ಒಬ್ಬ ವ್ಯಕ್ತಿ ದೂರನ್ನ ನೀಡಿದ ಮೇಲೆ ಆ ದೂರಿಗೆ, ಪ್ರತ್ಯುತ್ತರ/ತೆಗೆದುಕೊಂಡ ಕ್ರಮಗಳ ಬಗ್ಗೆ ದೂರುದಾರರಿಗೆ ಮಾಹಿತಿ ನೀಡುವುದು ಅಧಿಕಾರಿಗಳ ಕರ್ತವ್ಯ….
1 min read
ಒಬ್ಬ ವ್ಯಕ್ತಿ ದೂರನ್ನ ನೀಡಿದ ಮೇಲೆ ಆ ದೂರಿಗೆ, ಪ್ರತ್ಯುತ್ತರ/ತೆಗೆದುಕೊಂಡ ಕ್ರಮಗಳ ಬಗ್ಗೆ ದೂರುದಾರರಿಗೆ ಮಾಹಿತಿ ನೀಡುವುದು ಅಧಿಕಾರಿಗಳ ಕರ್ತವ್ಯ
…, ಇದುವರೆಗೂ ನನಗೆ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ನೀಡಿರುವುದಿಲ್ಲ.
ನೆನ್ನೆ ಜೆ ಜೆ ಎಂ ಯೋಜನೆಯ ಬಗ್ಗೆ, ಅಧಿಕಾರಿಗಳ ಕಾರ್ಯ ಧಕ್ಷತೆಯ ಬಗ್ಗೆ ಚರ್ಚೆಯಾದ ನಂತರ ಒಂದಷ್ಟು ಮಾಹಿತಿಗಳು ನನ್ನ ಕೈ ಸೇರಿವೆ.
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರಾ,ಕು,ನೀ,ಮತ್ತು ನೈ ಉಪ ವಿಭಾಗ ಮೂಡಿಗೆರೆ, ಇವರು ಕಾರ್ಯಪಾಲಕ ಇಂಜಿನಿಯರ್ ಗ್ರಾ,ಕು,ನೀ,ಮತ್ತು ನೈ ವಿಭಾಗ ಚಿಕ್ಕಮಗಳೂರು ಇವರಿಗೆ ಕಾಮಗಾರಿ ಸ್ಥಳದಲ್ಲಿ 490 ಮೀಟರ್ ರೈಸಿಂಗ್ ಮೈನ್, 40 ಎಫ್ ಹೆಚ್ ಟಿ ಸಿ ಪೂರ್ಣಗೊಳಿಸಿದ್ದು ತೆರೆದ ಬಾವಿ ಹಾಗೂ ವಿತರಣಾ ಕೊಳವೆ ಮಾರ್ಗವನ್ನು ಭಾಗಶಃ ನಿರ್ವಹಿಸಿ ಪೂರ್ಣಗೊಳಿಸಿರುವುದಿಲ್ಲ ಎಂದು ತಪ್ಪು ಮಾಹಿತಿ ನೀಡಿರುತ್ತಾರೆ, ಹಾಗೆಯೇ ಕಾರ್ಯಪಾಲಕ ಇಂಜಿನೀಯರ್ ಗ್ರಾ,ಕು,ನೀ,ಮತ್ತು ನೈ ವಿಭಾಗ ಚಿಕ್ಕಮಗಳೂರು, ಇವರು ಅಧೀಕ್ಷಕ ಇಂಜಿನಿಯರ್ ಗ್ರಾ,ಕು,ನೀ,ಮತ್ತು ನೈ ವೃತ್ತ ಮಂಗಳೂರು ಇವರಿಗೆ 490 ಮೀಟರ್ ರೈಸಿಂಗ್ ಮೈನ್, 1191 ಮೀಟರ್ ವಿತರಣಾ ಮಾರ್ಗ ಹಾಗೂ 40 ಎಫ್ ಹೆಚ್ ಟಿ ಸಿ ಪೂರ್ಣಗೊಳಿಸಿದ್ದು ತೆರೆದ ಬಾವಿ ಹಾಗೂ ವಿತರಣಾ ಕೊಳವೆ ಮಾರ್ಗವನ್ನು ಭಾಗಶಃ ನಿರ್ವಹಿಸಿ ಪೂರ್ಣಗೊಳಿಸಿರುವುದಿಲ್ಲ ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೂಡಿಗೆರೆ, ಅವರು ಮಾಹಿತಿ ನೀಡಿರುತ್ತಾರೆ ಎಂದು ಪತ್ರದ ಮೂಲಕ ತಪ್ಪು ಮಾಹಿತಿ ನೀಡಿರುತ್ತಾರೆ, ಆದರೆ ಸ್ಥಳದಲ್ಲಿ ಯಾವುದೇ ರೈಸಿಂಗ್ ಮೈನ್ ಕೆಲಸ ನಡೆದಿರುವುದಿಲ್ಲ, ಹಾಗೂ ವಿತರಣಾ ಕೊಳವೆ ಮಾರ್ಗದ ಕೆಲಸವು ಸಹ ಆಗಿರುವುದಿಲ್ಲ. ಹಾಗೆಯೇ 40 ಎಫ್ ಹೆಚ್ ಟಿ ಸಿ ಎಲ್ಲಿ ಅಳವಡಿಸಿದ್ದಾರೆ ಎಂಬುದು ಸಹ ತಿಳಿದಿರುವುದಿಲ್ಲ. ಈ ಕೂಡಲೇ ಸಂಬಂಧಪಟ್ಟವರು ಆಗಿರುವ ಲೋಪದೋಷಗಳನ್ನು ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.
ವರದಿ…ನೂತನ್.ಬಿ.ಜೆ.ಬೆಟ್ಟಗೆರೆ..

