ಪೋಸ್ಟ್ ಮ್ಯಾನ್ ಜಬ್ಬಾರ್ ಮತ್ತು ನಾನು….
1 min read
ಪೋಸ್ಟ್ ಮ್ಯಾನ್ ಜಬ್ಬಾರ್ ಮತ್ತು ನಾನು
” ಕೇ. ಪಿ. ಪೂರ್ಣಚಂದ್ರ ತೇಜಸ್ವಿ ಅವರ “ಕೃಷ್ಣಗೌಡನ ಆನೆ ” ಕತೆಯಲ್ಲಿ ಬರುವ ಪೋಸ್ಟ್ ಮ್ಯಾನ್ ಜಬ್ಬಾರ್ ಆತನ ನಿಜ ನಾಮ ಜಾಹೀರ್, ಈತ ನನಗೆ 1984 ರಿಂದಲೂ ಪರಿಚಿತ ಮುಖ. ನಾನಾಗ ಮೂಡಿಗೆರೆ ಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ high ಸ್ಕೂಲ್ ಓದುತಿದ್ದೆ. ಮೂಡಿಗೆರೆಯ ಬೀದಿ ಯಲ್ಲಿ ಮನೆ ಮನೆಗೆ ಪೇಪರ್ ಓಡಾಡುತ್ತಿದ್ದಾಗ ನೋಡ್ದಿದ್ದೆ. ಆದ್ರೆ ಆಗ ಅವನೇನು ದೊಡ್ಡ ಸೆಲೆಬ್ರಿಟಿ ಅಲ್ಲ ಹಾಗಾಗಿ ಸಾವಿರಾರು ಜನರೊಳಗೆ ಅವನೂ ಒಬ್ಬ, ಹಾಗೆ ನಗಣ್ಯ ವ್ಯಕ್ತಿ. ಹೀಗಿರುವ ಈತ ಇಂದು ನಾಡಿನೆಲ್ಲೆಡೆ ಪರಿಚಿತ. ನನಗೆ ಪರಿಚಿತನಾದುದು 1986-87 ರಲ್ಲಿ ನಾನು ಪಿಯು ಓದುತ್ತಿರುವಾಗ ನಮ್ಮ ಮನೆಗೂ ಪ್ರಜಾವಾಣಿ, ಮಯೂರ, ತರಂಗ, ಸುಧಾ,ಪತ್ರಿಕೆಗಳನ್ನು ಹಾಕುತಿದ್ದ ಪೇಪರ್ ಬರುತ್ತಿದ್ದುದೆ ಮಧ್ಯಾಹ್ನ ದ ಹೊತ್ತಿಗೆ. ಊರೆಲ್ಲ ಸುತ್ತಾಡಿ ಪೋಸ್ಟ್ ಕೆಲಸ ಮುಗಿಸಿ ಬಿಡುವಾದಾಗ ಇದನ್ನು ಮಾಡುತ್ತಿದ್ದ ಜಾಹೀರ್, ನಮ್ಮ ಎದುರು ಮನೆಯಲ್ಲಿ ರಾಮಣ್ಣ ಮತ್ತು ಅವರ ತಂಗಿ ಆಶಾ ಕ್ಕ ಇಬ್ಬರೂ ಪೋಸ್ಟ್ ಆಫೀಸ್ ನಲ್ಲಿ ಕಚೇರಿ ಒಳಗೆ ಗುತ್ತಿಗೆ ಕೆಲಸದಲ್ಲಿದ್ದರು. ಮಾತಾಡುವಾಗ ಇವನ ಸುದ್ದಿಯೂ ಬರುತಿತ್ತು. ಹೀಗೆ ನಾನು ಪದವಿ ಮುಗಿಸುವಾಗ ಅಂದರೆ 1990 ನೇ ಇಸವಿ ನವಂಬರ್ ತಿಂಗಳಿನ ಒಂದು ದಿನ ನಾನು ಸಂಜೆ revenue ಅಧಿಕಾರಿಯನ್ನು ಭೇಟಿ ಯಾಗಲು ಹೋಗಬೇಕಾಗಿತ್ತು. ಅಪ್ಪ ಮೂಡಿಗೆರೆಗೆ ಬಂದವರು ಕಾಫಿ CRC ಆಗಿಲ್ಲ ನಾಳೆ ಸಂಜೆ ಕೊಡುವೆ ಅಂದಿದ್ದಾರೆ ಹೋಗಿ ಕೇಳಿ ಬಾ ಅಂದಿದ್ರು. ಅದರಂತೆ ನಾನು ಕಾಫೀಕುಡಿದು ಹೊರಡುವ ತಯಾರಿಯಲ್ಲಿದ್ದೆ. ಆದ್ರೆ ಅಣ್ಣ ಆಫೀಸ್ ನಿಂದ ಬಂದಿರಲಿಲ್ಲ. ಅತ್ತಿಗೆ ರೂಮ್ ನಲ್ಲಿ ಮಗುವನ್ನು ಮಲಗಿಸುತಿದ್ರು. ತದಮಾಡಿದ್ರೆ ಕಟ್ಟಲಾಗುತ್ತೆ ಅಂತ ತಮ್ಮನಿಗೆ ಹೇಳಿ ನನ್ ಕುದುರೆ ( ಹರ್ಕುಲಸ್) ಏರಿ ಮಸೀದಿ ರಸ್ತೆಗೆ ಹೋಗಲು ಷಾ ಮಿಲ್ ಶಿವೇಗೌಡ ( ಬಾಸೆಗೌಡ) ಮನೆ ದಾಟಿ ಪೇಟೆ ಬೀದಿಗೆ ಬಂದು ಮಸೀದಿ ರಸ್ತೆ ದಾಟಿ ಬಸ್ ಸ್ಟಾಂಡ್ ಹಿಂಭಾಗ ದಲ್ಲಿ ಕೆಳಗೆ ಇದ್ದ ಅವರ ಮನೆ ಕಮ್ ಕಚೇರಿಗೆ ಬಂದು ಅವರನ್ನು ಕಾಯ್ದು ಅವರು ಬಂದಾಗ ಕೇಳಿ ಇನ್ನೊಂದೆರಡು ದಿನದಲ್ಲಿ ಕೊಡುವೆ ಎಂದಾಗ ಹಿಂತಿರುಗಿ ಮನೆಗೆ ಬಂದ ದಾರಿಯಲ್ಲಿ ಹೊರಟೆ. ಆದರೆ ನನ್ ದುರಾದೃಷ್ಟ, ಮಸೀದಿ ಪಕ್ಕ ರಸ್ತೆ ಯ ಇಳಿಜಾರಿನಲ್ಲಿ ಬರುತ್ತಿದ್ದೆ ಮುಂದೆ ಒಂದು ಮೊಪೇಡ್ ಹೋಗುತ್ತಿತ್ತು, ಆತ ಒಮ್ಮೆಗೆ ಎಡಗಡೆ ಹೋಗುತ್ತಿದ್ದವನು ಬಲ ಭಾಗಕ್ಕೆ ಕವಲೊಡೆದ ರಸ್ತೆಗೆ ತಿರುಗಿಸಿದ. ಹಿಂದೆ ಇದ್ದ ನಾನು ಇಳಿಜಾರಿನಲ್ಲಿ ಕತ್ತಲೆ ಯಲ್ಲಿ ಬರುತ್ತಿದ್ದೆ. ಒಮ್ಮೆಗೆ ತಿರುಗಿಸಿದ್ದರಿಂದ ನನ್ ಸೈಕಲ್ಮತ್ತು ಮೊಪೇಡ್ ನಡುವೆ ಆಕ್ಸಿಡೆಂಟ್ ಆಯ್ತು.. ನಾನು ಹಾರಿ ರಸ್ತೆಯಿಂದ ಪಕ್ಕ ದ ಚರಂಡಿಗೆ ಬಿದ್ದೆ. ಆತನೂ ಗಾಡಿ ನಿಲ್ಲಿಸಿ ದ ಇನ್ಯಾರೋ ಬಂದು ಎತ್ತಿದರು. ನಾನು ಮತ್ತು ಸೈಕಲ್ ಚರಂಡಿಯಿಂದ ರಸ್ತೆಗೆ ಬಂದ್ವಿ. ಬಲಕ್ಕೆ ಹೋಗುವಾಗ ನೋಡಿ ಹೋಗಬಾರದೇ ಅಂದ್ರು ಜಬ್ಬಾರ್ ಗೆ, ಸರಿ ಹೇಗೂ ಗೊತ್ತಿರುವ ಮನುಷ್ಯನೇ ಆಗಿದ್ದರಿಂದ ಏನೂ ಆಗಿಲ್ಲ ವಲ್ಲ ಅಂತ ಸೈಕಲ್ ಹತ್ತಿ ಮನೆಗೆ ಹೋಗಲು l ಫೆಡಲ್ ಮೇಲೆ ಕಾಲಿಟ್ಟು ಪೆಡಲ್ ಮುಂದಕ್ಕೆ ಮಾಡಿದೆ ತಕ್ಷಣವೇ ರಸ್ತೆಯ ಮೇಲೆಲ್ಲಾ ರಕ್ತ ಚೆಲ್ಲಾಡಿತು ಇದೆಲ್ಲಿಂದ ಬಂದಿತ್ತು ರಕ್ತ ಎಂದು ನೋಡಿದರೆ ಚಪ್ಪಲಿ ತುಂಬಾ ರಕ್ತ ನಿಂತಿತ್ತು. ಗಾಬರಿ,ಆಶ್ಚರ್ಯದಿಂದ ಚಪ್ಪಲಿ ಬಿಚ್ಚಿ ಎಲ್ಲಿ ಗಾಯವಾಗಿದೆ ಎಂದು ಬಲ ಗಾಲನ್ನು ನೋಡಿಕೊಂಡೆ. ಪ್ಯಾಂಟಿನ ತೋಳನ್ನು ಮೇಲೆತ್ತಿ ಮುಂಗಾಲಿನಿಂದ ರಕ್ತ ಸುರಿಯತ್ತಿತ್ತು. ನೋಡಿದರೆ ಮುಂಗಾಲಿನಲ್ಲಿ ಗೇಣುದ್ದದ ಗಾಯವಾಗಿತ್ತು ರಕ್ತ ಸುರಿಯುತ್ತಿತ್ತು ತಕ್ಷಣವೇ ಜಬ್ಬಾರ್ ಸೈಕಲ್ಲನ್ನು ಅಲ್ಲೇ ನಿಲ್ಲಿಸಿ ಮೊಪೆಡ್ ನಲ್ಲಿ ಮುಡಿಗೆರೆಯ ಸರಕಾರಿ ಎಂಜಿಎಂ ಆಸ್ಪತ್ರೆಗೆ ಕರೆತಂದ ಎಮರ್ಜೆನ್ಸಿಯಲ್ಲಿ ತೋರಿಸಿದಾಗ ಹೊಲಿಗೆ ಹಾಕಬೇಕೆಂದು ಹೇಳಿದರು. ಬರೀ ಡ್ರೆಸ್ಸಿಂಗ್ ಆಗುವುದಿಲ್ಲ. ಮುಂಗಾಲಿನಲ್ಲಿ ಗಾಯವಾಗಿರುವುದರಿಂದ ಬೇಗ ವಾಸಿಯಾಗುವುದಿಲ್ಲ, ಆದ್ದರಿಂದ ಹೊಲಿಗೆ ಹಾಕಲೇಬೇಕು ಎಂದರು. ಆಗ ಹೆದರಿದ ನಾನು ಸಮಾಲೋಚಿಸಿ ಮನೆಗೆ ತಿಳಿಸಲು ಹೇಳಿದ್ದರಿಂದ ಆತನಿಗೆ ಮನೆ ಗೊತ್ತಿದ್ದರಿಂದ, ಆಗಿನ ದಿನಗಳಲ್ಲಿ ಮೊಬೈಲ್ ಆಗಲಿ ಲ್ಯಾಂಡ್ ಲೈನ್ ದೂರವಾಣಿ ಯಾಗಲಿ ಇಲ್ಲದ್ದರಿಂದ ಆತನೇ ತನ್ನ ಗಾಡಿಯಲ್ಲಿ ಮನೆಗೆ ಹೋಗಿ ಹೇಳಿದಾಗ ಅತ್ತಿಗೆಗೆ ಗೊತ್ತಾಗಿದ್ದು ನಾನು ಮನೆಯಿಂದ ಹೊರಗೆ ಬಂದುದು. ತಮ್ಮ ಹೇಳಿರಲಿಲ್ಲ. ಕೇಳಿದ್ರೆ ಹೇಳಲು ಅತ್ತಿಗೆ ರೂಮ್ ನಿಂದ ಬಂದಿರಲಿಲ್ಲ. ಗಾಬರಿಯಾದ ಅತ್ತಿಗೆ ಬರುವ ದಾರಿಯಲ್ಲಿ ಅಣ್ಣ ನ ಆಫೀಸ್ ಇದ್ದುದರಿಂದ ಅಲ್ಲಿಗೆ ವಿಷಯ ತಿಳಿಸಿ ಆಟೋದಲ್ಲಿ ಬಂದರು. ಅಣ್ಣ ಬೈಕ್ ನಲ್ಲಿ ಬಂದ. ಅತ್ತಿಗೆ ಹೇಳಿ ಹೋಗಬಾರದ ಜಬ್ಬಾರ್ ಬಂದು ಹೇಳಿದಾಗ ಇಲ್ಲ ನಮ್ಮ ಮನೆಯಲ್ಲಿ ಹೋಗಿಲ್ಲ ಇಲ್ಲೇ ಇದ್ದಾರೆ ಬೇರೆ ಯಾರೋ ಇರಬಹುದು ಅಂದಾಗ ಜಬ್ಬಾರ್ ಹೇಳಿದ ಮೇಲೆ ತಮ್ಮ ನನ್ನು ಕೇಳಿದಾಗ ಕನ್ಫರ್ಮ್ ಆಯ್ತಂತೆ. ಅಣ್ಣ ಬಂದವನು ಏನೋ ಜಾಹೀರ್ ಹೀಗೆ ಮಾಡಿದ್ದಿ ಎಲ್ಲ ಖರ್ಚು ನಿಂದೆ ಅಂದಾಗ ಸಾರ್ ನಾನು ಎಲ್ಲಿಂದ ತರಲಿ ನಿಮ್ಗೆ ಗೊತ್ತಲ್ಲ ನನ್ನ ಪರಿಸ್ಥಿತಿ ಅಂದ. ಸುಮ್ನೆ ಹೇಳಿದೆ ನೀನೇನೂ ಕೊಡುವುದು ಬೇಡ ಅಂತ ಡಾಕ್ಟರ್ ಗೆ ಹೊಲಿಗೆ ಹಾಕಲು ತಿಳಿಸಿದ. ಅವರು ಇಂಜೆಕ್ಷನ್ ಕೊಟ್ಟು ಹೊಲಿಗೆ ಹಾಕಲು ಸಿದ್ದರಾದರು. ಆದರೆ ಮುಂಗಾಲ ಮೂಳೆ ಮೇಲೆ ಗಾಯವಾಗಿದ್ದರಿಂದ ಚರ್ಮ ಸಿಗದೆ ಕಷ್ಟ ಪಟ್ಟು 9 ಹೊಲಿಗೆ ಹಾಕಿದರು. ಆಸ್ಪತ್ರೆ ಯಿಂದ ಮನೆಗೆ ಬಂದ್ವಿ ಮಾತ್ರೆ ಅದೂ ಇದು ಅಂತ ತುಂಬಾ ದುಡ್ಡು ಖರ್ಚು ಆಯ್ತು. ನವಂಬರ್ ಮತ್ತು ಡಿಸೆಂಬರ್ ವರೆಗೆ ಕಾಲೇಜಿಗೆ ಹೋಗಲಾಗಲಿಲ್ಲ. ಅದು ನನ್ನ ಅಂತಿಮ ವರ್ಷ ಬೇರೆ. ಇದರ ನಡುವೆ ಒಮ್ಮೆ ಹೊಲಿಗೆ ಬಿಚ್ಚಿ ಹೋಯ್ತು ಕಾರಣ ಚರ್ಮ ಮೆತ್ತಗಾಗಿ ಜಾರಿಕೊಂಡಿತು ಡಾಕ್ಟರ್ ಹೊಲಿಯಲು ಕಷ್ಟ ಪಟ್ಟು ಮಾಡಿದ್ರು. ಅನಂತರ ಒಂದಿನ ಕಾಲೇಜಿನಿಂದ ಹೇಳಿ ಕಳಿಸಿದ್ರು ಯಾಕೆ ಬರ್ತಿಲ್ಲ ಅಂತ. ಹೊಲಿಗೆ ಬಿಚ್ಚಿಸಲು ಹಾಸ್ಪಿಟಲ್ ಗೆ ಹೋದವನು ಆಟೋ ದಲ್ಲಿ ಕಾಲೇಜಿಗೆ ಹೋದೆ ವಿಷಯ ತಿಳಿದು ನಮಗೆ ಗೊತ್ತೇ ಇಲ್ಲ ನಾವು ನೀವು ಕಾಲೇಜ್ ಬಿಟ್ರಿ ಅಂದ್ಕೊಂಡಿದ್ವಿ ಅಂದ್ರು. ಹೀಗೆ ಡಿಸೆ0ಬರ್ ಅಂತ್ಯಕ್ಕೆ NSS ಕ್ಯಾಂಪ್ ಇದೆ ಬನ್ನಿ ಅಂದ್ರು. ಸರ್ ಆಗಲ್ಲ ಅಂದೆ. ನೀವೇನೂ ಕೆಲಸ ಮಾಡುವುದು ಬೇಡ ಬರಿ ಸ್ಟೇಜ್ ಪ್ರೋಗ್ರಾಮ್ ನೋಡಿಕೊಳ್ಳಿ ಸಾಕು ಅಂದ್ರು ಹೋದೆ. ಆದ್ರೆ ಹುಡುಗಾಟಿಕೆ, ಒಮ್ಮೆ ಕಾಲು ಜಾರಿ ಬಿದ್ದು ಅದೇ ಗಾಯಕ್ಕೆ ಏಟಾಯಿತು.
