ಚಿಕ್ಕಮಗಳೂರು ಜಿಲ್ಲೆಯ ದಲಿತ ಚಳವಳಿಯ ಧ್ರುವತಾರೆ ಎಂ.ಡಿ ಗಂಗಯ್ಯನವರು”…..
1 min read
” ಚಿಕ್ಕಮಗಳೂರು ಜಿಲ್ಲೆಯ ದಲಿತ ಚಳವಳಿಯ ಧ್ರುವತಾರೆ ಎಂ.ಡಿ ಗಂಗಯ್ಯನವರು”….✊✊✊✊✊✊………. ( ಸಂಕ್ಷಿಪ್ತ ಮಾಹಿತಿ)
ಚಿಕ್ಕಮಗಳೂರು ಜಿಲ್ಲೆಯಲ್ಲಿ ದಲಿತ ಚಳವಳಿಯ ಸಂಸ್ಥಾಪಕರಾದ ಎಂ.ಡಿ ಗಂಗಯ್ಯನವರು ಚಿಕ್ಕಮಗಳೂರು ಜಿಲ್ಲೆಯ ಮುಗುಳುವಳ್ಳಿಯಲ್ಲಿ ದಿನಾಂಕ .06.04.1954ರಲ್ಲಿ ದೊಡ್ಡಯ್ಯ ಮತ್ತು ಮರಿಯಮ್ಮನವರ ಎರಡನೇ ಮಗನಾಗಿ ಜನಿಸಿದರು. ಇವರಿಗೆ ಒಬ್ಬರು ಅಕ್ಕ, ನಾಲ್ಕು ಜನ ತಂಗಿಯರು ಒಬ್ಬ ತಮ್ಮ ಇದ್ದಕೂಡು ಕುಟುಂಬದಲ್ಲಿ ಬೆಳೆದವರಾಗಿದ್ದಾರೆ. ಇವರ ತಂದೆಯವರು ಕಲ್ಲುಕುಂಟೆ, ದೊಡ್ಡಯ್ಯ ಎಂದೇ ಪ್ರಸಿದ್ದಿಯಾದವರು. ಏಕೆಂದರೆ ಇವರು ವ್ಯವಸಾಯ ಮಾಡುವ ಸಂದರ್ಭದಲ್ಲಿ ಕುಂಟೆಯ ಮೇಲೆ ದೊಡ್ಡದಾದ ಕಲ್ಲನ್ನು ಇಟ್ಟುಕೊಂಡು ಉಳುಮೆ ಮಾಡುತ್ತಿದ್ದರು ಆದ್ದರಿಂದಲೇ ಇವರ ಕುಟುಂಬಕ್ಕೆ ಕಲ್ಲುಕುಂಟೆ ಎಂದೇ ಹೆಸರು ಬಂದಿತು. ಎಂಟು ಜನ ಮಕ್ಕಳನ್ನು ಹೊಂದಿದ ದೊಡ್ಡಯ್ಯ ನವರು ಎಲ್ಲ ಮಕ್ಕಳನ್ನು ಶಾಲೆಗೆ ಸೇರಿಸುತ್ತಾರೆ ಆದರೆ ಎರಡನೇ ಮಗನಾದ ಎಂ.ಡಿ ಗಂಗಯ್ಯನವರು ಉನ್ನತ ವಿದ್ಯಾಭ್ಯಾಸ ಮಾಡಿದರು. ಎಂ.ಡಿ ಗಂಗಯ್ಯನವರ ಶೈಕ್ಷಣಿಕ ಹಿನ್ನೆಲೆ ………………………..ಇವರು ಪ್ರಾಥಮಿಕ ಶಿಕ್ಷಣವನ್ನು ಮುಗುಳುವಳ್ಳಿಯಲ್ಲಿ ಮುಗಿಸಿದರು ಹೈಸ್ಕೂಲ್ ಶಿಕ್ಷಣವನ್ನು ಸರ್ಕಾರಿ ಜೂನಿಯರ್ ಕಾಲೇಜು ಚಿಕ್ಕಮಗಳೂರಿನಲ್ಲಿ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಇದ್ದುಕೊಂಡು