ಬಣಕಲ್ ನಲ್ಲಿ ಬಸ್ ತಂಗುದಾಣ ಉದ್ಘಾಟನೆ : ಈಡೇರಿದ ದಶಕದ ಕನಸು….
ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಬಹು ನಿರೀಕ್ಷಿತ ಬಸ್ ತಂಗುದಾಣಕ್ಕೆ ಕೊನೆಗೂ ಚಾಲನೆ ದೊರೆತಿದೆ .
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಉದ್ಘಾಟನೆ ನೆರವೇರಿಸಿದರು.
ಇದರೊಂದಿಗೆ ದಶಕಗಳಿಂದ ರಸ್ತೆಬದಿಯಲ್ಲಿ ಬಸ್ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು, ಕೆಲಸಗಾರರು ಹಾಗೂ ಪ್ರಯಾಣಿಕರಿಗೆ ನಿರಾಶ್ರಿತ ಸ್ಥಿತಿಗೆ ಅಂತ್ಯವಾಯಿತು. ಮಳೆಗಾಲದಲ್ಲಿ ಗಾಳಿ ಮತ್ತು ಮಳೆಯಿಂದ ರಕ್ಷಣೆಗಾಗಿ ಅಂಗಡಿಗಳ ಆಶ್ರಯ ಬೇಕಾಗುತ್ತಿದ್ದ ಸಂದರ್ಭಗಳಿಗೂ ತೆರೆಬಿದ್ದಂತಾಗಿದೆ.
ಶಾಸಕಿ ನಯನ ಮೋಟಮ್ಮ ಮಾತನಾಡಿ, ತಂಗುದಾಣ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಪ್ರಯಾಣಿಕರು ಸದುಪಯೋಗ ಪಡೆದುಕೊಳ್ಳಬೇಕು, ಸ್ವಚ್ಛತೆ ಕಾಪಾಡುವ ಜವಾಬ್ದಾರಿಯನ್ನು ಹೊಣೆ ಹೊತ್ತುಕೊಳ್ಳಬೇಕೆಂದು ಸಲಹೆ ನೀಡಿದರು.
ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಝರಿನ್, ಉಪಾಧ್ಯಕ್ಷೆ ಬಿ.ಬಿ. ಲೀಲಾವತಿ, ಪಿಡಿಓ ಕೃಷ್ಣಪ್ಪ, ಪಂಚಾಯಿತಿ ಸದಸ್ಯರಾದ.ಅತೀಕ ಬಾನು, ಇರ್ಫಾನ್, ಸಿರಾಜ್,ವಿನಯ್, ಮಧುಕುಮಾರ್, ಸ್ಥಳೀಯರಾದ ದಿಲ್ದಾರ್ ಬೇಗಂ, ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಸುಬ್ರಮಣ್ಯ, ಕುಂಜಿಮೋಣು, ಪೋಲ್ಸನ್, ಶಿವರಾಮ್ ಶೆಟ್ಟಿ, ಅಜೀದ್, ಸಿದ್ದೀಕ್,ಗೋಪಾಲ ಚಾರ್, ವಿಕ್ರಂ ಗೌಡ, ಸತೀಶ್ ಗೌಡ, ಮೆಲ್ವಿನ್,ಉಮ್ಮಾರ್, ಹೊಸಕೆರೆ ರಮೇಶ್,ಸಬ್ಲಿ ದೇವರಾಜ್,ದೇವಪ್ಪ ಜನಪ್ರತಿನಿಧಿಗಳು,ಊರಿನ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು..,

