ಮೂಡಿಗೆರೆ ತಾಲ್ಲೂಕು ಟೈಲರ್ ಕ್ಷೇತ್ರ ಸಮಿತಿಯ ವಾರ್ಷಿಕ ಮಹಾಸಭೆ…..
1 min read
ಮೂಡಿಗೆರೆ ತಾಲ್ಲೂಕು ಟೈಲರ್ ಕ್ಷೇತ್ರ ಸಮಿತಿಯ ವಾರ್ಷಿಕ ಮಹಾಸಭೆ.
ಹಳೆಮೂಡಿಗೆರೆ ಸಭಾಂಗಣದಲ್ಲಿ ಯಶಸ್ವಿ
ಹಳೆಮೂಡಿಗೆರೆ ಸೊಸೈಟಿ ಸಭಾಂಗಣದಲ್ಲಿ ಶ್ರೀ ಹೆಚ್.ಎಂ. ಶಿವೇಗೌಡ ಅವರ ಅಧ್ಯಕ್ಷತೆಯಲ್ಲಿ ಮೂಡಿಗೆರೆ ತಾಲ್ಲೂಕು ಟೈಲರ್ ಕ್ಷೇತ್ರ ಸಮಿತಿಯ ವಾರ್ಷಿಕ ಮಹಾಸಭೆ ಯಶಸ್ವಿಯಾಗಿ ನಡೆಯಿತು.
ಸಭೆಯಲ್ಲಿ ವಲಯದ ಪದಾಧಿಕಾರಿಗಳಾದ ಶಂಕರ್, ಮೇರಿ ಶೈಲಾ, ಮಂಜುಳಾ, ಉಮಾ ಶಂಕರ್, ರಾಜ್, ಗೋಪಾಲ್, ಗಿರೀಶ್, ಷಣ್ಮುಖಾನಂದ, ಸತೀಶ್, ಪ್ರಕಾಶ್, ಮೋಹನ್, ಕೃಷ್ಣ, ಮಂಜುಳಾ, ವನಿತಾ, ಸುಜಾತಾ, ನರಸಿಂಹ ಟೈಲರ್ ಉಪಸ್ಥಿತರಿದ್ದರು.
ಬಣಕಲ್, ಜನ್ನಾಪುರ, ಆಲ್ಲೂರು, ಮೂಡಿಗೆರೆ ನಗರ, ಜಾವಳಿ, ಬಿಳಗುಳ ಸೇರಿದಂತೆ ವಿವಿಧ ವಲಯದ ಟೈಲರ್ ಸಂಘದ ಪದಾಧಿಕಾರಿಗಳು ತಮ್ಮ ವಲಯದ ಕಾರ್ಯಚಟುವಟಿಕೆಗಳ ವರದಿ ಮಂಡಿಸಿದರು.
ಸಭೆಯಲ್ಲಿ ಜಿಲ್ಲಾ ಸಮಿತಿಗೆ ಪುಟ್ಟಸ್ವಾಮಿ, ಜ್ಯೋತಿ, ಪೂರ್ಣೇಶ್, ಸುಜಾತಾ, ಜಗದೀಶ್ ಅವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾದ ಶಿವೇಗೌಡರು ತಮ್ಮ ಭಾಷಣದಲ್ಲಿ, ‘ವೃತ್ತಿ ಬಾಂಧವರು ಒಗ್ಗಟ್ಟಿನಿಂದ ನಿಸ್ವಾರ್ಥ ಸೇವೆ ಸಲ್ಲಿಸಿ ಸಮಾಜದ ಋಣ ತೀರಿಸಬೇಕು.
ಮುಂದಿನ ದಿನಗಳಲ್ಲಿ ಮೂಡಿಗೆರೆ ಟೈಲರ್ ಸಂಘ ದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಟೈಲರ್ ಸ್ಮರಣೆ ಸಂಚಿಕೆ ಬಿಡುಗಡೆ ಮಾಡಲಾಗುವುದು. ಈ ಕಾರ್ಯದಲ್ಲಿ ಎಲ್ಲಾ ವೃತ್ತಿ ಬಾಂಧವರು ಸಲಹೆ, ಸಹಕಾರ ನೀಡಿ ಪ್ರೋತ್ಸಾಹಿಸಬೇಕು? ಎಂದು ಹೇಳಿಕೆಯನ್ನು ನೀಡಿದರು.
ಸಭೆಯಲ್ಲಿ ಸ್ಮರಣೆ ಸಂಚಿಕೆಯ ಪ್ರಧಾನ ಸಂಪಾದಕರಾಗಿ ನರಸಿಂಹ ಟೈಲರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

