लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ಆರೊಗ್ಯ ರಕ್ಷಾ ಸಮಿತಿಯವರನ್ನು ನಿರ್ಲಕ್ಷ್ಯ. ರಾಜಿನಾಮೆ ಎಚ್ಚರಿಕೆ….

1 min read

ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ಆರೊಗ್ಯ ರಕ್ಷಾ ಸಮಿತಿಯವರನ್ನು ನಿರ್ಲಕ್ಷ್ಯ. ರಾಜಿನಾಮೆ ಎಚ್ಚರಿಕೆ.

ಮೂಡಿಗೆರೆ ಎಂ ಜಿ ಎಂ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯನ್ನು ಕಡೆಗಣಿಸಲಾಗಿದೆ ಎಂದು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ಅಸಮಾಧಾನ ಹೊರಹಾಕಿದರು, ಇಂದು ಮೂಡಿಗೆರೆ ಆಸ್ಪತ್ರೆಯಲ್ಲಿ ಬೆಂಗಳೂರು ವೊಲ್ವೋ ವೆಲ್ನೆಸ್ ಆನ್ ವೀಲ್ಸ್ ಕಮ್ಯುನಿಟಿ ಹೆಲ್ತ್ ಕೇರ್ ಕ್ಲಿನಿಕ್ ಇವರ ಸಹಯೋಗದಲ್ಲಿ ನಾರಾಯಣ ಹೃದಯಾಲಯ ಬೆಂಗಳೂರು ವತಿಯಿಂದ ಸಂಚಾರಿ ಆರೋಗ್ಯ ಘಟಕ ವಾಹನದಲ್ಲಿ ಹೃದಯ ಸಂಬಂದಿಸಿದ ಹಾಗೂ ಕ್ಯಾನ್ಸರ್ ಕಾಯಿಲೆಗಳಿಗೆ ಸಂಬಂದಿಸಿದ ಉಚಿತ ತಪಾಸಣೆ ಕಾರ್ಯಗಾರ ನಡೆಸಿದ್ದು, ಈ ಸೌಲಭ್ಯದ ಬಗ್ಗೆ ರೋಗಿಗಳಿಗೆ ತಲುಪಿಸಲು ಮೂಡಿಗೆರೆ ಆರೋಗ್ಯ್ ಅಧಿಕಾರಿಗಳು ವಿಫಲರಾಗಿದ್ದಾರೆ ಜೊತೆಗೆ ಈ ಕಾರ್ಯಕ್ರಮದ ಬಗ್ಗೆ ಆರೋಗ್ಯ್ ರಕ್ಷಾ ಸಮಿತಿಯ ಯಾವೊಬ್ಬ ಸದಸ್ಯರಿಗೂ ತಿಳಿದಿಲ್ಲ, ಆಸ್ಪತ್ರೆ ಅಭಿವೃದ್ಧಿ ಮತ್ತು ಉನ್ನತಿಕರಿಸಲು ಶಾಸಕರಾದ ನಯನ ಅವರು ಮತ್ತು ಆರೋಗ್ಯ ರಕ್ಷಾ ಸಮಿತಿ ಶ್ರಮ ಪಡುತ್ತಾ ಇದ್ದರೆ,
ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಅಭಿವೃದ್ಧಿ ಅನ್ನುವ ಪದದ ಅರ್ಥವೇ ಗೊತ್ತಿಲ್ಲ ಎಂಬತ್ತೆ ಇರುವುದು ನಮ್ಮಗಳಿಗೆ ನೋವು ತಂದಿದೆ, ಯಾವುದೇ ಸೌಲಭ್ಯ ಅಥವಾ ಯೋಜನೆಗಳನ್ನು ನೆಪ ಮಾತ್ರಕ್ಕೂ ಆರೋಗ್ಯ ರಕ್ಷಾ ಸಮಿತಿಯ ಗಮನಕ್ಕೆ ತಾರದೇ ಏಕ ಪಕ್ಷಿಯವಾಗಿ ನಡೆದುಕೊಳ್ಳುತ್ತಾ ಇದ್ದಾರೆ. ಇದನ್ನು ಆರೋಗ್ಯ ರಕ್ಷಾ ಸಮಿತಿಯ ಎಲ್ಲಾ ಸದಸ್ಯರು ವಿರೋಧಿಸುತ್ತೇವೆ, ಮುಂದಿನ ದಿನದಲ್ಲಿ ಸಾಮೂಹಿಕವಾಗಿ ರಾಜಿನಾಮೆ ನೀಡಲು ನಿರ್ಧಾರ ಮಾಡಿದ್ದೇವೆ ಎಂದು ಆಕ್ರೋಶ ಹೊರ ಹಾಕಿದರು

About Author

Leave a Reply

Your email address will not be published. Required fields are marked *

You may have missed