ಆ.22ಕ್ಕೆ ಮಂತ್ರಾಲಯದಲ್ಲಿ ಪ್ರಪ್ರಥಮ ಅಂತರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಸೂರಿ ಶ್ರೀನಿವಾಸ್…..
1 min read
ಆ.22ಕ್ಕೆ ಮಂತ್ರಾಲಯದಲ್ಲಿ ಪ್ರಪ್ರಥಮ ಅಂತರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಸೂರಿ ಶ್ರೀನಿವಾಸ್
ತರೀಕೆರೆ : ತೆಲಂಗಾಣ, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ
ಮತ್ತು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಘಟಕಗಳಿಂದ ರಾಜ್ಯದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಪ್ರ ಪ್ರಥಮ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧೀಶರಾದ ಸುಬುದೇಂದ್ರ ತೀರ್ಥ ಸ್ವಾಮಿಯವರ ಅನುಮತಿಯ ಮೇರೆಗೆ ಪರಿಷತ್ತಿನ ಘಟಕಗಳೆಲ್ಲವೂ ಸೇರಿ ಈ ಆಗಸ್ಟ್ 22 ರ ಶುಕ್ರವಾರ ಒಂದು ದಿನದ ಸಾಹಿತ್ಯ ಸಮ್ಮೇಳನ ನಡೆಸಲು ನಿಶ್ಚಯಿಸಲಾಗಿದೆ ಎಂದು ತಿಳಿಸಿದ್ದಾರೆ..
ಈ ಸಮಾರಂಭದಲ್ಲಿ ಉದ್ಘಾಟನೆಯನ್ನು ಮಠದ ಪೀಠಾಧೀಶರಾದ ಸುಬುಧೇಂದ್ರ ತೀರ್ಥ ಸ್ವಾಮಿಜಿ ಸಾನಿಧ್ಯವನ್ನು ವಹಿಸಲಿದ್ದಾರೆ. ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾದ
ಆಂಧ್ರಪ್ರದೇಶದ ರಾಜ್ಯಪಾಲರಾದ ಅಬ್ದುಲ್ ನಜೀರ್ ಸಾಬ್, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಪಾಲ್ಗೊಳ್ಳಲಿದ್ದಾರೆ. ಎಂದು ಅವರು ತಿಳಿಸಿದರು.
ಪ್ರತಿ ರಾಜ್ಯ ಘಟಕಗಳಿಂದ ಈ ಸಮ್ಮೇಳನಕ್ಕೆ ಪದಾಧಿಕಾರಿಗಳು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಲಿದ್ದು, ವಿಚಾರ ಗೋಷ್ಠಿ, ಕುಮಾರವ್ಯಾಸ ಭಾರತದ ಗಮಕವಾಚನ ಮತ್ತು ವ್ಯಾಖ್ಯಾನ ಗೋಷ್ಠಿ ಬಹುಭಾಷಾ ಕವಿ ಗೋಷ್ಠಿ, ಕನ್ನಡ ಸಾಹಿತ್ಯಕ್ಕೆ ಗಡಿನಾಡ ಕನ್ನಡಿಗರ ಕೊಡುಗೆ ಮುಂತಾದ ವಿಷಯಗಳು ಒಳಗೊಂಡಂತೆ ವಿನೂತನವಾದ ಕಾರ್ಯಕ್ರಮವಿದ್ದು, ಸಮ್ಮೇಳನ ಅಂದು ಬೆಳಗ್ಗೆ 9-30ಕ್ಕೆ ಉದ್ಘಾಟನೆಯಾಗಲಿದೆ. ನಂತರ ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭವೂ ಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ ಎಂದರು.
ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಶಿಯವರನ್ನೊಳಗೊಂಡಂತೆ ತೆಲಂಗಾಣ ರಾಜ್ಯಾಧ್ಯಕ್ಷ ಗುಡಿಗಂಟಿ ವಿಠಲ್, ಆಂಧ್ರಪ್ರದೇಶದ ರಾಜ್ಯಾಧ್ಯಕ್ಷ ಅಂಜನ್ ಕುಮಾರ್, ಮಹಾರಾಷ್ಟ್ರದ ಅಧ್ಯಕ್ಷ ಸೋಮಶೇಖರ್ ಜಮಶೆಟ್ಟಿ ಹಾಗೂ ಗೋವಾ ಅಧ್ಯಕ್ಷ ಸಿದ್ದಣ್ಣ ಮೇಟಿ ರವರ ಸಂಪೂರ್ಣ ಸಹಕಾರದಿಂದ ಅಂತರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ತಿಳಿಸಿದ್ದಾರೆ. ಸಾಹಿತ್ಯಾಕ್ಷರುಗಳು ಜೋತಿರವರನ್ನೊಳಗೊಂಡಂತೆ ತೆಲಂಗಾಣ ರಾಜ್ಯಾಧ್ಯಕ್ಷ ಗುಡಿಗಂಜಿ ಎಕಲ್, ಆಂಧ್ರಪ್ರದೇಶದ ರಾಜ್ಯಾಧ್ಯಕ್ಷ ಅಂಜನ್ ಕುಮಾರ್ ಮಹಾರಾಷ್ಟ್ರದ ಅಧ್ಯಕ್ಷ ಸೋಮಶೇಖರ್ ಜಮಶೆಟ್ಟಿ ಹಾಗೂ ಗೋಮ ಅಧ್ಯಕ್ಷ ಸಿದ್ದಣ್ಣ ಮೇಟಿ ರವರ ಸಂಪೂರ್ಣ ಸಹಕಾರದಿಂದ ಅಂತರಾದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ತಿಳಿಸಿದ್ದಾರೆ. ಸಾಹಿತ್ಯಾಸಕ್ತರುಗಳು 9449538982, 9972058159. ಸಂಪರ್ಕಿಸಲು ಕೋರಲಾಗಿದೆ.

