ಮಾಜಿ ಶಾಸಕರ ಕಳಕಳಿ……
1 min read
ಆವತಿ ಹೋಬಳಿ ಹೊಸಳ್ಳಿ ಗ್ರಾಮದ ಸರ್ವೆ ನಂಬರ್ 11 ರಲ್ಲಿ ಸುಮಾರು 460 ಎಕರೆ ಕಂದಾಯ ಭೂಮಿ ಇದ್ದು ಅದರಲ್ಲಿ 350 ಎಕರೆ ಅರಣ್ಯ ಹಾಗೂ 97 ಎಕರೆ ಹುಲ್ಲುಬೆನ್ನೇ ಜಮೀನು ಇದ್ದು ಈ 97 ಎಕರೆ ಜಮೀನಿನಲ್ಲಿ ಹೊಸಳ್ಳಿ ಗ್ರಾಮದ ಗಂಗಮ್ಮ ಎಂಬುವವರು ಸುಮಾರು 1984 ರಿಂದ ಜಮೀನನ್ನು ಅನುಭೋಗದಲ್ಲಿ ಬಳಸಿಕೊಳ್ಳುತ್ತಿದ್ದು ಇವರು 53,57 ಅರ್ಜಿ ಅಲ್ಲದೆ ಹಳೆಯ ಧಾರಖಾಸ್ತು ಅರ್ಜಿ ಹಾಕಿದ್ದು ಖಾತೆಗಾಗಿ ಓಡಾಡುತ್ತಿದ್ದು. ಕೆಲವುದಿನಗಳ ಹಿಂದೆ ಅರಣ್ಯ ಇಲಾಖೆಯ ಸಿಬ್ಬಂದಿ ಬಂದು ಇವರು ಹಾಕಿರುವ ಗಿಡಗಳನ್ನು ಕಿತ್ತು ಹಾಕಿದ್ದು, ಯಾರೋ ಹೇಳಿದ ಮಾತಿಗೆ ಈ ಕೆಲಸವನ್ನು ಅರಣ್ಯ ಸಿಬ್ಬಂದಿಗಳು ಮಾಡುತ್ತಿರುವುದು ಸರಿ ಇಲ್ಲ.ಈ ಸಮಸ್ಯೆಯನ್ನು ಮಾಜಿ ಶಾಸಕರಾದ ಎಂ.ಪಿ. ಕುಮಾರಸ್ವಾಮಿ ಗಮನಕ್ಕೆ ಬಂದಕಾರಣ ಅವರು ಸ್ಥಳಕ್ಕೆ ಬೇಟಿಕೋಟ್ಟು ಡಿ ಎಫ್ ರವರೊಂದಿಗೆ ಮಾತನಾಡಿ ಸಮಸ್ಯೆಯನ್ನು ಪರಿಹರಿಸಿದರು.ಆ ಸಂಧರ್ಭದಲ್ಲಿ ಲಕ್ಷ್ಮಣ್ ಹುಣಸೆಮಕ್ಕಿ,ವಿಜಯ್ ರವಿ ಆವತಿ, ಪ್ರಕಾಶ್,ಜಾಗದ ಮಾಲೀಕರಾದ ರಂಜಿತಾ ಇದ್ದರು.
ವರದಿ..
ಭಾರತಿಉಮೇಶರಾಜಅರಸು..ಚಿಕ್ಕಮಗಳೂರು..
8971536986….

