ಮಲೆನಾಡಿನಲ್ಲಿ ಮಳೆಯ ಕಾಲದಲ್ಲೂ ನೀರಿಗೆ ಬರ ನತದೃಷ್ಟ ಊರು ಹಳ್ಳದಗಂಡಿ…
1 min read
ಮಲೆನಾಡಿನಲ್ಲಿ ಮಳೆಯ ಕಾಲದಲ್ಲೂ ನೀರಿಗೆ ಬರ ನತದೃಷ್ಟ ಊರು ಹಳ್ಳದಗಂಡಿ…

ಕಳೆದ 6 ತಿಂಗಳಿನಿಂದ ಈ ಊರಿನ ಜನರು ನೀರಿಗಾಗಿ ಪರದಾಡುತ್ತಿರುವುದು ನೋಡಿದರೆ ಇದು ಮಲೆನಾಡು ಅಥವಾ ಬರದನಾಡು ಎನಿಸದೆ ಇರದು. ಮೂಡಿಗೆರೆ ತಾಲ್ಲೂಕಿನ ಹೆಸಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳದಗಂಡಿ ತನ್ನ ಸುತ್ತಮುತ್ತಲ ಎಲ್ಲಾ ಹಳ್ಳಿಗೆ ನೀರು ಪೂರೈಸುವ ಗ್ರಾಮ ಆದರೆ ಪರಿಶಿಷ್ಟ ಪಂಗಡದ ಜನರೇ ಅತೀ ಹೆಚ್ಚು ವಾಸಿಸುವ ಈ ಗ್ರಾಮಕ್ಕೆ ಮಾತ್ರ ಕುಡಿಯಲು ಸಹ ನೀರಿಲ್ಲ ಮಳೆಗಾಲದಲ್ಲಿ ಮಳೆಯನ್ನೇ ನಂಬಿ ಬದುಕುವ ಇಲ್ಲಿಯ ಜನರು ಬೇಸಿಗೆಯಲ್ಲಿ 2 ಕಿಮೀ ನೀರಿಗಾಗಿ ಅಲೆಯಬೇಕು ದಿನನಿತ್ಯದ ಬದುಕಿಗಾಗಿ ಕೂಲಿ ಕೆಲಸ ಮಾಡಿ ಮನೆಗೆ ಬಂದರು ನೆಮ್ಮದಿಯಿಲ್ಲದಂತೆ ಹಾಗಾಗಿದೆ. ‘ಹಳ್ಳ’ದಗಂಡಿ ಯಲ್ಲಿ ಮಳೆಗಾಲದಲ್ಲೂ ನೀರಿಲ್ಲ.
ಮೂಡಿಗೆರೆ ತಾಲೂಕು.ಹೆಸಗಲ್ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳ್ಳದಗಂಡಿ ಗ್ರಾಮದ ಎರಡು ಬದಿಯಲ್ಲೂ ವರ್ಷವಿಡೀ ಹರಿಯುವ ಹಳ್ಳ ಇದ್ದರೂ ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಅಲ್ಲಿರುವ ನೀರಿನ ಮೂಲ ಗುರುತಿಸಿ ಸಮರ್ಪಕ ಯೋಜನೆ ರೂಪಿಸ ಬೇಕಾದ ಇಲಾಖೆಗಳು , ಸ್ಥಳೀಯ ಪಂಚಾಯಿತಿ,ಜನಪ್ರತಿನಿಧಿಗಳು ನಿದ್ದೆಯಲ್ಲಿದ್ದಾರೆ ಈ ಬಗ್ಗೆ ಶಾಸಕರ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ಇಲಾಖೆಗಳಿಗೂ ಮನವಿ ಸಲ್ಲಿಸಿದರು ಯಾರು ನಮ್ಮ ಅಳಲು ಕೇಳಲಿಲ್ಲ ಇಂತಹ
ಮಳೆಗಾಲದಲ್ಲೂ ಇದೀಗ ಟ್ಯಾಂಕರ್ ಮೂಲಕ ಕಳೆದ 3 ತಿಂಗಳಿನಿಂದ ಅಮಾವಾಸ್ಯೆಗೋ ,ಹುಣ್ಣಿಮೆಗೋ ಎಂಬಂತೆ ಪೂರೈಸುತ್ತಿದ್ದಾರೆ ಹಿಂದೆ ಇದ್ದ ನೀರಿನ ಪಂಪ್ ಕೆಟ್ಟು ದುರಸ್ಥಿಯಾಗದೆ ನಮಗೆ ಈ ಸಮಸ್ಯೆ ಆಗಿದೆ ಇದರ ಜೊತೆ ವಿದ್ಯುತ್ ಸಂಪರ್ಕ ಸಮಸ್ಯೆ, ಈಗ ಜೆಜೆಎಂ ಕಾಮಗಾರಿ ಪೂರ್ಣ ಆದರೂ ಮನೆಗೆ ಬಾರದ JJM ನೀರು, ಅರ್ಥವಿಲ್ಲದ ಯೋಜನೆ ಆಗಿದೆ ದಿನವಿಡಿ ಕೂಲಿ ಕೆಲಸ ಮಾಡಿ ಮನೆಗೆ ಬಂದು ಸಂಜೆ 7 ರ ತನಕ 2 ಕಿಲೋಮೀಟರ್ ದೂರದಿಂದ ನೀರು ಹೊರಬೇಕು, ಒಟ್ಟಾರೆಯಾಗಿ ಗ್ರಾಮಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾಪಂಚಾಯತ್ ಮತ್ತು KEB ಯ ಸಮಸ್ಯೆಗೆ ಗ್ರಾಮಸ್ಥರಾದ ನಾವು ಅನುಭವಿಸುತ್ತಿದ್ದೇವೆ . ನಾವು ಮತ ಹಾಕಿ ಗೆಲ್ಲಿಸಿದ ನಮ್ಮ ಹಣೆಬರಹಕ್ಕೆ ಹೊಣೆ ಯಾರು” ನಮ್ಮ ಸಮಸ್ಯೆ ಬಗೆಹರಿಸಲು ಇನ್ನೆಲ್ಲಿಗೆ ನಾವು ಅಲೆಯ ಬೇಕು ನಾವು ಯಾರಲ್ಲಿ ನಮ್ಮ ನೋವೋ ಹೇಳ ಬೇಕು ಕೇಳುವರಾರು ನಮಗೆ ತೋಚದಾಗಿದೆ .

