ಮಣ್ಣನ್ನ ಎಲ್ಲಿಂದ ತರ್ತಿದ್ದಾರೆ?
1 min read
ನೀರು ನಿಲ್ಲಬೇಕಾದ ತಗ್ಗಿನ ಜಾಗಗಳನ್ನೆಲ್ಲ ಮಣ್ತುಂಬಿ ಮಟ್ಟ ಮಾಡ್ತಿದಾರಲ್ಲ,!
ಈ ಮಣ್ಣನ್ನ ಎಲ್ಲಿಂದ ತರ್ತಿದ್ದಾರೆ?
ಭೂಮಿಯನ್ನು ಅಗೆದು, ಬಗೆದು ಕಿತ್ತು ತಂದು ಇನ್ನೆಲ್ಲೋ ಸುರಿಯುತ್ತಿರುವುದು ಈ ಭೂಮಿಯ ಮೇಲೆ ಅಮಾನುಷವಾಗಿ ನಡೆಯುತ್ತಿರುವ ಅತ್ಯಾಚಾರ.
ಅವ್ಯಾಹತವಾಗಿ ನಡೆಯುತ್ತಿರುವ ಭೂ-ಪರಿವರ್ತನೆಯ ನೇರ ಪರಿಣಾಮ ಇದು. ತುಂಬಿದ ಜಾಗ ಹಾಗೂ ತುಂಬಲು ಮಣ್ಣು ತೆಗೆದ ಜಾಗ ಎರಡೂ ತನ್ನ ನಿಜಸ್ವರೂಪವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತದೆ.
ಹಿಟಾಚಿ ಹಾಗೂ ಜೇಸೀಬೀ ಮುಂತಾದ ಮಣ್ಣು ಗೋ(ಘೋ)ರಕಗಳ ಬಳಕೆಯನ್ನು ಸರ್ಕಾರ ತನ್ನ ಪರಿವೇಕ್ಷಣೆಯ ಪರಿಧಿಯೊಳಗೆ ತಂದುಕೊಂಡು, ಪ್ರತೀ ಕೆಲಸದ ಸ್ಥಳ, ಸ್ವರೂಪ ಹಾಗೂ ಆ ಕೆಲಸದಿಂದುಂಟಾಗುವ ಇಕಾಲಜಿಕಲ್ ಇಂಪ್ಯಾಕ್ಟ್ ಮುಂತಾದುವುಗಳನ್ನು ಅಧ್ಯಯನ ನಡೆಸಿ ಸೂಕ್ತ ಹಾಗೂ ಫೀಸಿಬಲ್ ಅನಿಸಿದರೆ ಮಾತ್ರ ಕೆಲಸ ನಡೆಸಲು ಅನುಮತಿ ನೀಡುವ ಅಗತ್ಯವಿದೆ.
ಭೂಕುಸಿತ, ಹೊಳೆಗಳ ಮಾರ್ಗಪಲ್ಲಟ, ಕೆರೆ-ಕಟ್ಟೆಗಳಲಿ ಹೂಳು ತುಂಬಿಕೊಳ್ಳಲು ಈ ಮಣ್ಣು ಗಣಿಗಾರಿಕೆಯೇ ಕಾರಣ.
ಸರ್ಕಾರಿ ಜಮೀನಾಗಿರಬಹುದು ಅಥವಾ ಖಾಸಗಿ ಸ್ವತ್ತಾಗಿರಬಹುದು ಭೂಮಿ ಅಗೆದು ಮಣ್ಣು ಸಾಗಿಸಲು ಪರವಾನಿಗೆ ಅಗತ್ಯ.
ಭೂಮಿಯನು ಎತ್ತರಿಸಿಕೊಂಡ ಭೂ ಮಾಲೀಕರಿಂದ ಮಣ್ಣನ್ನೆಲ್ಲಿಂದ ತರಿಸಿಕೊಂಡರೆಂಬ ವಿವರ ಪಡೆದು ಮಣ್ಣನು ತೆಗೆದವರು ಹಾಗೂ ತುಂಬಿಸಿಕೊಂಡವರ ಮೇಲೆ ಕ್ರಮ ಕೈಗೊಳ್ಳಬೇಕಿದೆ.
ಹಾಗಂತ,
ಈ ಭೂಗರ್ಭ ಇಲಾಖೆ ಏನು ಮಾಡುತ್ತಿದೆ?
ಬರಹ…..
ದನಂಜಯಜೀವಾಳ..