ಅಂತೂ ಕ್ಯಾಂಪ್ ಮುಗಿಸಿ ಜನವರಿಯಲ್ಲಿ ಬಂದ್ವಿ. ಅನಂತರ ಕಾಲೇಜು ಪ್ರಾರಂಭ. ಪದವಿ ಮುಗಿಯಿತು ಅಣ್ಣ ನಿಗೆ ಕೊಡಗಿನ ಸೋಮವಾರಪೇಟೆ ಗೆ ವರ್ಗವಾಯಿತು. ನಾವು ಮನೆ ಖಾಲಿ ಮಾಡಿದ್ವಿ ಅಲ್ಲಿಂದ ಮಾಡರಾಸಿಗೆ ಎಂ, ಎ ಮಾಡಲು ಹೋದೆ. ಮೂಡಿಗೆರೆ ಗೆ ಬರುವುದು ಕಡಿಮೆಯಾಯಿತು. ಜಬ್ಬಾರ್ ಅಲ್ಲೆ ಮೂಡಿಗೆರೆಯಲ್ಲಿ ಪೋಸ್ಟ್ ಕೆಲಸ ಬಿಟ್ಟು ಪೇಪರ್ ಕೆಲಸ ಮಾಡುತ್ತಿದ್ದ. ತೇಜಸ್ವಿ ಯವರು ಕತೆ ಬರೆದು ಅದು ಪಠ್ಯ ಆದಾಗ ಎಲ್ಲರಿಗೂ ಗೊತ್ತಾಯಿತು. ಹೀಗಿದ್ದ ನಮ್ಮ ಜಬ್ಬಾರ್ ಗೆ ನಾನು ಮೂಡಿಗೆರೆಗೆ ಹೋದಾಗ ಸಿಕ್ಕಿದಾಗ ಮಾತಾಡುತಿದ್ದ. ಇತ್ತೀಚಿಗೆ ಮೂಡಿಗೆರೆ ಯಲ್ಲಿ ಸಾಹಿತ್ಯ ಸಂಭ್ರಮ ವೇದಿಕೆಯವರು ರಾಜ್ಯ ಮಟ್ಟದ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸಂದರ್ಭದಲ್ಲಿ ಇದೆ ಜಾಹೀರ್ ಗೆ ನನ್ ಕೈ ಯಿಂದ ಸನ್ಮಾನ ಮಾಡುವ ಅವಕಾಶ ದೊರೆಯಿತು. ಇಂದಿಗೂ ಮೂಡಿಗೆರೆಯ ಬಸ್ ಸ್ಟಾಂಡ್ ಪಕ್ಕದಲ್ಲಿ ಅಂಗಡಿ ಯ ಮೆಟ್ಟಿಲಿನ ಮೇಲೆ ಪೇಪರ್ ಮಾರುತ್ತಾನೆ. ಮೊಪೇಡ್ ಬದಲಿಗೆ ಈಗ ಆಕ್ಟಿವ್ ಹೋಂಡಾ ಬಿಳಿ ಗಾಡಿ ಬಂದಿದೆ.. ಉಮೇಶ್ ಹೊಸಹಳ್ಳಿ, ಪ್ರಿನ್ಸಿಪಾಲರು ಹಾಗೂ ಸಾಹಿತಿ.

