ನಯನಾ ಮೋಟಮ್ಮ ವಿರುದ್ಧ ಪಶ್ಚಾತಾಪ ಧರಣಿ….
1 min read
ನಯನಾ ಮೋಟಮ್ಮ ವಿರುದ್ಧ ಪಶ್ಚಾತಾಪ ಧರಣಿ
ಅಕ್ಷರತೋರಣ, ಚಿಕ್ಕಮಗಳೂರು: ಇತ್ತೀಚೆಗೆ ಮೂಡಿಗೆರೆಯಲ್ಲಿ ನಡೆದ ಹಿಂದೂ ಮಹಾಸಭಾ ಗಣಪತಿ ಉತ್ಸವದ ಲಾಂಚನ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್ ಜೊತೆ ಶಾಸಕಿ ನಯನಾ ಮೋಟಮ್ಮ ವೇದಿಕೆ ಹಂಚಿಕೊಂಡು ಕೋಮುವಾದಿಗಳ ಪರವಾಗಿ ಮಾತನಾಡಿದ್ದಾರೆಂದು ಆರೋಪಿಸಿ ಇಂದು ನಗರದ ಗಾಂಧಿ ಪ್ರತಿಮೆ ಎದುರು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪಶ್ಚಾತಾಪ ಧರಣಿ ಕಾರ್ಯಕ್ರಮ ನಡೆಸಲಾಯಿತು.
ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಕಾಂಗ್ರೆಸ್ ಪಕ್ಷ ದೇಶದಲ್ಲಿ ಮತ್ತು ರಾಜ್ಯದಲ್ಲಿ ಜಾತ್ಯತೀತ ಸಿದ್ಧಾಂತಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಆರ್ ಎಸ್ ಎಸ್ ಮತ್ತು ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್ಸಿಗರನ್ನು ಉಚ್ಚಾಟಿಸುವಂತೆ ಸೂಚಿಸಿದ್ದಾರೆ ಆ ಹಿನ್ನೆಲೆಯಲ್ಲಿ ಮೂಡಿಗೆರೆ ಶಾಸಕ ನಯನಮೋಟಮ್ಮ ಆರ್ ಎಸ್ ಎಸ್ ಮತ್ತು ಬಿಜೆಪಿ ಅವರೊಂದಿಗೆ ನೇರ ಸಂಬಂಧ ಹೊಂದಿರುವುದು ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಸಾಬೀತಾಗಿದ್ದು, ಕೂಡಲೇ ಅವರನ್ನು ಪಕ್ಷದಿಂದ ಹುಚ್ಚಾಟಿಸುವಂತೆ ಒತ್ತಾಯಿಸಿದರು.
ರೈತ ಸಂಘದ ಮಾಜಿ ಅಧ್ಯಕ್ಷ ಗುರು ಶಾಂತಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷದಿಂದ ಶಾಸಕಿಯಾಗಿ ಆಯ್ಕೆಯಾಗಿರುವ ನಯನಮೋಟಮ್ಮ 30-40 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿದಾರರಾಗಿರುವ ಪ್ರಮೋದ್ ಮುತಾಲಿಕ್ ರೊಂದಿಗೆ ವೇದಿಕೆ ಹಂಚಿಕೊಂಡಿರುವುದು ಅಕ್ಷಮ್ಯ ಅಪರಾಧ ಎಂದು ಹೇಳಿದರು.
ಜಾತ್ಯತೀತ ಸಿದ್ಧಾಂತದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ಕಳೆದ ಚುನಾವಣೆಯಲ್ಲಿ ಪ್ರಗತಿಪರ ಸಂಘಟನೆಗಳು ಮತ್ತು ದಲಿತ ಸಂಘಟನೆಗಳು ಒಗ್ಗೂಡಿ ಮತ ಚಲಾಯಿಸಿದ ನಮಗೆ ನಯನಾ ಅವರ ವರ್ತನೆ ನೋವು ತಂದಿದೆ ಅವರನ್ನು ಬೆಂಬಲಿಸಿದೆ ತಪ್ಪಿಗೆ ಇಂದು ಪಶ್ಚಾತಾಪ ಧರಣಿ ನಡೆಸಿದ್ದೇವೆ ಎಂದರು. ಈ ಸಂದರ್ಭದಲ್ಲಿ ಮರ್ಲೆಅಣ್ಣಯ್ಯ, ಅಂಗಡಿ ಚಂದ್ರು, ಸಿಪಿಐಎಂಎಲ್ ರುದ್ರಯ್ಯ, ವೈಚಾರಿಕ ವೇದಿಕೆ ಮಂಜುನಾಥ, ಮರುಗುಂದಪ್ರಸನ್ನ, ಭರತ್.ಕೆ.ಮಂಜಯ್ಯ, ರೈತ ಸಂಘಟನೆಗಳ ಹಲವಾರು ಮುಖಂಡರು ಪ್ರಗತಿಪರರು ಭಾಗವಹಿಸಿದ್ದರು…
ವರದಿ..
ಭಾರತಿಉಮೇಶರಾಜಅರಸು..ಚಿಕ್ಕಮಗಳೂರು..
8971536986….🙏

