लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರಸಪ್ರಶ್ನೆ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಬಹುಮಾನ ವಿತರಣೆ ಮತ್ತು ಗೌರವ ಸಮರ್ಪಣೆ.*…

1 min read

ಅವಿನ್ ಟಿವಿ ಸುದ್ದಿಜಾಲ ✒️: *ರಸಪ್ರಶ್ನೆ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಬಹುಮಾನ ವಿತರಣೆ ಮತ್ತು ಗೌರವ ಸಮರ್ಪಣೆ.*

ವಿದ್ಯಾರ್ಥಿಗಳ ಮನದೊಳಗಿರುವ ಮುಗ್ದತೆಯನ್ನು ಕಸಿದುಕೊಂಡು, ಅವರೊಳಗಿರುವ ವಿವೇಕವನ್ನು ತೆಗೆದು, ಆ ವಿವೇಕದ ಜಾಗದಲ್ಲಿ ಜಾಣತನವನ್ನು ತುಂಬುವ ಮೂಲಕ ಅವರನ್ನು ಒಂದು ನಾಗಾಲೋಟದೊಂದಿಗೆ ಓಡಿಸುತ್ತಿದ್ದೇವೆ. ಇಂತಹ ಓಟವನ್ನೇ ಸ್ಮಾರ್ಟ್ ಎಂದು ಕರೆಯುತ್ತಿದ್ದೇವೆ.

ಇಂತಹ ಸ್ಮಾರ್ಟ್ ಯುಗದಲ್ಲಿ ವಿದ್ಯಾರ್ಥಿಗಳನ್ನು ಶ್ರಮದೊಟ್ಟಿಗೆ ಬದ್ಧತೆಯೊಟ್ಟಿಗೆ ಓದಿಸಿ ಓಡಿಸುವುದಕ್ಕಿಂತ ಆರಾಮದಾಯಕವಾದ ಸುಖದ ಓಟದಲ್ಲಿ ಓಡುವಂತೆ ನಾವು ಅವರನ್ನು ರೂಪಿಸುತ್ತಿದ್ದೇವೆ.

ಶ್ರಮ ಅರ್ಥವಾಗದೆ ಹೋದರೆ ಸುಖಕ್ಕೆ ಬೆಲೆ ಇರುವುದಿಲ್ಲ, ಎಳೆ ವಯಸ್ಸಿನಲ್ಲಿಯೇ ಸುಖಕ್ಕೆ ಜೋತು ಬಿದ್ದರೆ ಮುಂದೆ ಇಡಿ ಸಂತೋಷವನ್ನು ಕಳೆದುಕೊಳ್ಳಬೇಕಾಗಬಹುದು, ಇಲ್ಲಿ ನಾವು ಸುಖ ಮತ್ತು ಸಂತೋಷ ಇವೆರಡು ಬೇರೆ ಬೇರೆ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ.

ಜೊತೆಗೆ ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಅವರ ಮನದೊಳಗೆ ತುಂಬುವ ನಿಟ್ಟಿನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಭೌತವಿಜ್ಞಾನಿ ಸರ್ • ಸಿ.ವಿ ರಾಮನ್ ಅವರ ನೆನಪಿನಲ್ಲಿ ಕರ್ನಾಟಕ ರಾಜ್ಯದಾದ್ಯಂತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಗಿತ್ತು.

ಈ ರಸಪ್ರಶ್ನೆ ಸ್ಪರ್ಧೆಯಲ್ಲಿ, ರಾಜ್ಯ ಮತ್ತು ಜಿಲ್ಲಾಮಟ್ಟ ಈ ಎರಡು ಹಂತದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ಚಿಕ್ಕಮಗಳೂರಿನ ಆದಿಚುಂಚನಗಿರಿ ಮಹಾವಿದ್ಯಾಲಯದ ಬಿ ಜಿ ಎಸ್ ಸಭಾಂಗಣ ಮತ್ತು ಆಲ್ದೂರಿನ ಕೃಷಿ ಪತ್ತಿನ ಸಹಕಾರ ಸಂಘ ಸಭಾಂಗಣದಲ್ಲಿ ಬಹುಮಾನ ನೀಡಿ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಇದೇ ಆಗಸ್ಟ್ 17 ಮತ್ತು 18 ರಂದು ಎರಡು ಕಡೆ, ಬೇರೆ ಬೇರೆ ಸಭಾಂಗಣದಲ್ಲಿ ನಡೆದ ಈ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಘಟ್ಟಕದ ಜೊತೆಗೆ ಚಿಕ್ಕಮಗಳೂರು ತಾಲೂಕು ಮತ್ತು ಆಲ್ದೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಘಟಕಗಳು ಈ ಸಂದರ್ಭದಲ್ಲಿ ಸಹಕಾರ ನೀಡಿ ಸಮಾರಂಭಕ್ಕೆ ಶುಭ ಹಾರೈಸಿದವು.

ರಾಜ್ಯಮಟ್ಟದ ಮೂರನೇ ಬಹುಮಾನವನ್ನು ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲ್ಲೂಕು ಸೊಲ್ಲಾಪುರದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಎಸ್. ಎಂ. ಭವ್ಯ ಮತ್ತು ಸಮಾಧಾನಕರ ಬಹುಮಾನವನ್ನು ಚಿಕ್ಕಮಗಳೂರು ನಗರದ ಜ್ಞಾನ ರಶ್ಮಿ ಪ್ರೌಢಶಾಲೆಯ ರುತಿಕಾ ಪಡೆದರು.

ಚಿಕ್ಕಮಗಳೂರು ಜಿಲ್ಲಾ ಮಟ್ಟದ ಬಹುಮಾನವನ್ನು ಆಲ್ದೂರು ಪೂರ್ಣಪ್ರಜ್ಞ ಪ್ರೌಢಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿಗಳಾದ ಪುಲಸ್ತ್ಯ ಶೆಟ್ಟಿ. ಪ್ರಥಮ ಬಹುಮಾನ, ಪ್ರದ್ಯುಮ್ನ ಶೆಟ್ಟಿ,ದ್ವಿತೀಯ ಬಹುಮಾನ ಹಾಗೂ ಇದೇ ಪೂರ್ಣಪ್ರಜ್ಞ ಪ್ರೌಢಶಾಲೆಯ ಪರೀಕ್ಷಿತ್ ಮಹಾರಾಜ್ ಮತ್ತು ಮೂಡಿಗೆರೆ ತಾಲ್ಲೂಕು ಅಂಗಡಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಹರಿಪ್ರಿಯಾ ತೃತೀಯ ಬಹುಮಾನವನ್ನು ಸಮಾನವಾಗಿ ಪಡೆದರು.

ಮಾಜಿ ಮಂತ್ರಿಗಳು, ಕುಲಪತಿಗಳು, ಪ್ರಾಂಶುಪಾಲರು, ಜನಪದ ವಿದ್ವಾಂಸರು, ಉಪನ್ಯಾಸಕರು, ಕವಿಗಳು.ಸಾಹಿತಿಗಳು ಸಂಘಟಕರು.ಹೋರಾಟಗಾರರು. ಮಾಧ್ಯಮದ ಸ್ನೇಹಿತರು ಮತ್ತು ವಿವಿಧ ಕ್ಷೇತ್ರದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ವಿಜೇತ ವಿದ್ಯಾರ್ಥಿಗಳನ್ನು ಹಾರೈಸಿದರು.
••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed