लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅತಿಕ್ರಮಿಸಿರುವ ಉದ್ಯಾನವನ ಜಾಗ ತೆರವಿಗೆ ಕರವೇ ಮನವಿ

ಚಿಕ್ಕಮಗಳೂರು: ರಾಮನಹಳ್ಳಿ ಬಡಾವಣೆಯಲ್ಲಿ ಉದ್ಯಾನವನ

ಜಾಗವನ್ನು ಅತಿಕ್ರಮಿಸಿರುವುದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಬಡಾವಣೆ ನಿವಾಸಿಗಳು ನಮ್ಮ ಕರವೇ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷ ಬಿ.ಶೀಲಾ ದಿನೇಶ್ ಅವರಿಗೆ ಸೋಮವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಕುರಿತು ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಅಗ್ನಿ ಸುಮಂತ್ ಬಡಾವಣೆಯಲ್ಲಿ 1600 ಅಡಿ ಉದ್ಯಾನವನಕ್ಕಾಗಿ ಈ ಹಿಂದೆಯೇ ಜಾಗವನ್ನು ಕಾಯ್ದಿರಿಸಿ ನಕ್ಷೆ ಅನುಮೋದನೆಯಾಗಿತ್ತು. ಆದರೆ ಕೆಲವು ಬಲಾಡ್ಯ ವ್ಯಕ್ತಿಗಳು ಪಾರ್ಕ್ ಜಾಗವನ್ನು ಕಬಳಿಸಲು ಯತ್ನಿಸುತ್ತಿದ್ದು ಈ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಪ್ರಸ್ತುತ ಉದ್ಯಾನವನ ಜಾಗವನ್ನು ನಿವೇಶನಗಳನ್ನಾಗಿ ಮಾಡಿಕೊಂಡು ರಾಮನಹಳ್ಳಿ ನಾಗರೀಕರಿಗೆ ಮೋಸ ಮಾಡಿ ಅಧಿಕ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಆದ್ದರಿಂದ ನಗರಸಭಾ ಆಡಳಿತವು ಪಾರ್ಕ್ ಅತಿ-ಕ್ರಮದಾರರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಿ ಜಾಗವನ್ನು ಉಳಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾರ್ಗವ್, ಉಪಾಧ್ಯಕ್ಷ ಶಂಕರ್‌ಶೆಟ್ಟಿ, ನಿವಾ ಸಿಗಳಾದ ಗೌತಮ್, ತೇಜಸ್, ಪ್ರದೀಪ್, ನಂದನ್, ಕಿರಣ್ ಮತ್ತಿತರರು ಹಾಜರಿದ್ದರು.

 

ವರದಿ….ಭಾರತಿಉಮೇಶರಾಜಅರಸು….

 

About Author

Leave a Reply

Your email address will not be published. Required fields are marked *

You may have missed