लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪೆನ್-ಡ್ರೈವ್ ಸಹಿತ ಸುಮಾರು 600 ಪುಟಗಳ ಪ್ರಸಾದ #ಧರ್ಮಸ್ಥಳ’ದ ಹರ್ಷೇಂದ್ರ ಕುಮಾರ್ ಎಂಬಾತನ ಕಡೆಯಿಂದ ಬಂದಿದೆ. ನನಗೆ ಇಂದು ಸಿಕ್ಕಿತು.

ನಾವು ಸಣ್ಣವರಿದ್ದಾಗ ಧರ್ಮಸ್ಥಳಕ್ಕೆ ಹೋಗಿಬಂದರೆ ಅಲ್ಲಿಂದ ತಂದ ಪ್ರಸಾದವನ್ನು ಕಳ್ಳೆಪುರಿ ಸಹಿತವಾಗಿ ಅಕ್ಕಪಕ್ಕದ ಮನೆಯವರಿಗೆ ಭಯಭಕ್ತಿಯಿಂದ ಹೋಗಿ ಕೊಟ್ಟು ಬರುತ್ತಿದ್ದೆವು. ನಾನಂತೂ ಧರ್ಮಸ್ಥಳಕ್ಕೆ ಕನಿಷ್ಠವೆಂದರೂ ಏಳೆಂಟು ಬಾರಿ ಹೋಗಿರಬೇಕು. ನಮ್ಮ ಕುಟುಂಬದವರೂ ಅಲ್ಲಿಗೆ ಬಹಳ ಭಯಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಆದರೆ ಅದು ಯಾರಪ್ಪನದೋ ಆಸ್ತಿ ಎಂದು ಗೊತ್ತಿರಲಿಲ್ಲ. ಈಗಲೂ ಮಂಜುನಾಥಸ್ವಾಮಿ ಭಕ್ತರ ಆಸ್ತಿಯೇ ಹೊರತು ಯಾವೊಬ್ಬ ವ್ಯಕ್ತಿ ಅಥವ ಕುಟುಂಬದ ಆಸ್ತಿಯಲ್ಲ. ಅದು ಆ ರೀತಿಯೇನಾದರೂ ಇರುವುದೇ ಆದರೆ ಅದು ಬದಲಾಗಬೇಕು.

ಹರ್ಷೇಂದ್ರ ಕುಮಾರ್ ಎಂಬಾತ ಈಗ ನೂರಾರು ಜನರಿಗೆ ಕೊಟ್ಟಿರುವ ನ್ಯಾಯಾಲಯದ ನೋಟಿಸ್ ನ್ಯಾಯಾಲಯವನ್ನು ಸಂಪೂರ್ಣವಾಗಿ ದಿಕ್ಕುತಪ್ಪಿಸಿ ಪಡೆದಿರುವಂತಹ ಆದೇಶ ಎಂದು ಮೇಲ್ನೋಟಕ್ಕೇ ಕಂಡುಬರುತ್ತದೆ. ಅದರ ಕುರಿತು ನಮ್ಮ ನ್ಯಾಯಾಂಗ ಹೋರಾಟ ಮುಂದುವರೆಯುತ್ತದೆ.

ಧರ್ಮಸ್ಥಳ ನಮ್ಮ ರಾಜ್ಯದ ಅತ್ಯಂತ ದೊಡ್ಡ ಶ್ರದ್ಧಾಕೇಂದ್ರ. ಅಲ್ಲಿ ಏನಾದರೂ ಅಚಾತುರ್ಯ, ಅಕ್ರಮ, ಮೋಸ ನಡೆದಿದ್ದರೆ ಅದರ ಕುರಿತು ಮಾತನಾಡುವ ಹಕ್ಕನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಆ ಹಕ್ಕನ್ನು ನಾನಂತೂ ಬಿಟ್ಟುಕೊಡುವುದಿಲ್ಲ; ಯಾರೇ ಹೇಳಿದರೂ.

ಇನ್ನು ಈ ಹರ್ಷೇಂದ್ರ ಕುಮಾರ್ ಎಂಬಾತನ ಬಗ್ಗೆ ಮಾತನಾಡಲು ನನಗೇನೂ ಇಲ್ಲ. ಬಹುಶಃ ಖಾಸಗಿ ವ್ಯಕ್ತಿಯಾದ ಆತನ ಬಗ್ಗೆ ನಾನೇನು ಮಾತನಾಡಲಿ? ನೆನ್ನೆಯ ತನಕ ಆತನ ಪೂರ್ಣ ಹೆಸರೇ ನನಗೆ ಗೊತ್ತಿರಲಿಲ್ಲ ಮತ್ತು ಆತನ ಹೆಸರನ್ನು ನಾನು (ನೆನ್ನೆ ತನಕ) ಎಲ್ಲಿಯೂ ಎತ್ತಿರಲಿಲ್ಲ.

ಆದರೆ ವೀರೇಂದ್ರ ಹೆಗ್ಗಡೆ ವಿಚಾರ ಬೇರೆ. ಅವರು ಈಗ ನನ್ನ ಪ್ರತಿನಿಧಿ, ಈ ನಾಡಿನ ಜನರ ಪ್ರತಿನಿಧಿ. ನಮ್ಮ ತೆರಿಗೆಯ ಹಣದಲ್ಲಿ ಸಂಬಳ, ಸಾರಿಗೆ, ಸವಲತ್ತು, ಭತ್ಯೆ ಪಡೆಯುತ್ತಿರುವ ಸಾರ್ವಜನಿಕ ವ್ಯಕ್ತಿ; ಭಾರತದ ರಾಜ್ಯಸಭಾ ಸದಸ್ಯರು. ಸಂಸದ. ಬೇರೆಯವರ ವಿಚಾರ ಗೊತ್ತಿಲ್ಲ, ಆದರೆ ಒಂದು ರಾಜಕೀಯ ಪಕ್ಷದ ಅಧ್ಯಕ್ಷನಾಗಿ ಒಬ್ಬ ಜನಪ್ರತಿನಿಧಿಯ ಕುರಿತು ಮಾತನಾಡುವ ಎಲ್ಲಾ ಹಕ್ಕು ನನಗಿದೆ. ಈಗಲೂ ಮಾತನಾಡುತ್ತೇನೆ, ಮುಂದೆಯೂ ಮಾತನಾಡುತ್ತೇನೆ. ಅವಹೇಳನಕಾರಿಯಾಗಿ ಹಿಂದೆಯೂ ಮಾತನಾಡಿಲ್ಲ, ಮುಂದೆಯೂ ಮಾತನಾಡುವುದಿಲ್ಲ. ಆದರೆ ಟೀಕೆ ಅಥವ ವಿಮರ್ಶೆಯನ್ನು ತಪ್ಪಾಗಿ ಗ್ರಹಿಸಿಕೊಂಡರೆ ಅದು ಹಾಗೆ ಗ್ರಹಿಸಿದವರ ತಪ್ಪೇ ಹೊರತು ಟೀಕಾಕಾರರದ್ದಲ್ಲ. ವೀರೇಂದ್ರ ಹೆಗ್ಗಡೆಯವರೇ ಹಾಗೆ ಭಾವಿಸಿದರೆ ಅವರು ಜನಪ್ರತಿನಿಧಿಯಾಗಿ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಇವನ್ನು ಯೋಚಿಸಬೇಕಿತ್ತು ಎಂದಷ್ಟೇ ನಾನು ಹೇಳುತ್ತೇನೆ. ಹೆಚ್ಚಿನ ಶಕ್ತಿ/ ಅಧಿಕಾರದೊಂದಿಗೆ ಹೆಚ್ಚಿನ ಜವಾಬ್ದಾರಿ/ಉತ್ತರದಾಯಿತ್ವವೂ ಹೆಗಲೇರುತ್ತದೆ ಎನ್ನುವುದು ಸಾಮಾನ್ಯ ಜ್ಞಾನ.

ಇನ್ನು ನಮ್ಮ ಸಂವಿಧಾನದತ್ತ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ನಮಗೆ ಬೆಂಗಳೂರಿನಿಂದ ದೆಹಲಿಯ ತನಕ ಉಚಿತವಾಗಿ ನಮ್ಮ ಪರವಾಗಿ ನ್ಯಾಯಾಂಗ ಹೋರಾಟ ಮಾಡಲು ಅನೇಕ ನ್ಯಾಯವಾದಿಗಳಿದ್ದಾರೆ.

ಅವರ ಬಳಿ #ವಕೀಲ’ರಿದ್ದರೆ ನಮ್ಮ ಬಳಿ #ನ್ಯಾಯವಾದಿ’ಗಳಿದ್ದಾರೆ, #ಸಂವಿಧಾನತಜ್ಞ’ರಿದ್ದಾರೆ.

ಇನ್ನು ಈ injunction ಪ್ರಸಂಗವಂತೂ ಹಾಸ್ಯಾಸ್ಪದ. ಈ ಪ್ರಹಸನಕ್ಕೆ ಅವರಿಗೆ ಕನಿಷ್ಠವೆಂದರೂ ಹತ್ತಾರು ಲಕ್ಷ ರೂಪಾಯಿ ಖರ್ಚಾಗಿದೆ ಎಂದು ನನ್ನ ಅಂದಾಜು. ನಮ್ಮ ದೇಶದ ಬಡಪಾಯಿ ಭಕ್ತಾದಿಗಳು ಧರ್ಮಸ್ಥಳದ ಮಂಜುನಾಥಸ್ವಾಮಿಯ ಹುಂಡಿಗೆ ಹಾಕಿದ ಕಾಣಿಕೆ ದುಡ್ಡೇ ಈ ಖರ್ಚಿಗೆಲ್ಲ ಮೂಲ ಎಂದೇನಾದರೂ ಆದರೆ, ಅದು ಅಧರ್ಮ, ಅಕ್ರಮ. ಹಾಗಿದ್ದಲ್ಲಿ ಧರ್ಮರಕ್ಷಣೆಗೆ ಮಂಜುನಾಥಸ್ವಾಮಿ ಬಹಳ ಬೇಗ ಮುಂದಾಗುತ್ತಾನೆ ಎನ್ನುವ ವಿಶ್ವಾಸ ಬಾಲ್ಯದಲ್ಲಿ ಅತೀವ ಭಕ್ತಿಯಿಂದ ಅವನನ್ನು ಭಜಿಸಿದ್ದ ಈ ಭಕ್ತನದ್ದು.

ಈಗ ನಡೆಯುತ್ತಿರುವುದು
ಅನ್ಯಾಯ, ಅಕ್ರಮಗಳ ವಿರುದ್ಧ,
ಪಾರುಪತ್ಯೆಗಾರ ಅಧರ್ಮಾಧಿಕಾರಿಗಳ ವಿರುದ್ಧ
ನಾಡಿನ ಮುಗ್ಧರು, ಜನಸಾಮಾನ್ಯರು, ನ್ಯಾಯಪರರು
ಮಾಡುತ್ತಿರುವ #ಧರ್ಮಯುದ್ಧ.
ಸತ್ಯಮೇವ ಜಯತೇ!
ಧರ್ಮಯುದ್ಧದಲ್ಲಿ ಅಂತಿಮ ಜಯ ಧರ್ಮದ್ದೇ.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

 

About Author

Leave a Reply

Your email address will not be published. Required fields are marked *

You may have missed