लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಾರಿನ ಸನ್ ರೂಫ್ ತೆರೆದು ನಿಂತಿದ್ದ ಬಾಲಕನ ತಲೆಗೆ ಕಂಬಿ ಬಡಿದು ಗಾಯ…..

1 min read

ಕಾರಿನ ಸನ್ ರೂಫ್ ತೆರೆದು ನಿಂತಿದ್ದ ಬಾಲಕನ ತಲೆಗೆ ಕಂಬಿ ಬಡಿದು ಗಾಯ

ಬೆಂಗಳೂರಿನಲ್ಲಿ ಘಟನೆ
|ವಿಡಿಯೋ ವೈರಲ್

ಬೆಂಗಳೂರು ಚಲಿಸುವ ಕಾರಿನಲ್ಲಿ ಸನ್ ರೂಫ್ ತೆರೆದು ನಿಂತಿದ್ದ ಬಾಲಕನ ತಲೆಗೆ ರಸ್ತೆಯ ಹೈಟ್ ರಿಸ್ಟ್ರಿಕ್ಷೆಡ್ ಕಂಬಿ ಬಡಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ವಿದ್ಯಾರಣ್ಯಪುರದ ಜಿಕೆವಿಕೆ ರಸ್ತೆಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಂಪು ಬಣ್ಣದ ಕಾರೊಂದಲ್ಲಿ ಬಾಲಕನೊಬ್ಬ ಸನ್ ರೂಫ್ ತೆರೆದು ತಲೆ ಹೊರಗೆ ಹಾಕಿ ನಿಂತಿದ್ದಾನೆ. ಕಾರು ಚಲಿಸುವಾಗ ರಸ್ತೆಯ ಹೈಟ್ ರಿಸ್ಟ್ರಿಕ್ವಿಡ್ ಕಂಬಿ ಬಾಲಕನ ತಲೆಗೆ ಬಿಡಿದ ಪರಿಣಾಮ ಬಾಲಕ ಕಾರಿನೊಳಗೆ ಕುಸಿದು ಬಿದ್ದಿದ್ದಾನೆ. ತಲೆಗೆ ಕಂಬಿ ಬಲವಾಗಿ ಬಡಿದ ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಭಯಾನಕ ದೃಶ್ಯ ಹಿಂದೆ ಬರುತ್ತಿದ್ದ ಮತ್ತೊಂದು ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ನೆಟ್ಟಿಗರು, ಕಾರುಗಳಲ್ಲಿ ಮಕ್ಕಳನ್ನು ಸನ್ ರೂಫ್ ತೆರೆದು ನಿಲ್ಲಿಸುವ ಮುನ್ನ ಪೋಷಕರು ಎಚ್ಚರ ವಹಿಸುವಂತೆ ಸಲಹೆ ನೀಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed