ಲೈಸನ್ಸ್ ಇಲ್ಲದೆ ವಾಹನ ಚಲಾಯಿಸಿದರೆ ಬೀಳುತ್ತೆ ದುಬಾರಿ ದಂಡ……
1 min read
ಲೈಸನ್ಸ್ ಇಲ್ಲದೆ ವಾಹನ ಚಲಾಯಿಸಿದರೆ ಬೀಳುತ್ತೆ ದುಬಾರಿ ದಂಡ.


ಮೂಡಿಗೆರೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನುಜನರು ತಡೆಯಲು ದಂಡದ ಮೊತ್ತವನ್ನು ಬಾರಿ ಪ್ರಮಾಣದಲ್ಲಿ ಹೆಚ್ಚಿಸಿದರು ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಬದಲಾಗಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮೂಡಿ ಗೆರೆ ಸೀನಿಯರ್ ಸಿವಿಲ್ ನ್ಯಾಯಾಧೀಶರು ವಾಹನ ಚಾಲಕ ಜೀವನ್ಗೆ 13,500 ರೂ.ದಂಡ ವಿಧಿಸಿ ಆದೇಶ ಮಾಡಿದ್ದಾರೆ.
ಗೋಣಿಬಿಡು ಪೊಲೀಸ್ ಠಾಣಾ ಪಿಎಸ್ಐ ಹರ್ಷವರ್ಧನ್ ಜನ್ನಾಪುರದಲ್ಲಿ ಆ.16 ರಂದು ರಾತ್ರಿ ವಾಹನ ತಪಾಸಣೆ ಮಾಡುತ್ತಿರುವಾಗ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವಾಹನದ ಚಾಲಕನನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ವಾಹನ ಚಾಲನೆ ಮಾಡುತ್ತಿದ್ದ ಚಾಲಕ ಜೀವನ್ ಮಧ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದು ಡಿಎಲ್ ಕೂಡ ಇಲ್ಲದಿರುವದು ಕಂಡುಬಂದಿದ್ದು, ಅವರ ಮೇಲೆ ಪ್ರಕರಣ ದಾಖಲಿಸಿ ಮೂಡಿಗೆರೆಯ ಸೀನಿಯರ್ ಸಿವಿಲ್ ನ್ಯಾಯಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದು ನ್ಯಾಯಾಧೀಶರು ಚಾಲಕನಿಗೆ 13500 ರೂ. ದಂಡ ವಿಧಿಸಿದ್ದಾರೆ.