ಮುಗಿಸಿರುತ್ತಾರೆ. ಪದವಿ ಪೂರ್ವ ಶಿಕ್ಷಣವನ್ನು ಜೂನಿಯರ್ ಕಾಲೇಜು ಚಿಕ್ಕಮಗಳೂರಿನಲ್ಲಿ ಮುಗಿಸಿರುತ್ತಾರೆ ಹಾಗೆ ಪದವಿ ಶಿಕ್ಷಣವನ್ನು IDSG ಕಾಲೇಜು ಚಿಕ್ಕಮಗಳೂರಿನಲ್ಲಿ (ಇ. ಎಸ್. ಪಿ) ಆಯ್ಕೆ ಮಾಡಿಕೊಂಡು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ, ಕಾನೂನು ಪದವಿಯನ್ನು ಕೃಷ್ಣ ಲಾ ಕಾಲೇಜಿನಲ್ಲಿ ಪ್ರಾರಂಭಿಸಿ……….. ಹೋರಾಟದ ಹಿನ್ನೆಲೆಯಿಂದಾಗಿ ಮೊಟುಕುಗೊಳಿಸಿದರು. ಎಂ.ಡಿ ಗಂಗಯ್ಯನವರ ವ್ಯಕ್ತಿತ್ವ………………… ಹೈಸ್ಕೂಲ್ ಶಿಕ್ಷಣದಿಂದ ಪದವಿ ಶಿಕ್ಷಣದ ವರೆಗೆ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾಭ್ಯಾಸ ಮಾಡಿದ ಪ್ರತಿಫಲವಾಗಿ ಅಂಬೇಡ್ಕರ್ ವಿಚಾರಗಳಲ್ಲಿ ಪ್ರಭಾವಿತರಾಗಿ ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಮನೋಭಾವನೆಯನ್ನು ಮೈಗೂಡಿಸಿಕೊಂಡಿದ್ದ ವರಾಗಿದ್ದರು..
ಇವರು ಕಾನೂನು ಪದವಿಗೆ ಸೇರುವ ಸಂದರ್ಭದಲ್ಲಿ ಅಂದರೆ ದಿನಾಂಕ 22. 4. 1984ರಲ್ಲಿ ಅವರ ಸಂಬಂಧಿಕರಾದ, ಕೆ. ಉಮಾದೇವಿಯವರೊಂದಿಗೆ ಮದುವೆ ಮಾಡಲು ಅವರ ಸಂಬಂಧಿಕರು ನಿಶ್ಚಯಿಸುತ್ತಾರೆ. ಅದರಂತೆ ಮದುವೆ ಕಾರ್ಯಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಮದುವೆಗೆಂದು ಮಾಡಿಸಿದ ಲಗ್ನಪತ್ರಿಕೆಗೆ ಉಮಾದೇವಿಯವರ ತಾಯಿಯವರು ಪೂಜೆಯನ್ನು ಮಾಡಿ ಲಗ್ನ ಪತ್ರಿಕೆಯ ನಾಲ್ಕು ಮೂಲೆಗೆ ಕುಂಕುಮವನ್ನು ಹೆಚ್ಚಿರುತ್ತಾರೆ.
