लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಷ್ಟಪಟ್ಟು ಓದುವ ಬದಲಿಗೆ ಇಷ್ಟಪಟ್ಟು ಓದಬೇಕು : ಉಮಾಮಹೇಶ್ವರಪ್ಪ….

1 min read

ಕಷ್ಟಪಟ್ಟು ಓದುವ ಬದಲಿಗೆ ಇಷ್ಟಪಟ್ಟು ಓದಬೇಕು : ಉಮಾಮಹೇಶ್ವರಪ್ಪ

ಚಿಕ್ಕಮಗಳೂರು: ವಿದ್ಯಾರ್ಥಿ ಬದುಕಿನಲ್ಲಿ ಚೆನ್ನಾಗಿ ಓದಿ ಹೆಚ್ಚುಅಂಕ ಗಳಿಸುವ ಜೊತೆಗೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇನ್ನಷ್ಟು ಸಾಧನೆಯ ಮೆಟ್ಟಿಲೇರಬೇಕು ಎಂದು ಶಾಲಾ ಸ್ಥಳೀಯ ಸಲಹಾ ಸಮಿತಿ ಸದಸ್ಯ ಹಾಗೂ ನಿವೃತ್ತ ಶಿಕ್ಷಕ ಉಮಾಮಹೇಶ್ವರಪ್ಪ ಹೇಳಿದರು.
ನಗರದ ಹಿರೇಮಗಳೂರಿನ ಶ್ರೀ ಪ್ರಭುಲಿಂಗ ಪ್ರೌಢಶಾಲೆಯಲ್ಲಿ ಬುಧವಾರ ಶಾಲಾ ಸ್ಥಳೀಯ ಸಲಹಾ ಸಮಿತಿ, ನಮ್ಮ ಸ್ನೇಹಲೋಕ ಗ್ರೂಪ್ ಮತ್ತು ನಮ್ಮ ಸ್ನೇಹ ಸಾಗರ ಬಳಗದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಭಾ ಪುರಸ್ಕಾರ ನಿಮ್ಮ ಮುಂದಿನ ವ್ಯಾಸಂಗಕ್ಕೆ ಪ್ರೋತ್ಸಾಹದ ಸಂಕೇತವಾಗಿದೆ. ಮುಂದಿನ ದಿನದಲ್ಲಿ ಕಷ್ಟಪಟ್ಟು ಓದುವ ಬದಲಿಗೆ ಇಷ್ಟಪಟ್ಟು ಓದಿ ಸಾಧಕರ ಸಾಲಿಗೆ ಸೇರಬೇಕು. ಹಾಗೆಯೇ ಪೋಷಕರು ಶ್ರಮ ವನ್ನು ವ್ಯರ್ಥಗೊಳಿಸದೇ ಕನಸನನ್ನು ಈಡೇ-ರಿಸುವತ್ತ ಗಮನಹರಿಸಬೇಕು ಎಂದು ತಿಳಿಸಿದರು.

ಎಸ್‌ಟಿಜೆ ಕಾಲೇಜಿನ ಪ್ರಾಂಶುಪಾಲೆ ಭಾರತಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನದಿಂದ ಜ್ಞಾನ ಬಂಡಾರವನ್ನು ಸಂಪಾದಿಸಬೇಕು. ಜೀವನದಲ್ಲಿ ಗುರಿ ಇಟ್ಟುಕೊಂಡು ಸತತ ಪ್ರಯತ್ನ ಮಾಡಿದಾಗ ಅಂದುಕೊಂಡದ್ದನ್ನು ಸಾಧಿಸಲು ಸಹಕಾರಿಯಾಗುತ್ತದೆ. ಮೊಬೈಲ್, ಟಿವಿ ಮತ್ತು ದುಶ್ಚಟಗಳಿಂದ ದೂರವಿರಬೇಕು ಕಿವಿಮಾತು ಹೇಳಿದರು.

ನಮ್ಮ ಸ್ನೇಹಲೋಕ ಗ್ರೂಪ್ ಅಧ್ಯಕ್ಷ ಗಂಗಾಧ‌ರ್ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಅತಿಹೆಚ್ಚು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉತ್ತಮ ಗುಣಮಟ್ಟದ ಸ್ಮಾರ್ಟ್ ವಾಚ್‌ಗಳನ್ನು ಸ್ನೇಹಲೋಕ ದಿಂದ ವಿತರಿಸಿದ್ದು ಮಕ್ಕಳು ಸಮಯವನ್ನು ಹಾಳುಮಾಡಿಕೊಳ್ಳದೇ ವಿದ್ಯಾರ್ಥಿದೆಸೆಯಲ್ಲಿ ಕಲಿಕೆಯತ್ತ ಹೆಜ್ಜೆ ಹಾಕಬೇಕಿದೆ ಎಂದರು.

ಇದೇ ವೇಳೆ ಅತಿಹೆಚ್ಚು ಅಂಕಗಳಿಸಿದ ಆರು ವಿದ್ಯಾರ್ಥಿಗಳಿಗೆ ನಗದು ಹಾಗೂ ಸ್ಮಾರ್ಟವಾಚ್, ಪ್ರತಿಭಾ ಪುರಸ್ಕಾರ ಬಹುಮಾನವನ್ನು ವಿತರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯ ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲಹಾ ಸಮಿತಿ ಉಪಾಧ್ಯಕ್ಷ ಲಲಿತ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸ್ನೇಹ ಸಾಗರದ ಅಧ್ಯಕ್ಷ ಮೋಹನ್‌ಕುಮಾ‌ರ್, ಸ್ನೇಹಲೋಕ ಗ್ರೂಪ್‌ನ ಕಾರ್ಯ ದರ್ಶಿ ಕೃಷ್ಣಕುಮಾರ್, ಸ್ಥಳೀಯ ಸಲಹಾ ಸಮಿತಿ ಸದಸ್ಯರಾದ ಭಾರತಿ, ಲೋಕೇಶ್, ಮೋಹನ್, ಆಶಾ, ವೀಣಾ, ಲತಾ, ವಿಜಯ್‌ ಕುಮಾರ್, ನಾರಾಯಣ್, ಯೋಗೀಶ್, ಹಿರಿಯ ವಿದ್ಯಾರ್ಥಿಗಳಾದ ಗುರು, ಮೋಹನ್‌ಕುಮಾ‌ರ್, ಯುವರಾಜ್, ಶಾಲಾ ಶಿಕ್ಷಕಿಯರಾದ ವೀಣಾ ಮತ್ತಿತರರಿದ್ದರು.

ವರದಿ..
ಭಾರತಿಉಮೇಶರಾಜಅರಸು..ಚಿಕ್ಕಮಗಳೂರು..
8971536986….🙏 .

About Author

Leave a Reply

Your email address will not be published. Required fields are marked *

You may have missed