ಅಕ್ಟೋಬರ್ 2 ರಂದು ರಾಷ್ಟ್ರದ ಇಬ್ಬರು ನಾಯಕರ ಜನುಮದಿನ…..
1 min read
ಅಕ್ಟೋಬರ್ 2 ರಂದು ರಾಷ್ಟ್ರದ ಇಬ್ಬರು ನಾಯಕರ ಜನುಮದಿನ

ಗಾಂಧಿ ಮತ್ತು ಪಂಡಿತ್ ಲಾಲ್ ಬಹುದ್ದೂರ್ ಶಾಸ್ತ್ರಿಜಿ ಅವರ ಉಪವಾಸ ಹಿಂದೂಗಳ ಮೇಲೆ ದೇಶದ ಮೇಲೆ ಬೀರಿದ ದುಷ್ಪರಿಣಾಮ
ಮತ್ತು ಪರಿಣಾಮ.. ನಿರ್ಣಯ ನಿಮಗೆ ಬಿಟ್ಟ ವಿಚಾರ
1947 ಆಗಸ್ಟ್ 14 ರಂದು ಮತೀಯ ಆದರದಲ್ಲಿ ಭಾರತ ದೇಶ ವಿಭಜನೆ ಆಗಿ ಪಾಕಿಸ್ತಾನ ಅನ್ನುವ ಇಸ್ಲಾಮಿಕ್ ಭಯೋತ್ಪದನ ದೇಶ ರಚನೆ ಆಯಿತು. ಈ ಸಂದರ್ಭದಲ್ಲಿ ಎರಡು ದೇಶದ ಒಡಂಬಡಿಕೆಯಂತೆ ಸಂಪತ್ತು ಹಂಚಿಕೆ ಪ್ರಕಾರ ಪಾಕಿಸ್ತಾನಕ್ಕೆ ಭಾರತ ಅಂದು 75 ಕೋಟಿ ರೂಪಾಯಿ ಯನ್ನು ಕೊಡಬೇಕಾಗಿತ್ತು
ಪಾಕಿಸ್ತಾನದ ಜನರ ಮಾನಸಿಕತೆ ಪರಿಚಯವಿದ್ದ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಕಾಶ್ಮೀರ ವಿಷಯ ಪರಿಹಾರ ಆಗುವವರೆಗೂ ಈ ದುಡ್ಡನ್ನು ಕೊಡುವುದಕ್ಕೆ ವಿರೋಧ ವ್ಯಕ್ತ ಪಡಿಸಿದ್ದರು, ಆದರು ಆಗಸ್ಟ್ 15 ರಂದು 20 ಕೋಟಿರೂ ಹಣವನ್ನು ಪಾಕಿಸ್ತಾನಕ್ಕೆ ನಮ್ಮ ದೇಶದ ಅಂದಿನ ಸರ್ಕಾರ ಕೊಟ್ಟಿತ್ತು, ಇನ್ನು 55 ಕೋಟಿ ಹಣವನ್ನು ಸರ್ದಾರ್ ವಲ್ಲಭಾಯಿ ಪಟೇಲ್ ಅವರ ತೀವ್ರ ಪ್ರತಿರೋದದ ಕಾರಣ ತಡೆ ಹಿಡಿಯಲಾಯಿತು. ಅಕಸ್ಮಾತ್ ಈ ಹಣ ಕೊಟ್ಟರೆ ಪಾಕಿಸ್ತಾನ ಈ ಹಣ ದಿಂದ ಭಾರತದ ಮೇಲೆ ಯುದ್ಧ ಮಾಡುತ್ತದೆ, ಕಾಶ್ಮೀರ ದಲ್ಲಿ ಹಿಂದೂಗಳ ಮಾರಣ ಹೋಮ ಮಾಡಿಸಿ ಮತಾಂತರ ಮುಖಾಂತರ ಅಲ್ಲಿ ಜನಸಂಖ್ಯೆ ಯನ್ನ ಬದಲಾವಣೆ ಮಾಡಿ ಅಲ್ಲಿ ಅಲ್ಲೋಲ ಕಲ್ಲೋಲ ಮಾಡುವ ಹುನ್ನಾರದ ಮಾಹಿತಿ ಇದ್ದದ್ದರಿಂದ ಈ ಹಣ ಕೊಡುವುದಕ್ಕೆ ಅವರ ವಿರೋಧ ವಿತ್ತು, ತಡೆಹಿಡಿಯಲಾಯಿತು
