ಮಲೆನಾಡ ಪ್ರತಿಬೆ.ಬೈರವ್ ಗುಡ್ಡದೂರ್…..
1 min read
ಮಲೆನಾಡ ಪ್ರತಿಬೆ.ಬೈರವ್ ಗುಡ್ಡದೂರ್..
ಲಾಯರ್ಸ್ ವರ್ಲ್ಡ್ ಕಪ್ಪ್ ಪುಟ್ ಬಾಲಿಗೆ.
ಚಿಕ್ಕಮಗಳೂರು.ತಾ:.ಆಲ್ದೂರು ಹೊಬಳಿ.ಗುಡ್ಡದೂರು ವೀವೆಕ್ ಮತ್ತು ಪವಿತ್ರವೀವೆಕರವರ ಪುತ್ರ.
ಪೊರ್ಚ್ಗಲ್ಲಿನ ರಾಜಧಾನಿ ಲೀಸ್ ಬೆನ್ ನಲ್ಲಿ ನಡೆಯಲಿರುವ 8.ನೆ ಲಾಯರ್ಸ್ ವರ್ಲ್ಡ್ ಕಫ್ ಪಂದ್ಯಾವಳಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಲು ಸಂತೋಷವಾಗುತ್ತದೆ. ಭೈರವ್ ನಾಲ್ಕನೇ ತರಗತಿಯವರೆಗೆ ಆಲ್ದೂರಿನ ಪೂರ್ಣಪ್ರಜ್ಞ ಶಾಲೆಯಲ್ಲಿ ಕಲಿತು, ನಂತರ ಮೈಸೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಮತ್ತು ಸದ್ವಿದ್ಯಾ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ತದ ನಂತರ ಬೆಂಗಳೂರಿನ ಎಂ, ಎಸ್, ರಾಮಯ್ಯ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಪ್ರಸ್ತುತ ಬೆಂಗಳೂರಿನ ನ್ಯಾಯಾಲಯಗಳು ಮತ್ತು ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ..
ಭೈರವ ಅವರು ಶಾಲಾ ಕಾಲೇಜು ದಿನಗಳಿಂದಲೂ ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿರುತ್ತಾರೆ, ಬೆಂಗಳೂರಿನ ಎಂ, ಎಸ್, ರಾಮಯ್ಯ ಕಾಲೇಜಿನಲ್ಲಿ ಮಿಸ್ಟರ್, ರಾಮಯ್ಯ ಎಂಬ ಬಿರುದನ್ನು ಕಾಲೇಜಿನ ವತಿಯಿಂದ ಪಡೆದ ಬೈರವ್. ಮೊದಲಿಗೆ ರೋಲರ್ ಸ್ಪೀಡ್ ಸ್ಕೆಟಿಂಗ್ ನಲ್ಲಿ ರಾಜ್ಯ ಮಟ್ಟದಲ್ಲಿ ಸ್ಥಾನ ಪಡೆದು, ರಾಷ್ಟ್ರ ಮಟ್ಟದಲ್ಲೂ ತನ್ನ ಚಾಪನ್ನು ಮೂಡಿಸಿದ್ದಾರೆ, ನಂತರ ಫುಟ್ ಬಾಲ್ ಆಟದಲ್ಲಿ ತೊಡಗಿಸಿಕೊಂಡು ಹಲವಾರು ಕ್ಲಬ್ ಮ್ಯಾಚ್ ಗಳಲ್ಲಿ ಆಡತೊಡಗಿ, ಕಾಲೇಜು ತಂಡದಿಂದ ಹುಬ್ಬಳ್ಳಿಯಲ್ಲಿ ನಡೆದ ಕೆ ಎಸ್ ಎಲ್ (KSL) ಯೂನಿವರ್ಸಿಟಿ ಮಟ್ಟದ ಪಂಧ್ಯಗಳಲ್ಲಿ ತನ್ನ ನಾಯಕತ್ವದ ಅಡಿಯಲ್ಲಿ ಆಡಿ ಎರಡು ಬಾರಿ ಚಾಂಪಿಯನ್ ಆಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ
2024/25 ರಲ್ಲಿ ಗೋವಾದಲ್ಲಿ ನಡೆದ ಆಲ್ ಇಂಡಿಯಾ ಲಾಯರ್ಸ್ ನ್ಯಾಷನಲ್ ಮೀಟ್ ಫುಟ್ ಬಾಲ್ ಪಂಧ್ಯದಲ್ಲಿ ದ್ವಿತೀಯ ಸ್ಥಾನ ಪಡೆದು, ಈಗ 30/09/2025 ರಿಂದ 06/10/2025 ರವರೆಗೆ ಯುರೋಪ್ ಖಂಡದ ಪೋರ್ಚುಗಲ್ಲಿನ ರಾಜಧಾನಿ ಲಿಸ್ಟೇನ್ ನಲ್ಲಿ ನಡೆಯುವ ಎಂಟನೇ ವರ್ಲ್ಡ್ ಕಫ್ ಪಂದ್ಯಾವಳಿಯಲ್ಲಿ ಆಡುವ ಭಾರತ ತಂಡದ, ಪ್ರಮುಖ ಆಟಗಾರರಾಗಿ ಪಂಧ್ಯಗಳಲ್ಲಿ ಭಾಗವಹಿಸಲು ತಯಾರಿ ನಡೆಸಿದ್ದಾರೆ ಮತ್ತು ಪ್ರಯಾಣ ಆರಂಭಿಸಿದ್ದಾರೆ,








ನಮ್ಮ ಹೆಮ್ಮೆಯ ಭಾರತ ತಂಡ ಲಾಯರ್ಸ್ ವಿಶ್ವ ಕಫ್ ನ್ನು ಗೆದ್ದು ಬರುವಂತಾಗಲಿ, ಭಾರತದ ಕೀರ್ತಿಯ ಬಾವುಟ ಹಾರಿಸುವಂತಾಗಲಿ ಎಂದು ಮತ್ತು ಅವರ ತಂಡ ಸುಖ ಪ್ರಯಾಣ ಮಾಡಿ ಕಪ್ಪನ್ನು ಗೆದ್ದು ನಮ್ಮ ದೇಶಕ್ಕೆ, ರಾಜ್ಯಕ್ಕೆ ತನ್ನ ಹುಟ್ಟೂರಿಗೆ ಕೀರ್ತಿ ತರುವಂತೆ, ಶಕ್ತಿ ನೀಡಲಿ ಎಂದು ಆಶಿಸೋಣ…