ಇದು ಹೇಗೋ ಎಂ.ಡಿ ಗಂಗಯ್ಯನವರ ಕೈ ಸೇರುತ್ತದೆ. ಇದರಿಂದ ಕೆಂಡಾಮಂಡಲವಾದ ಎಂ. ಡಿ ಗಂಗಯ್ಯನವರು ಮದುವೆಗೆಂದು ಹಂಚಲು ಇಟ್ಟಿದ್ದ ಲಗ್ನ ಪತ್ರಿಕೆಗಳನ್ನು ಮದುವೆಗೆ ಮುಂಚೆ ಎಲ್ಲಾ ಲಗ್ನ ಪತ್ರಿಕೆಗಳನ್ನು ಸುಟ್ಟು ಹಾಕಿದರು. ಇಂತಹ ವೈಚಾರಿಕ ಮನೋಭಾವನೆ ಹೊಂದಿದಂತ ಎಂ.ಡಿ ಗಂಗಯ್ಯನವರು ತಾಳಿಯನ್ನು ಕಟ್ಟದೆ ಕೇವಾಲ ಹೂವಿನ ಹಾರವನ್ನು ಪರಸ್ಪರ ಬದಲಾಯಿಸಿಕೊಂಡು “ಪ್ರಗತಿಪರ ವಿವಾಹ ಸಮಿತಿ” ವೇದಿಕೆ ಕಾರ್ಯಕ್ರಮದಲ್ಲಿ ಗೊಡ್ಡು ಸಂಪ್ರದಾಯಗಳಿಲ್ಲದೆ ಪುರೋಹಿತಶಾಹಿ ವ್ಯವಸ್ಥೆಯನ್ನು ವಿರೋಧಿಸಿ ಮದುವೆಯಾಗುತ್ತಾರೆ. ಈ ಮದುವೆಗೆ ಆ ಕಾಲದಲ್ಲಿ 6000 ಜನ ಸೇರಿದರು. ಮುಖ್ಯ ಅತಿಥಿಗಳಾಗಿ ಬಿ. ಕೃಷ್ಣಪ್ಪ, ದೇವಯ್ಯ ಹರವೇ, ಚಂದ್ರಪ್ರಸಾದ್ ತ್ಯಾಗಿ, ಗಿರಿಯಪ್ಪ ಇನ್ನು ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಬಿ. ಕೃಷ್ಣಪ್ಪನವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ವೈಚಾರಿಕ ಮನೋಭಾವನೆ ಹೊಂದಿದ್ದಂತಹ ಎಂ. ಡಿ ಗಂಗಯ್ಯನವರು ಕೊನೆಯವರೆಗೂ ಹಾಗೆ ಬದುಕಿದವರು.. ಎಂ. ಡಿ ಗಂಗಯ್ಯನವರ ಹೋರಾಟದ ಬದುಕು………………………..
ಚಿಕ್ಕಮಗಳೂರು ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಹುಟ್ಟು ಹಾಕಿದ ಈ ಮಹಾನುಭಾವ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಕಾರ್ಯದರ್ಶಿಯಾಗಿ, ರಾಜ್ಯ ಕಾರ್ಯದರ್ಶಿಯಾಗಿ 1976 ರಿಂದ ಅನೇಕ ಹೋರಾಟಗಳನ್ನು ರೂಪಿಸಿಕೊಂಡು ಬಂದಿರುತ್ತಾರೆ. ಬಹು ಮುಖ್ಯವಾಗಿ ರಾಜ್ಯದ ಗಮನ ಸೆಳೆದಂತಹ ಚಂಡಗೋಡು ಭೂ ಹೋರಾಟದಲ್ಲಿ ಹೋರಾಟದ ನೇತೃತ್ವ ವಹಿಸಿಕೊಂಡವರು.ಈ ಹೋರಾಟದ ಪ್ರತಿಫಲವಾಗಿ ಆ ಗ್ರಾಮದ ಸುಮಾರು 40 ಕುಟುಂಬಗಳಿಗೆ ಸಾಗುವಳಿ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆ. ಎಂಡಿ ಗಂಗಯ್ಯನವರ ನೇತೃತ್ವದಲ್ಲಿ 1976 ರಿಂದ 2005 ರವರೆಗೆ ಜಿಲ್ಲೆಯಾದ್ಯಂತ ನಿರಂತರವಾಗಿ ನೂರಾರು ಹೋರಾಟಗಳು ನಡೆದಿವೆ. 1980 ರಲ್ಲಿ ಮೂಡಿಗೆರೆ ತಾಲ್ಲೂಕಿನ ಹಾಲೂರು( ಚಕ್ರಮಣಿ) ಗ್ರಾಮದಲ್ಲಿ ದಲಿತರ ನಿವೇಶನಕ್ಕಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ಮೂಡಿಗೆರೆ ಸರ್ಕಲ್ ಇನ್ಸ್ಪೆಕ್ಟರ್ ಶರೀಫ್ ರವರು ಎಂ.ಡಿ ಗಂಗಯ್ಯನವರಿಗೆ ಬೂಟುಕಾಲಿನಿಂದ ಒದ್ದು ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೇ ಮಾಡುತ್ತಾರೆ. ಇದು ಇಡೀ ರಾಜ್ಯದ ಗಮನವನ್ನು ಸೆಳೆದಂತಹ ಪ್ರಕರಣವಾಗಿತ್ತು. ರಾಜ್ಯಾದಾದ್ಯಂತ ಸುದ್ದಿಯಾದ ಈ ಪ್ರಕರಣಕ್ಕೆ ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿ ಸಾವಿರಾರು ಜನ ಹೋರಾಟಗಾರರು ಮೂಡಿಗೆರೆಯಿಂದ ಚಿಕ್ಕಮಗಳೂರು ವರೆಗೆ ಕಾಲ್ನಡಿಗೆ ಜಾಥಾವನ್ನು ಮಾಡಿದರು. ಈ ಸುದ್ದಿ ರಾಜ್ಯಮಟ್ಟದ ಸುದ್ದಿಯಾಗಿತ್ತು. ಅನೇಕ ಹೋರಾಟಗಾರರಿಗೆ ಮಾರ್ಗದರ್ಶಕರಾಗಿದ್ದ ಎಂ ಡಿ ಗಂಗಯ್ಯನವರಿಗೆ ಸ್ವತಃ ಕುಟುಂಬದಿಂದಲೇ ಅವರ ಸಮಾಜಮುಖಿ ಚಿಂತನೆಗೆ ಬೆಂಬಲ ಸಿಗದೆ ಕುಟುಂಬದವರ ಕೆಂಗಣ್ಣಿಗೆ ಗುರಿಯಾಗಿದ್ದವರು.
ಮನೆಯಲ್ಲಿ ಅನೇಕ ನೋವು ಅಪಮಾನಗಳನ್ನು ಎದುರಿಸಿದರು. ರಾಜ್ಯ ಸಮಿತಿಯ ತೀರ್ಮಾನದಂತೆ ಚುನಾವಣೆಗೂ ಸ್ಪರ್ಧೆ ಮಾಡಿ ಸೋತು ಸುಣ್ಣವಾದರು. ಇಂತಹ ಮಹಾನ್ ಚೇತನ ಕುಟುಂಬದವರ ಮಾನಸಿಕ ಕಿರುಕುಳದಿಂದ ನೊಂದು ಬೆಂದು , ಸಮಾಜದ ಆಸ್ತಿಯಾಗಿದ್ದ ಹೋರಾಟಗಾರ ದಿನಾಂಕ.01.07.2005ರಂದು ಚಿಕ್ಕಮಗಳೂರು ಪ್ರವಾಸಿ ಮಂದಿರದಲ್ಲಿ ಪತ್ರಕರ್ತರಾದ ನಾರಾಯಣ್ ಸುವರ್ಣ ಅವರೊಂದಿಗೆ ದಲಿತ ಚಳವಳಿಯನ್ನು ಕಟ್ಟುವ ಬಗೆಯನ್ನು ಚರ್ಚೆ ಮಾಡುತ್ತಾ ತುಂಬಾ ಹತಾಶರಾಗಿ ಜಿಲ್ಲೆಯ ದಲಿತ ಚಳವಳಿಯನ್ನು ನೆನೆದು ಭಾವುಕರಾಗಿ ಮಾತನಾಡುವ ಸಂದರ್ಭದಲ್ಲಿ ಬ್ರೈನ್ ಆಮ್ರೇಜ್ ಆಗಿ ಕುಸಿದು ಬಿದ್ದು ಕೊನೆ ಉಸಿರೆಳೆದರು. 😭😭😭😭😭 ಚಿಕ್ಕಮಗಳೂರು ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಕಟ್ಟಿ ಬೆಳೆಸಿದ ಮಹಾನ್ ಚೇತನವೇ ಎಂ.ಡಿ ಗಂಗಯ್ಯನವರು. ✊✊✊✊✊✊✊✊✊
….✍️ ಹರೀಶ್ ನಲ್ಕೆ ಸಂಶೋಧನಾ ಬರಹಗಾರರು

