लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇದು ಈ ಹೊತ್ತಿನ ಅಗತ್ಯ ಮತ್ತು ಅನಿವಾರ್ಯ~ ನಮ್ಮ ನಡೆಗೆ ಸಾಮರಸ್ಯದೆಡೆಗೆ:..

1 min read

ಅವಿನ್ ಟಿವಿ ಸುದ್ದಿಜಾಲ ✒️:
ಇದು ಈ ಹೊತ್ತಿನ ಅಗತ್ಯ ಮತ್ತು ಅನಿವಾರ್ಯ~ ನಮ್ಮ ನಡೆಗೆ ಸಾಮರಸ್ಯದೆಡೆಗೆ:

ಸಾಮರಸ್ಯದ ನೆಡೆಗೆ ಕುರಿತು ಚಿಕ್ಕಮಗಳೂರಿನ ಸಮಾನ ಮನಸ್ಕರ ವೇದಿಕೆ ವತಿಯಿಂದ ಪ್ರಥಮ ಪೂರ್ವಭಾವಿ ಸಭೆ.

ಇದು ರೂಪಾಂತರಗೊಂಡ ಶತಮಾನ, ಈ ರೂಪಾಂತರಗೊಂಡ ಶತಮಾನದಲ್ಲಿ ನಮ್ಮ ಆದ್ಯತೆಗಳು ಬಹುತೇಕ ಪಲ್ಲಟಗೊಂಡಿದ್ದಾವೆ, ಈ ಪಲ್ಲಟಕ್ಕೆ ಧರ್ಮ, ಮತ, ಜಾತಿ, ವರ್ಗ ಸೇರಿದಂತೆ ಹತ್ತು ಹಲವು ಪ್ರಮುಖ ಕಾರಣಗಳಿವೆ, ಅದರಲ್ಲಿ ಬಹುಮುಖ್ಯ ಕಾರಣ ಇಂದಿನ ಭ್ರಷ್ಟ ರಾಜಕಾರಣ,

ಕೇವಲ ಅಧಿಕಾರದ ಹಪಾಹಪಿತನದೊಂದಿಗೆ ಆರ್ಥಿಕ ಭ್ರಷ್ಟತೆ ಮಾತ್ರವಲ್ಲ ಮಾನಸಿಕ ಮಾಲಿನ್ಯಕ್ಕೂ ಇಂದಿನ ರಾಜಕಾರಣ ಕಾರಣವಾದ ಪರಿಣಾಮ, ಇಡೀ ಒಟ್ಟು ಸಮಾಜದ ಸ್ವಾಸ್ಥ್ಯವೇ ಹಾಳಾಗುತ್ತಿದೆ,

ಒಂದು ಕಾಲದಲ್ಲಿ ಸಮಾನತೆಗಾಗಿ, ಸ್ವಾಭಿಮಾನಕ್ಕಾಗಿ, ಕನಿಷ್ಠ ಬದುಕಿಗಾಗಿ ಹೋರಾಡುತ್ತಿದ್ದ ಜನಪರ ಚಳುವಳಿಗಳು ಇಂದು ಅದೇ ಜಾಗದಲ್ಲಿ ಸಾಮರಸ್ಯಕ್ಕಾಗಿ ಧ್ವನಿ ಮಾಡಬೇಕಾದ ಅಗತ್ಯತೆ ಎದುರಾಗಿದೆ.

ಬದುಕು ಬವಣೆಗಳನ್ನು ಕುರಿತು ಮಾಡಬೇಕಾದ ರಾಜಕಾರಣವು, ಈ ಬದುಕಿನ ವಿಚಾರವನ್ನು ನೇಪಥ್ಯಕ್ಕೆ ತಳ್ಳಿ ಯಾವಾಗ ಭಾವನೆಯೊಟ್ಟಗೆ ಚುನಾವಣಾ ರಂಗಕ್ಕಿಳಿದು, ಈ ಸಮಾಜದ ಮುಗ್ಧ ಮುಗ್ಧವಾದ ಮನಸ್ಸುಗಳ ಮೆದುಳಿನ ಮೇಲೆ ಪ್ರಚೋದನಕಾರಿಯಾಗಿ ಕೈ ಹಾಕಿತೋ,ಅ ಕ್ಷಣದಿಂದಲೇ ಈ ದೇಶಕ್ಕೆ ಒಂದು ಶಾಪ ಅಂಟಿದಂತೆ ಆಗಿದೆ. ಈ ಶಾಪ ಇಂದು ವ್ಯಾಪಕವಾಗಿ ವಿಕೃತವಾಗಿ ಹರಡುತ್ತಿದೆ,

ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವವರು ಯುವ ಸಮುದಾಯ, ಇಂಥಹ ಇಡೀ ಯುವ ಸಮುದಾಯವನ್ನು ದಿಕ್ಕು ತಪ್ಪಿಸಿದ ಕಾರಣ, ಇಂದು ಈ ಯುವ ಸಮುದಾಯವೂ ಒಂದು ಆದರ್ಶವಾದ ನಿಜ ಬದುಕಿನಿಂದ ವಂಚಿತವಾಗಿದೆ.

