लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಆಲ್ದೂರು ಸಮೀಪದ ದಿಣ್ಣೇಕೆರೆಯಲ್ಲಿ, ಶ್ರೀ ಗಣಪತಿ ವಿಸರ್ಜನಾ ಮಹೋತ್ಸವ ಸಡಗರ ಸಂಭ್ರಮ……

1 min read

ಅವಿನ್ ಟಿವಿ ಸುದ್ದಿಜಾಲ ✒️: ಸಾರ್ವಜನಿಕ ಹಬ್ಬಗಳು ಆಚರಣೆಗಳು ಮತ ಧರ್ಮ ಜಾತಿಗಳ ಭೇದವಿಲ್ಲದೆ ಎಲ್ಲರನ್ನೂ ಒಂದೇ ಸೂರಿನಡಿ ಸಮಭಾವದಿಂದ ಸೇರಿಸಿ, ಭ್ರಾತೃತ್ವದ ಭಾವದೊಂದಿಗೆ ಘಮಘಮಿಸಿ, ಬಹುತ್ವ ಭಾರತದ ಹಿರಿಮೆಗರಿಮೆಯನ್ನು ಮೇಲೆತ್ತಿ, ಈ ನೆಲದ ಬಹುರೂಪಿ ಗುಣ ಧರ್ಮಗಳಿಗೆ ಸಾಕ್ಷಿಯಾಗಬೇಕು. ಇಂತಹ ಸಾಕ್ಷಿಗಳಿಗೆ ಬಹು ಮುಖ್ಯವಾಗಿ ಇಂದಿನ ಯುವಜನತೆ ಪಾತ್ರಧಾರಿಗಳಾಗಬೇಕು.

ಕರ್ನಾಟಕದ ಸಣ್ಣ ಸಣ್ಣ ಹಳ್ಳಿಗಳಿಂದ ಹಿಡಿದು ಭಾರತದ ದೊಡ್ಡ ದೊಡ್ಡ ಮಹಾನಗರದವರೆಗೆ ಈಗ ಸಾರ್ವಜನಿಕ ಗಣೇಶೋತ್ಸವದ ಸಂದರ್ಭವನ್ನು ಕಾಣುತ್ತಿದ್ದೇವೆ.

ಹಾಗೆಯೇ,,

ಆಲ್ದೂರು ಸಮೀಪದ ದಿಣ್ಣೇಕೆರೆಯಲ್ಲಿ, ಶ್ರೀ ಗಣಪತಿ ವಿಸರ್ಜನಾ ಮಹೋತ್ಸವ ಸಡಗರ ಸಂಭ್ರಮದ ಭಕ್ತಿ ನೈವೇದ್ಯದೊಂದಿಗೆ ರಾರಾಜಿಸಿ ವಿಸರ್ಜನಗೊಂಡಿತು.

ಹಲವು ದಶಕಗಳಿಂದ ಪ್ರತಿ ವರ್ಷ ತಪ್ಪದೆ ಆಚರಿಸಿಕೊಂಡು ಬಂದಿರುವಂತೆ, ದಿಣ್ಣೇಕೆರೆಯ ಗ್ರಾಮಸ್ಥರು, ಊರಿನ ಶ್ರೀ ಪ್ರಸನ್ನ ಗಣಪತಿ ವೀರಾಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಸಮುದಾಯ ಭವನದಲ್ಲಿ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪಿಸಿ, ಸುಮಾರು ಹನ್ನೆರಡು ದಿನಗಳ ಕಾಲ ಪ್ರತಿದಿನ ಪೂಜೆ,ಪ್ರಸಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿ, ಇಂದು ಶ್ರೀ ಗಣಪತಿ ವಿಸರ್ಜನಾ ಕಾರ್ಯವನ್ನು ಹಮ್ಮಿಕೊಂಡಿತ್ತು.

ವಿಸರ್ಜನಾ ಮಹೋತ್ಸವದ ಅಂಗವಾಗಿ ಗ್ರಾಮದ ಮಹಿಳೆಯರು ಮತ್ತು ಮಕ್ಕಳಿಗೆ ಗ್ರಾಮೀಣ ಕ್ರೀಡಾಕೂಟವನ್ನು ಏರ್ಪಡಿಸಿತ್ತು,

ಹಳ್ಳಿಗಳಲ್ಲಿ ಅಳಿವಿನಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಕ್ರೀಡಾ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು,

ಮಹಿಳೆಯರು ಮತ್ತು ಮಕ್ಕಳು ಹಾಗೂ ಯುವ ಸಮುದಾಯ ಉತ್ಸಾಹದಿಂದ ಹಲವು ಚಟುವಟಿಕೆಯಲ್ಲಿ ಭಾಗಿಯಾಗಿದ್ದರು, ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು ಹಾಗೂ ಸಹಕಾರ ನೀಡಿದವರಿಗೆ ಸನ್ಮಾನಿಸಲಾಯಿತು.

ಕ್ರೀಡಾಕೂಟ ಮತ್ತು ಬಹುಮಾನ ವಿತರಣಾ ಸಮಾರಂಭದ ನಂತರ, ಗ್ರಾಮದ ಮುಖ್ಯಬೀದಿಯಲ್ಲಿ ಪರಿಸರ ಸ್ನೇಹಿ ಶ್ರೀ ಗಣೇಶ ಮೂರ್ತಿಯನ್ನು ಸಾಂಸ್ಕೃತಿಕ ಮೇಳದೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ಮಾಡಿ, ಧಾರಾಕಾರವಾದ ಮಳೆಗೆ ಮಲೆನಾಡಿಗೆ ಮಲೆನಾಡೆ ತುಂಬಿ ಹರಿಯುತ್ತಿರುವ ಗ್ರಾಮದ ಹಳ್ಳದಲ್ಲಿ ವಿಸರ್ಜನೆ ಮಾಡಲಾಯಿತು.
••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed