.ಐದಳ್ಳಿ ಯಲ್ಲಿ ಕಾಡಾನೆ ಹಾವಳಿ..
ನಿನ್ನೆ ರಾತ್ರಿ.ಚಿಕ್ಕಮಗಳೂರು ತಾಲೂಕ್.ಅವತಿ ಹೋಬಳಿ. ಐದಳ್ಳಿ. IB ಮಂಜುನಾಥ್ ಇವರ ತೋಟದಲ್ಲಿ ಕಾಡಾನೆ ಬಾಳೆ ತೆಂಗು ಕಾಫಿ ಗಿಡಗಳನ್ನು ನಾಶ ಮಾಡಿದೆ ಅರೆ ನೂರು ಹಕ್ಕಿಮಕ್ಕಿ ಐದಳ್ಳಿ ಬೆಟ್ಟದಳ್ಳಿ ನರುಡಿ ಗ್ರಾಮಗಳಲ್ಲಿ ನಿರಂತರವಾಗಿ ಆನೆಯ ಉಪಟಳ ನಡೆಯುತ್ತಿದೆ ತೋಟಗಳನ್ನು ಹಾಳು ಮಾಡಿ ಬೆಳೆಗಳಿಗೂ ಹಾನಿ ಉಂಟು ಮಾಡುತ್ತಿವೆ ಜನಸಾಮಾನ್ಯರು ಶಾಲೆಗೆ ಹೋಗುವ ಮಕ್ಕಳಿಗೂ ತಿರುಗಾಡುವುದು ಕಷ್ಟಕರವಾಗಿದೆ ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಸಚಿವರು ಆನೆಗಳ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸನ್ಮಿತ್ ಐದಳ್ಳಿ ಇವರು ಮನವಿ ಮಾಡಿದ್ದಾರೆ.

