷತ್ ಮಾನ್ಯ ಶಾಸಕರು ಸಿ.ಟಿ ರವಿ ಯವರು ಉದ್ಘಾಟಿಸಿದರು,, ಜಾತಿ ಭೇದ ಮಾಡಬೇಡಿ ಮಾಡಿದರೆ,, ಶ್ರೀರಾಮನಿಗೆ ನೀವು ಮಾಡಿದ ಪೂಜೆ ಸಲ್ಲುವುದಿಲ್ಲ,,, ರಾಷ್ಟ್ರದ ಶ್ರೇಷ್ಠ ನಾಯಕ ಶ್ರೀರಾಮ ಎಂದು ಹೇಳಿದರು,,, ನಂತರ ಡಾ:. ಶ್ರೀಪತಿ ಹಲಗುಂದ(ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು ಶಿವಮೊಗ್ಗ)ಶ್ರೀರಾಮ ಶ್ರೇಷ್ಠ ನಾಯಕರಾದರೆ,,, ಮಹರ್ಷಿ ವಾಲ್ಮೀಕಿ ಮಹಾ ಶ್ರೇಷ್ಠರು ಎಂದು ರಾಮಾಯಣದ ಕಥೆಯನ್ನು ಸವಿಸ್ತಾರವಾಗಿ ಹೇಳಿದರು,,, ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಭೀಮಪ್ಪರವರು ಅತಿಥಿ ಭಾಷಣ ಮಾಡಿ,,, ವಿಶ್ವದ ಮೊಟ್ಟ ಮೊದಲ ಸಂಸ್ಕೃತಿ ವಿದ್ವಾಂಸ ರು ವಾಲ್ಮೀಕಿ ಮಹರ್ಷಿಗಳು ಎಂದು ಹೇಳಿದರು,,, ನಂತರ ವಾಲ್ಮೀಕಿ ಸಮಾಜದ ಯುವ ನಾಯಕ ಕೋಟೆ ಜಗದೀಶ್ ರವರು,,, ವಾಲ್ಮೀಕಿ ಸಮಾಜದ ಕುಂದು ಕೊರತೆಗಳನ್ನು ಹೇಳಿದರು,,, ಪ್ರಥಮ ಧರ್ಜೆಯ ವಿದ್ಯಾರ್ಥಿಗಳಿಗೆ,,, ಉತ್ತಮ ಅಂಕ ಗಳಿಸಿದವರಿಗೆ ಒಂದು ಲಕ್ಷ ರೂ. ಗಳ ಚೆಕ್ ವಿತರಣೆ ಮಾಡಲಾಯಿತು,,, ವೇದಿಕೆಯಲ್ಲಿ,, ರಾಧಾಕೃಷ್ಣನ್, ಹರೀಶ್ ಮಿಶ್ರ, ಹುಣಸೆ ಮಕ್ಕಿ ಲಕ್ಷ್ಮಣ್, ಶ್ರೀಮತಿ ರೇಷ್ಮಾ ರವರು (ತಹಶೀಲ್ದಾರ್),,, ಎಲ್ಲಾ ಸಂಘದ ಮುಖಂಡರುಗಳು,,, ಪದಾಧಿಕಾರಿಗಳು,,, ಶಾಲೆಯ ಮಕ್ಕಳು ಭಾಗವಸಿದ್ದರು,,, ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ರೂಪರವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು,,
ವರದಿ….
ಭಾರಥಿಉಮೇಶರಾಜಅರಸು.
ಚಿಕ್ಕಮಗಳೂರು..



