ಎಲ್ಲ ಗುಣಗಳು ಒಂದೆಡೆ ಲಭಿಸುವುದು ಅಸಾಧ್ಯ ಆದರೆ ಇಲ್ಲಿ ಭಿನ್ನ ಬಿನ್ನ ಸ್ವರಗಳೆಲ್ಲ ಒಂದೇ ಮಾಧುರ್ಯವಾಗಲು ಅವಕಾಶವಿದೆ, ಇದುವೇ ಕನ್ನಡದ ಧಿ ಶಕ್ತಿ.*..
1 min read
ಅವಿನ್ ಟಿವಿ ಸುದ್ದಿಜಾಲ ✒️: *ಎಲ್ಲ ಗುಣಗಳು ಒಂದೆಡೆ ಲಭಿಸುವುದು ಅಸಾಧ್ಯ ಆದರೆ ಇಲ್ಲಿ ಭಿನ್ನ ಬಿನ್ನ ಸ್ವರಗಳೆಲ್ಲ ಒಂದೇ ಮಾಧುರ್ಯವಾಗಲು ಅವಕಾಶವಿದೆ, ಇದುವೇ ಕನ್ನಡದ ಧಿ ಶಕ್ತಿ.*
ವಿದ್ವತ್ ಜನರಿಂದ ಹಿಡಿದು ಸಾಮಾನ್ಯ ಜನರು ಒಂದುಗೂಡಿ ಕನ್ನಡದ ಪರಿಚಾರಿಕೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ತು ಒಂದು ಭೂಮಿಕೆಯಾಗಿದೆ.
ಶತಮಾನದ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ *ಗರ್ಭದ* ಮಾತುಗಳಿವೆ, ಈ ಗರ್ಭದ ಮಾತುಗಳ ಜಾಗದಲ್ಲಿ ಒಂದು ವೇಳೆ *ಗರ್ವದ* ಮಾತುಗಳು ನೆಲೆಗೊಂಡುಬಿಟ್ಟರೆ ?
ಆಗ,
ಕನ್ನಡದ ಪ್ರಜ್ಞೆ, ಪರಿಷತ್ತಿನ ಆಶಯ ಪಲ್ಲಟಗೊಂಡಂತೆ ಆಗುತ್ತದೆ.
ಹಾಗಾಗಿ ಪರಿಷತ್ತಿನ ಯೋಚನೆಗಳು~ ಅದರ ಆಲೋಚನೆಗಳು, ಕಾರ್ಯ ಚಟುವಟಿಕೆಗಳು ಕೇವಲ ರಂಜನೆ ~ ರೋಚಕತೆ, ಹಾರ ತುರಾಯಿ ಸನ್ಮಾನಕ್ಕೆ ಸೀಮಿತ ಆಗದೆ ಅದು ರಚನಾತ್ಮಕವಾದ ಚಟುವಟಿಕೆಗಳಾಗಬೇಕು.
*”ನಾನು ಸರಿ”* ಎಂಬುದು ಆತ್ಮವಿಶ್ವಾಸದ ಮಾತಾದರೆ, *”ನಾನೇ ಸರಿ”* ಎಂಬುದು ಅಹಂಕಾರದ ಹೆಗ್ಗುರುತಾಗುತ್ತದೆ.
ಮಾನವೀಯ ಮೌಲ್ಯಗಳನ್ನು ಪುನರುತ್ಥಾನ ಮಾಡುತ್ತಾ, ಭೂಮಿಯನ್ನು ಉತ್ಕನನ ಮಾಡಿದ ಹಾಗೆ ಮನುಷ್ಯನ ಮೆದುಳನ್ನು ಉತ್ಕನನ ಮಾಡುತ್ತಾ,ಕನ್ನಡದ ಬೌದ್ಧಿಕತೆಯನ್ನು ಮತ್ತಷ್ಟು ಮೇಲೆರಿಸುತ್ತಾ, ಈ ನೆಲದ ಆಳಕ್ಕೆ ಇಳಿಯುವ ಪ್ರಯತ್ನ ಮಾಡಬೇಕಾಗಿದೆ.
ಚಿಕ್ಕಮಗಳೂರು ತಾಲೂಕು,ಆಲ್ದೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಇತ್ತೀಚಿಗೆ ಆಲ್ದೂರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಶ್ರಾವಣ ಸಂಜೆ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಗಳು, ಕವಿಗಳು,ಸಾಹಿತಿಗಳು, ಕೃಷಿಕರು ಸಂಘಟಕರು, ಜನಪರ ಹೋರಾಟಗಾರರು, ಕ ಸಾ ಪ ಪದಾಧಿಕಾರಿಗಳು ಒಂದೆಡೆ ಸೇರಿ ಕನ್ನಡದ ಮೇರು ವಿಚಾರವನ್ನು ಪ್ರಸ್ತಾಪಿಸಿ ಈ ಶ್ರಾವಣ ಸಂಜೆಗೆ ಕಳೆ ತಂದುಕೊಟ್ಟರು.
••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