ಇಂತ ಸಂಧಿಗ್ದ ಸಂದರ್ಭದಲ್ಲಿ ಪ್ರವೇಶ ಆಗಿದ್ದೆ ಆ
ಮೋಹನ್ ಕರಮ್ ಚಂದ್ ಗಾಂಧಿ
ಅದಾಗಲೇ ಖಿಲಾಫಾತ್ ಚಳುವಳಿ ಯ ನೆಪದಲ್ಲಿ ಮುಸ್ಲಿಂ ಭಯೋತ್ಪಾದಕರು ಭಾರತ ದೇಶದಲ್ಲಿ ಹಿಂದೂಗಳ ಮೇಲೆ ನಡೆಸಿದ ಅತ್ಯಾಚಾರ ನರಮೇಧ, ಮೊಪ್ಲ ದಂಗೆಯಲ್ಲಿ ಹಿಂದೂಗಳ ಮೇಲೆ ನಡೆದ ಹತ್ಯಾಕಾಂಡ, ದೇಶ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ದೇಶದಲ್ಲಿ ಹಿಂದೂಗಳ ಮೇಲೆ ಆದ ಹತ್ಯಾಕಾಂಡ, ಅದರಲ್ಲೂ ದೇಶದ ಬಂಗಾಳ ಮತ್ತು ದೆಹಲಿ ಈ ಭಾಗದಲ್ಲಿ ಮುಸ್ಲಿಂ ಆಕ್ರಮಣಕ್ಕೆ ಹಿಂದೂಗಳು ಕೊಟ್ಟ ಪ್ರತ್ಯುತ್ತರ ಕ್ಕೆ ಗಾಂಧಿ ಅವರು ತೆಗದುಕೊಂಡ ನಿರ್ಣಯ ಹಿಂದು ಸಮಾಜಕ್ಕೆ ಗಾಯದಮೇಲೆ ಉಪ್ಪು ಸವರಿದಂತೆ ಆಗಿತ್ತು ಇದರ ಜೊತೆ ಆ ಸಂದರ್ಭದಲ್ಲಿ ದೇಶಕ್ಕೆ ಮತ್ತೊಂದು ಅಘಾತ ಕೊಟ್ಟರು
ಪಾಕಿಸ್ತಾನಕ್ಕೆ ಕೊಡಬೇಕಾದ 55 ಕೋಟಿ ರೂ ಹಣವನ್ನು ಕೊಡುವವರೆಗೂ 1948 ಜನವರಿ ಯಂದು ಅಮರಣಾoತ ಉಪವಾಸ ಸತ್ಯಾಗ್ರಹ ಕೂತರು. ಭಾರತದ ವಿರುದ್ಧ, ಭಾರತ ಸರ್ಕಾರದ ವಿರುದ್ಧ,
ಗಾಂಧಿ ಅವರನ್ನು ಸಂಪರ್ಕಿಸಿ ಪಾಕಿಸ್ತಾನಕ್ಕೆ ಈಗ ದುಡ್ದುಕೊಟ್ಟರೆ ಮುಂದೆ ಆಗಬಹುದಾದ ಅಪಾಯದ ಬಗ್ಗೆ ಮನವರಿಕೆ ಮಾಡಿಕೊಟ್ಟರು ಸಹ ಅವರು ತಮ್ಮ ಹಠ ಬಿಡಲಿಲ್ಲ, ಇದರಿಂದ ಒತ್ತಡಗಳಿಗೆ ಒಳಗಾದ ಭಾರತ ಸರ್ಕಾರ ದ ಗೃಹ ಮಂತ್ರಿ ಸರ್ದಾರ್ ವಲ್ಲಭಾಯಿ ಪಟೇಲ್ ಪಾಕಿಸ್ತಾನಕ್ಕೆ 1948 ಜನವರಿ 15 ರಂದು ಒಲ್ಲದ ಮನಸ್ಸಿನಿಂದ ಹಣ ಬಿಡುಗಡೆ ಮಾಡಿದರು
ಅದಾಗಲೇ ಭಾರತದ ಕಾಶ್ಮೀರದಮೇಲೆ ಅಕ್ಟೋಬರ್ 1947 ರಿಂದ ಯುದ್ಧ ಶುರು ಮಾಡಿದ್ದ ಪಾಕಿಸ್ತಾನಕ್ಕೆ ಈ ದುಡ್ಡು ಶಕ್ತಿ ತುಂಬಿತು ಈ ಯುದ್ಧ 1949 ಜನವರಿ ವರೆಗೂ ನಡೆಯಿತು, ಲಷ್ಕರ ಎಂಬ ಇಸ್ಲಾಮಿಕ್ ಉಗ್ರವಾದಿ ಸಂಘಟನೆ ರಚನೆ ಮಾಡಿ ಆದರ ಮುಖಾಂತರ ಜಮ್ಮು ಕಾಶ್ಮೀರ ದಲ್ಲಿ ಹಿಂದೂಗಳ ನರಮೇಧ ನಡೆಸಲು ಕಾರ್ಯತಂತ್ರ ರೂಪಿಸಿ ಕಾರ್ಯಚರಣೆ ಮಾಡಿತ್ತು.ಇದರಲ್ಲಿ ಹಿಂದು ವನವಾಸಿಗಳು ಹಿಂದು SC ಗಳು ಕೃಷಿ ಕಾರ್ಮಿಕರು ಕೃಷಿಕರು, ಗುಡಿ ಕೈಗಾರಿಕೆ ಗಾರರು, ಗಾರೆಯವರು, ಬಡಗಿಗಳು ಕುಂಬಾರರು, ಬೀದಿಬದಿ ವ್ಯಾಪಾರಿಗಳು, ಚಿನ್ನಬೆಳ್ಳಿ ವ್ಯಾಪಾರಿಗಳು ಒಟ್ಟು ಹಿಂದೂಗಳ ಎಲ್ಲರ ಬದುಕು ಈ ಮತಾಂದರಿಂದ ನಾಶವಾಯಿತು.
ಈ ಸಂದರ್ಭದಲ್ಲಿ ಜಮ್ಮು ಕಾಶ್ಮೀರ ದ 3 ನೆ 1 ಭಾಗ ಪಾಕ್ ಆಕ್ರಮಿತ ಕಾಶ್ಮೀರ ಆಯಿತು,ಇಂದಿಗೂ ಸಹ.
ಜನವರಿ 30 1948 ರಂದು ಗಾಂಧಿ ಹತ್ಯೆ ಆಯಿತು
ಈ ಉಪವಾಸಜಮ್ಮು ಕಾಶ್ಮೀರದ ಹಿಂದು ಸಮಾಜದ, ದೇಶದ ಮೇಲೆ ಬೀರಿದ ಪ್ರಭಾವದ ನಿಮ್ಮ ಅನಿಸಿಕೆಗೆ ಬಿಟ್ಟ ವಿಚಾರ
1965 ರಲ್ಲಿ ಪಾಕಿಸ್ತಾನ ಭಾರತದ ಮೇಲೆ ಮತ್ತೊಮ್ಮೆ ಯುದ್ಧ ಸಾರುತ್ತದೆ, ಅದಕ್ಕೆ ಇಂತ ದುಸ್ಸಾಹಾಸ ಮಾಡಲು ಪ್ರೇರಣೆ ಸಿಕ್ಕಿದ್ದೇ 1962 ರಲ್ಲಿ ಚೀನಾ ನಮ್ಮ ಮೇಲೆ ಯುದ್ಧ ಮಾಡಿ ನಮ್ಮ ದೇಶ ಅಂದಿನ ವಿಫಲ ದುರ್ಬಲ ನಾಯಕತ್ವದ ಫಲವಾಗಿ ಆ ಯುದ್ಧವನ್ನು ಹೀನಾಯವಾಗಿ ಸೋಲಬೇಕಾಯಿತು, ಅಂದಿನ ಯುದ್ಧದಿಂದ ಚೇತರಿಸಿಕೊಳ್ಳುತ್ತಿದ್ದ ದೇಶದ ಮೇಲೆ ಯುದ್ಧ ಮಾಡಿ ಜಮ್ಮು ಕಾಶ್ಮೀರ ವನ್ನು ಹಾಗು ಭಾರತದ ಇನ್ನು ಕೆಲವು ಭೂ ಭಾಗವನ್ನು ವಶಪಡಿಸಿ ಕೊಳ್ಳಬಹುದು ಅನ್ನುವ ಪಾಕಿಸ್ಥಾನದ ಲೆಕ್ಕಾಚಾರ, ಅಂದು ದೇಶದ ಪ್ರಾಧಾನಿ ಆಗಿದ್ದು
ಸನ್ಮಾನ್ಯ ಶ್ರೀ ಪಂಡಿತ್ ಲಾಲ್ ಬಹುದ್ದೂರ್ ಶಾಸ್ತ್ರಿ ಅವರು, (ಜೂನ್ 9 1964 ಪ್ರಧಾನ ಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ್ದು ) 1964-65 ರ ಸಮಯದಲ್ಲಿ ದೇಶದ ಆಹಾರ ಉತ್ಪಾದನೆ ಶೇಕಡಾ 20 % ರಷ್ಟು ಕುಸಿದಿತ್ತು, ಇಂತ ಸಮಯದಲ್ಲಿ ಪಾಕಿಸ್ತಾನ 1965 ರಂದು ಭಾರತದ ಮೇಲೆ ಪೂರ್ಣ ಪ್ರಮಾಣ ದ ಯುದ್ಧ ಘೋಷಣೆ ಮಾಡಿತು, ಅಂದು ಪಾಕಿಸ್ತಾನಕ್ಕೆ ಅಮೇರಿಕ ದಿಂದ ಕೊಡಮಾಡಲ್ಪಟ್ಟ ಅತ್ಯಾಧುನಿಕ ಶಸ್ತ್ರಾಸ್ತ್ರ ಗಳಿದ್ದವು, ಏಶಿಯ ಖಂಡದ ದಕ್ಷಿಣ ಭಾಗದಲ್ಲಿ ಅಮೇರಿಕಗೆ ಒಂದು ಮಿಲಿಟರಿ ನೆಲೆ ಬೇಕಿತ್ತು ರಷ್ಯಾ ವನ್ನು ಹಣಿಯಲು. ಹಂಗಾಗಿ ಅಮೇರಿಕಾ ಪಾಕಿಸ್ತಾನ ವನ್ನ ತನ್ನ ಪಾಲುದಾರ ರಾಷ್ಟ್ರವನ್ನಾಗಿ ಮಾಡಿಕೊಂಡಿತ್ತು, ಅಂದಿನ ಯುದ್ಧದಲ್ಲಿ ಅಮೇರಿಕ ನಿರ್ಮಿತ ಅತ್ಯಾದುನಿಕ ಪ್ಯಾಟನ್ ಎಂಬ ಯುದ್ಧ ಟ್ಯಾಂಕ್ ಇತ್ತು ನಮ್ಮಲ್ಲಿ ಇದ್ದದ್ದು ಬ್ರಿಟಿಷ್ ಬಿಟ್ಟುಹೋದ ಯುದ್ಧ ಸಾಮಾಗ್ರಿಗಳು, ಅವುಗಳನ್ನ ಸಂದರ್ಭಕ್ಕೆ ತಕ್ಕಂತೆ ಬದಲಾವಣೆ ಮಾಡಲಿಲ್ಲ ಹಾಗು ಉನ್ನತಿಕರಣ ಮಾಡಲಿಲ್ಲ
ಇದೆ ಯುದ್ಧದಲ್ಲಿ ಅಮೇರಿಕ ನಿರ್ಮಿತ 7 ಪ್ಯಾಟನ್ ಯುದ್ಧ ಟ್ಯಾಂಕ್ ಗಳನ್ನ ನಮ್ಮ ದೇಶದ ಸೈನಿಕ ಹವಾಲ್ದಾರ್ ಅಬ್ದುಲ್ ಹಮೀದ್ ತನ್ನ ಜೀಪಿನಲಿ ಅಳವಡಿಸಿದ್ದ ರಿಕಾಲ್ ಎಂಬ ಸಣ್ಣ ಮಟ್ಟದ ರಾಕೆಟ್ ಲಾಂಛರ್ ಇಂದ ಸುಟ್ಟು ಭಸ್ಮ ಮಾಡಿ ಕೊನೆಯಲ್ಲಿ 8 ನೆ ಟ್ಯಾಂಕ್ ಹೊಡೆಯುವ ಸಂದರ್ಭದಲ್ಲಿ ಟ್ಯಾಂಕರ್ ಇಂದ ಸಿಡಿದ ಶೆಲ್ ದಾಳಿಗೆ ಹುತಾತ್ಮ ರಾಗುತ್ತಾರೆ, ನಂತರ ಅವರಿಗೆ ಸೈನ್ಯದ ಅತ್ಯುನ್ನತ ಗೌರವ ಪರಂವೀರ್ ಚಕ್ರ ಗೌರವವನ್ನು ಮರಣೋತ್ತರ ಪ್ರಧಾನ ಮಾಡಲಾಗುತ್ತದೆ
ಈ ಯುದ್ಧವನ್ನು ಅಂದಿನ ಪ್ರಧಾನ ಮಂತ್ರಿ ಪಂಡಿತ್ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಸಮರ್ಥ್ಯ ನಾಯಕತ್ವ ದೇಶದ ಸೈನಿಕರ ಪೌರುಷ ದಿಂದ ಭಾರತ ಗೆದ್ದುಕೊಂಡಿತು
ಆ ಸಂದರ್ಭದಲ್ಲಿ ಭಾರತದ ಭೂ ಭಾಗವನ್ನು ಸುಲುಭವಾಗಿ ಕಸಿದುಕೊಳ್ಳಬಹುದು ಅನ್ನುವ ಲೆಕ್ಕಾಚಾರದಿಂದ ಬಂದ ಪಾಕಿಸ್ತಾನ ತನ್ನ ಪ್ರಮುಖ ಭೂ ಭಾಗ ಲಾಹೋರ್ ಅನ್ನು ಕಳೆದುಕೊಳ್ಳುವ ಮಟ್ಟಕ್ಕೆ ಬಂದಿತು, ಅಮೇರಿಕದ ಕಾಲು ಹಿಡಿದುಕೊಂಡಿತು ಭಾರತಕ್ಕೆ ಶಾಂತಿ ಮಾತುಕತೆ ಕದನ ವಿರಾಮಕ್ಕೆ ಅಮೇರಿಕ ಒತ್ತಡ ಹಾಕಿತು, ಈ ಸಂದರ್ಭದಲ್ಲಿ ಅಮೇರಿಕ ಯಾವ ಯಾವ ದೇಶ ಆಹಾರ ಉತ್ಪಾದನೆ ಯಲ್ಲಿ ಕೊರತೆ ಅನುಭವಿಸುತ್ತಿದ್ದವೊ ಅ ದೇಶಗಳಿಗೆ ಶಾಂತಿಗಾಗಿ ಆಹಾರ ಅನ್ನುವ ಪಬ್ಲಿಕ್ ಲಾ 480 ಎಂಬ ಕಾಯ್ದೆ ಪ್ರಕಾರ ಅಮೇರಿಕ ತನ್ನಲ್ಲಿನ ಗೋದಿ ಮತ್ತಿತರ ಆಹಾರ ಉತ್ಪನ್ನ ಗಳನ್ನ ಮಾರುಕಟ್ಟೆ ದರಕ್ಕಿಂತ ಕಮ್ಮಿ ದರದಲ್ಲಿ ಕೊಡುವ ಮಾನವೀಯತೆ ಹೆಸರಲ್ಲಿ ಆಹಾರ ದಾನ್ಯ ವನ್ನು ಸರಬರಾಜು ಮಾಡುತಿತ್ತು. ನೋಡಲು ಮಾನವೀಯತೆ ದೃಷ್ಟಿ ಕಂಡರು ಅಲ್ಲಿ ಅಮೇರಿಕ ದಲ್ಲಿ ಜಾಸ್ತಿ ಆಗಿದ್ದ ಆಹಾರ ಉತ್ಪಾದನೆ ಯನ್ನ ಬೇರೆ ದೇಶಗಳಿಗೆ ಕಮ್ಮಿ ದರದಲ್ಲಿ ಕೊಟ್ಟು ಅಲ್ಲಿಯ ಮಾರುಕಟ್ಟೆಯನ್ನ ತನ್ನ ಹಿಡಿತದಲ್ಲಿ ಇಟ್ಟುಕೊಂಡು ತನ್ನ ಮೇಲೆ ಸದಾ ಅವಲಂಬಿತ ರಾಗಿರಬೇಕು ಅನ್ನುವ ಒಂದು ದೂರಾಲೋಚನೆ, ಹಾಗೆ ಅಂದು ಆಹಾರ ದಾನ್ಯಗಳ ಉತ್ಪಾದನೆ ಕುಂಟಿತ ಗೊಂಡಿದ್ದ ನಮ್ಮ ದೇಶವು ಅಮೇರಿಕ ದಿಂದ PL 480 ಅಡಿಯಲ್ಲಿ ಆಹಾರ ದಾನ್ಯ ತರಿಸಿಕೊಳ್ಳುತಿತ್ತು,( ಸ್ವತಂತ್ರ ಬಂದಾಗ ಅಂದಿನ ಸರ್ಕಾರದ ಯೋಜನೆ ಕೆಲವು ಚೆನ್ನಾಗಿದ್ದವು ಆದರೆ ಆದರ ಅನುಷ್ಠಾನ ಕ್ಕೆ ಬೇಕಾದ ಯೋಚನೆ ಆಲೋಚನೆ ಇಚ್ಚಾ ಶಕ್ತಿ ಇಲ್ಲದ ಕಾರಣ ಬರಗಾಲ ದ ಕಾರಣ ಭಾರತ ಅಭಿವೃದ್ಧಿ ವಿಚಾರದಲ್ಲಿ ತಾನು ಸಾಗ ಬೇಕಾದ ವೇಗದಲ್ಲಿ ಸಾಗಲು ಸಾಧ್ಯವಾಗಲಿಲ್ಲ. ದುರ್ಬಲ ವಿದೇಶಾಂಗ ನೀತಿ ರಕ್ಷಣಾ ನೀತಿ ಆರ್ಥಿಕ ನೀತಿ, ಆಡಳಿತ ವೈಫಲ್ಯದಿಂದ ಹೇಗೆ ದುರ್ಬಲ ದೇಹ ಹಲವು ಕಾಯಿಲೆಗೆ ಬೇಗ ತುತ್ತಾಗುವುದೊ ಹಾಗೆ ದುರ್ಬಲ ನಾಯಕತ್ವದ ದೇಶ ಹಲವು ಸಮಸ್ಯೆಗೆ ತುತ್ತಾಗಿತ್ತು, ದೇಶದ )
ಯುದ್ಧದ ಸಮಯದಲ್ಲಿ ಅಮೇರಿಕ ತನ್ನ ಪರಮಾಪ್ತ ದೇಶ ಪಾಕಿಸ್ತಾನ ದ ಪರವಾಗಿ ಭಾರತದೇಶಕ್ಕೆ ಕೊಡುತಿದ್ದ ಅಂದರೆ ಮಾರುತಿದ್ದ ಗೋದಿ ಯನ್ನ ನಿಲ್ಲಿಸುವುದಾಗಿ ಬೆದರಿಸಿತು., ಈ ಘಟನೆ ಇಂದ ಎಚ್ಚತ್ತ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರೀಜಿ ಕೃಷಿ ವಲಯದ ತಜ್ಞರನ್ನು ಕರೆದು ದೇಶದಲ್ಲಿ ತಕ್ಷಣ ಆಹಾರದಲ್ಲಿ ಬೇರೆ ದೇಶದ ಅವಲಂಬನೆ ಕಡಿಮೆ ಮಾಡಲು, ಸ್ವಾವಲಂಬನೆಸಾಧಿಸಲು ಸಲಹೆ ಕೇಳಿದಾಗ, ವಾರದಲ್ಲಿ ಒಂದು ಹೊತ್ತಿನ ಊಟ ದೇಶದ ಜನ ಮಾಡದೆ ಬಿಟ್ಟರೆ ಉಳಿದ ಆಹಾರವನ್ನ ಹಸಿದ ಉಳಿದವರಿಗೆ ಹಂಚಬಹುದು ಅನ್ನುವ ಸಲಹೆ ಕೊಡುತ್ತಾರೆ ಹಾಗೆ ತಕ್ಷಣ ತನ್ನ ಮನೆಯಲ್ಲೇ ಈ ವ್ಯವಸ್ಥೆ ಜಾರಿಗೆ ತರುತ್ತಾರೆ, ತನಗೆ ಸರ್ಕಾರದಿಂದ ಬರುವ ಬಹುತೇಕ ಸೌಲಭ್ಯ ವನ್ನು ನಿಲ್ಲಿಸುತ್ತಾರೆ, ಹಾಗೆ ಒಂದು ವಾರದ ನಂತರ ಈ ಪ್ರಯೋಗ ತನ್ನ ಮನೆಯಲ್ಲಿ ಯಶಸ್ವಿ ಆದ ನಂತರ ದೇಶದ ಜನರಿಗೆ ಆಲ್ ಇಂಡಿಯಾ ರೇಡಿಯೋ ಮುಖಾಂತರ ದೇಶದ ಜನರಿಗೆ ವಾರದಲ್ಲಿ ಸೋಮುವಾರದ ಒಂದು ದಿನದ( ವೃದ್ಧರು ಮಕ್ಕಳು ಅನಾರೋಗ್ಯ ಪೀಡಿತರು ಗರ್ಭಿಣಿಯರು ಹೊರತು ಪಡಿಸಿ) ರಾತ್ರಿ ಒಂದು ಹೊತ್ತು ದೇಶಕ್ಕಾಗಿ ಊಟ ಬಿಡುವಂತೆ ಮನವಿ ಮಾಡಿದರು, ದೇಶದ ಜನ ಅವರ ಮನವಿಗೆ ಪೂರ್ಣ ಪ್ರಮಾಣದಲ್ಲಿ ಸ್ಪಂದಿಸಿ ದರು,(ಅಂದಿನ ಅವರ ಈ ಕರೆಗೆ ಇತ್ತೀಚಿನ ಅಂದರೆ 35 ವರ್ಷಗಳ ಹಿಂದೆ ಪ್ರತಿ ಶನಿವಾರದಂದು ರಾತ್ರಿ ಊಟ ಬಿಡುತಿದ್ದನ್ನು ಹಾಸನದ ನನ್ನ ಸೋದರತ್ತೆ ಮನೆಯಲ್ಲಿ ನೋಡುತಿದ್ದೆ )
ಒಬ್ಬ ಶ್ರೇಷ್ಠ ನಾಯಕರ ಕರೆಗೆ ಯಾವತ್ತಿದ್ದರು ಜನ ಸ್ಪಂದಿಸುತ್ತಾರೆ
ಅಂದು ಆಹಾರ ದಾನ್ಯಗಳ ತಡೆ ಹಿಡಿಯುವುದಾಗಿ ಬೆದರಿಕೆವೊಡ್ಡಿದ ಅಮೇರಿಕ ಅಂತ ದೇಶಕ್ಕೆ ತನ್ನ ಉಪವಾಸ ಕರೆ ಇಂದ ದೇಶದ ಒಳಿತಿಗೆ ಉಪವಾಸ ಮಾಡಿದ ಅಂದಿನ ಪ್ರಧಾನ ಮಂತ್ರಿ ಪಂಡಿತ್ ಲಾಲ್ ಬಹುದ್ದೂರ್ ಶಾಸ್ತ್ರಿ ಯವರ ಉಪವಾಸ ಪರಿಣಾಮ ದೇಶದ ಜನರ ಮೇಲೆ ಅಂತರ್ರಾಷ್ಟ್ರೀಯ ಸಂಚಿನ ಮೇಲೆ ಎಂತ ಪರಿಣಾಮ ಬೀರಿತು
ಇನ್ನು ಗಾಂಧಿ ಯವರ ಉಪವಾಸ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಉಪವಾಸ ಹಿಂದು ಸಮಾಜದ ಮೇಲೆ ದೇಶದ ಮೇಲೆ ಬೀರಿದ ದುಷ್ಪರಿಣಾಮ, ಪರಿಣಾಮ ದ ಬಗ್ಗೆ ನಿರ್ಣಯ ನಿಮ್ಮದೆ
✍️ ಅವರೇಕಾಡು ಪೃಥ್ವಿ