ಜಾತಿ ಮತ ಧರ್ಮಗಳ ತಿಕ್ಕಾಟದಲ್ಲಿ ದ್ವೇಷವೇ ಬಹಳ ಮುಖ್ಯವಾದಂತೆ ಗೋಚರಿಸುತ್ತಿದೆ, ಈ ದ್ವೇಷದ ಜ್ವಾಲೆ ಹೆಚ್ಚಾಗುತ್ತಿರುವ ಕಾರಣ, ಮಾನಸಿಕ ಮಾಲಿನ್ಯ ವಿಜ್ರಂಬಿಸುತ್ತಾ, ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಮಾಡುತ್ತಾ, ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚುತ್ತಾ, ಬೆಳಕಿನ ಮಾತುಗಳನ್ನಾಡಬೇಕಾದ ಬಾಯಿಗಳಲ್ಲಿ ಬೆಂಕಿಯ ಉಂಡೆಗಳು ಧಗಧಗನೆ ಹೊರಹೊಮ್ಮುತ್ತಿವೆ,

ಈ ಕಾರಣ,
ದೇಶಕ್ಕೆ ಕಾಡುತ್ತಿರುವ *ಭಯೋತ್ಪಾದನೆಯ* ಜೊತೆಗೆ *ದ್ವೇಷೋತ್ಪಾದನೆಯೂ* ವಿವಿಧ ಬಣ್ಣ ಬಣ್ಣಗಳ ಹೆಸರಿನಲ್ಲಿ ಕೇಕೆ ಹಾಕುತ್ತ ತಾಂಡವವಾಡಲು ಆರಂಭಿಸಿದೆ, ಯಾವ ಮಟ್ಟಿಗೆ ತಾಂಡವವಾಡುತ್ತಿದೆ ಎಂದರೆ ಭಕ್ತಿಯ ಜಾಗಕ್ಕೂ *ಬೈಲಾ* ಬಂದು ಕೂತಿದೆ, ಭಕ್ತಿಗೆ ಬೈಲಾ ಇರಬಾರದು, ಬೇಡರ ಕಣ್ಣಪ್ಪ, ಶಬರಿ, ಸಂತ ಶಿಶುನಾಳ ಶರೀಫ, ಮೀರಾಬಾಯಿ ಹೀಗೆ ಇನ್ನೂ ಮುಂತಾದವರ ಭಕ್ತಿಗೆ ಬೈಲಾ ಎಂಬುದು ಇರಲಿಲ್ಲ ಎಂಬುದನ್ನು ಈ ಸಮಾಜಕ್ಕೆ ಸರಿಯಾಗಿ ಸಮರ್ಥವಾಗಿ ಅರ್ಥೈಸಬೇಕಾಗಿದೆ.

ಈ ನೆಲದಲ್ಲಿ ಶ್ರೇಣಿಕೃತವಾದ ಅನೇಕ ಅಸಮಾನತೆಗಳು ಶತಶತಮಾನಗಳ ಹಿಂದಿನಿಂದಲೂ ಇದ್ದರೂ ಕೂಡ, ಈ ಎಲ್ಲದರ ಮಧ್ಯೆಯೂ ಒಂದಾಗಿ ದೇವರು ಮತ್ತು ಧರ್ಮದ ಬಗ್ಗೆ ಅಪಾರವಾದ ಭಕ್ತಿ ಮತ್ತು ನಂಬಿಕೆಯನ್ನು ಇಟ್ಟುಕೊಂಡು, ನನ್ನಂತೆ ಅನ್ಯರು ಕೊಡ ಈ ಬದುಕಿನ ಭಾಗ ಆಗಬೇಕು ಎಂಬ ಭಾವನೆಯೊಂದಿಗೆ ಆಚರಣೆ ಸಂಪ್ರದಾಯ ಬದುಕನ್ನು ಕಟ್ಟಿಕೊಂಡವರು ಈ ನೆಲದ ಮೂಲ ನಿವಾಸಿಗಳು. ಭಕ್ತಿ ಭಾವದ ನೆಲೆಯೊಳಗೆ ಇದ್ದ ದೇವರು ಮತ್ತು ಧರ್ಮ, ಇಂದು ಬಹುತೇಕ ವ್ಯಾಪಾರದ ಕೇಂದ್ರಗಳಾಗಿ, ರಾಜಕೀಯ ಚಂದುರಂಗದಾಟವನ್ನು ಬೀಸುವ ದಾಳದ ಅಂಗಳವಾಗಿ ದುರುಪಯೋಗ ಮಾಡಿಕೊಂಡ ಕಾರಣ ಧಾರ್ಮಿಕ ಮಾಲಿನ್ಯವೂ ಸಹ ಉಂಟಾಗಿ, ಈ ಧಾರ್ಮಿಕ ಮಾಲಿನ್ಯದ ದುರ್ವಾಸನೆ ಭಾರತದಂತಹ ಹಳ್ಳಿಯ ಕಟ್ಟ ಕಡೆಯ ಜನರ ಮನೆ ಮನದ ಮೂಗಿಗೂ ರಾಚುತಿದೆ.

ಈ ಎಲ್ಲ ಕಾರಣಗಳಿಗಾಗಿ,ಈ ಸಮಾಜವು ಒಂದು ರೋಗಗ್ರಸ್ತ ಮನಸ್ಸಿನೊಂದಿಗೆ ನರಳುತ್ತಾ,ಕಿರುಚುತ್ತಾ,ಕುಂಟುತ್ತಾ ಹೆಜ್ಜೆ ಹಾಕುತ್ತಿದೆ, ಮನುಷ್ಯರು ಮನುಷ್ಯರನ್ನಾಗಿ ನೋಡಿದಂತೆ ಅದಕ್ಕೆ ಬೇಲಿ ಹಾಕಿ, ಧರ್ಮ ನೋಡಿ ಜಾತಿ ನೋಡಿ ಗುಂಡಿಕ್ಕಿ ಕೊಲ್ಲುವಂತಹ ಮನಸ್ಥಿತಿಗೆ ಈ ಸಮಾಜ ಜಾರಿ ಬಿದ್ದಿದೆ.

ಈ ಹಿನ್ನಲೆಯಲ್ಲಿ, ನಮ್ಮ ಹೆಜ್ಜೆಯ ತಾಳ ಮತ್ತು ಬದುಕಿನ ಹದ ತಪ್ಪುತ್ತಿರುವ ಕಾರಣ, ಮುಖ್ಯವಾಗಿ ಯುವ ಸಮೂಹದೊಳಗೆ ಜಾಗೃತಿ ಮತ್ತು ಅರಿವನ್ನು ಉಂಟುಮಾಡಿ, ಸ್ವಸ್ಥ ಸಮಾಜದ ಮರು ನಿರ್ಮಾಣಕ್ಕಾಗಿ ಸಾಮರಸ್ಯದ ನಡಿಗೆಯನ್ನು ನಡೆಯುವ ಮೂಲಕ , ಮನಸ್ಸು ಮನಸ್ಸುಗಳನ್ನು ಕಟ್ಟುವ ನಿಟ್ಟಿನಲ್ಲಿ ಚಿಕ್ಕಮಗಳೂರಿನ ಸಮಾನ ನಮಸ್ಕಾರ ವೇದಿಕೆ ಹೆಜ್ಜೆ ಇಟ್ಟಿದೆ.

ಇಂತಹ ಹತ್ತು ಹಲವು ಮಹತ್ವದ ಸಂಗತಿಗಳನ್ನ ಸಭೆಯಲ್ಲಿ ಚರ್ಚಿಸಿ,
ಈ ಸಂಬಂಧ,
ಸಾಮರಸ್ಯದ ನಡಿಗೆಯನ್ನು ಆಯೋಜಿಸುವ ಕುರಿತು, ಚಿಕ್ಕಮಗಳೂರಿನ ಸಮಾನ ಮನಸ್ಕರ ವೇದಿಕೆಯು , ನಗರದ ಪ್ರವಾಸಿ ಮಂದಿರದಲ್ಲಿ ಪ್ರಥಮ ಪೂರ್ವಭಾವಿ ಸಭೆಯನ್ನು ಏರ್ಪಡಿಸಿತ್ತು.

ಈ ಪ್ರಥಮ ಪೂರ್ವಭಾವಿ ಸಭೆಗೆ ಜಿಲ್ಲೆಯ ವಿವಿಧ ರಾಜಕೀಯ ಪಕ್ಷದ ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು, ರೈತಪರ ದಲಿತಪರ ಹೋರಾಟಗಾರರು, ಬರಹಗಾರರು, ಜನಮುಖಿ ವಿಚಾರಧಾರೆಯುಳ್ಳ ಮನಸ್ಸುಗಳು ಭಾಗಿಯಾಗಿ, ಸಾಮರಸ್ಯದ ನಡಿಗೆಯ ರೂಪುರೇಷೆಗಳ ಬಗ್ಗೆ ಚರ್ಚಿಸಿ, ಜಿಲ್ಲೆಯ ಎಲ್ಲ ತಾಲೂಕುಗಳನ್ನು ಈ ನಡಿಗೆಯಲ್ಲಿ ಒಳಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಸಭೆಯು ಮಾತುಕತೆ ನಡೆಸಿತು.
••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ✒️ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed