लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಮಳೆನಡಿಗೆ….

1 min read

ಪ್ರಕೃತಿ ಸಾಮೀಪ್ಯದಿಂದ ಜೀವನೋತ್ಸಾಹ ವೃದ್ದಿ

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಮಳೆನಡಿಗೆ

ಕೊಟ್ಟಿಗೆಹಾರ:ಚಾರಣದಿಂದ ದೊರಕುವ ಪ್ರಕೃತಿಯ ಸಾಮೀಪ್ಯದಿಂದ ನಿತ್ಯ ಬದುಕಿನ ಏಕತಾನತೆಯಿಂದ ಬಂದ ಜಡತೆ ಕಳೆದು ಜೀವನೋತ್ಸಾಹ ವೃದ್ದಿಯಾಗುತ್ತದೆ ಎಂದು ಕನ್ನಡ ಮತ್ತ ಸಂಸ್ಕೃತಿ ಇಲಾಖೆಯ ಹಿರಿಯ ಎಲೆಕ್ಟ್ರೀಷಿಯನ್ ಕಮ್ ಸೂಪರ್‌ವೈಸರ್ ಶ್ರೀನಿವಾಸ್ ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ತೇಜಸ್ವಿ ಪ್ರತಿಷ್ಠಾನದಿಂದ ಬಿದಿರುತಳಕ್ಕೆ ಹಮ್ಮಿಕೊಂಡಿದ್ದ ಮಳೆನಡಿಗೆ ಮತ್ತು ತೇಜಸ್ವಿ ಓದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಸ್ತುತ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ವಸ್ತು ಸಂಗ್ರಹಾಲಯ, ಕೀಟ ಸಂಗ್ರಹಾಲಯ ವೀಕ್ಷಣೆಗೆ ಲಭ್ಯವಿದ್ದು ಗಾಜಿನ ಓದಿನ ಮನೆ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಪುಸ್ತಕವನ್ನು ಓದುವ ಅಪೂರ್ವ ಅನುಭವವನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುವ ಅಪರೂಪದ ಆರ್ಕಿಡ್‌ಗಳ ಸಂಗ್ರಹಾಲಯ, ಚಿಟ್ಟೆ ಉದ್ಯಾನವನ ನಿರ್ಮಾಣವಾಗಲಿದೆ ಎಂದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಆಯೋಜಿಸುವ ಚಾರಣಗಳು ಮನೋರಂಜನೆಗೆ ಸೀಮಿತವಾಗಿರದೇ ಪ್ರಕೃತಿಯ ಅಧ್ಯಯನ ಪ್ರಮುಖ ಉದ್ದೇಶವಾಗಿದೆ. ಚಾರಣ ಸಾಗುವ ದಾರಿಯಲ್ಲಿ ಕಾಣಸಿಗುವ ಅಪರೂಪದ ಕೀಟಗಳು, ಸಸ್ಯಸಂಕುಲಗಳನ್ನು ಗಮನಿಸುತ್ತಾ ಅವುಗಳ ಸಂರಕ್ಷಣೆ ಮತ್ತು ಮಹತ್ವವನ್ನು ಅರಿಯಲು ಚಾರಣ ಸಹಾಯಕವಾಗಿದೆ ಎಂದರು.
ಗಸ್ತು ಅರಣ್ಯ ಪಾಲಕರಾದ ಉಮೇಶ್ ಮತ್ತು ಅಭಿಜಿತ್, ಚಾರಣ ಸಂದರ್ಭದಲ್ಲಿ ಚಾರಣ ಗರು ಅನುಸರಿಸಬೇಕಾದ ನಿಯಮಗಳ ಕುರಿತು ಮಾಹಿತಿ ನೀಡಿದರು.
ಕೆಸುವಿನ ಪಲ್ಯ, ಹಲಸು ಜೇನು, ಬರಗಾಫಿ ಸವಿದ ಚಾರಣ ಗರು
ಬಿದಿರುತಳದ ಕಾಡುದಾರಿಯಲ್ಲಿ ಚಾರಣ ಸಾಗಿದ್ದು ಕಾಡಿನ ನಡುವಿನ ಸುಂದರೇಶ್ ಅವರ ಮನೆಯಲ್ಲಿ ಮಲೆನಾಡಿನ ವಿಶೇಷ ಬರಗಾಫಿ ಸವಿದರು. ಹಲಸಿನಹಣ್ಣು ಜೇನು ಸೇವಿಸಿದರು. ಮಧ್ಯಾಹ್ನ ಕೆಸುವಿನ ಪಲ್ಯ, ಪಾಯಸದ ಊಟ, ಸಂಜೆ ಪಕೋಡ, ಕಾಫಿ ಚಾರಣ ಗರು ನಾಲಿಗೆ ಚಪ್ಪರಿಸುವಂತೇ ಮಾಡಿತು.

ತೇಜಸ್ವಿ ಓದಿನ ಕಲರವ
ಮಳೆ ನಡಿಗೆಯ ನಂತರ ತೇಜಸ್ವಿ ಓದು ಕಾರ್ಯಕ್ರಮ ನಡೆಯಿತು. ಧಾರಾವಾಡದ ದೀಪಾ ಅಂದಾನಿಗೌಡ ಪಾಕಕ್ರಾಂತಿ, ಚಿತ್ರದುರ್ಗದ ದಿನೇಶ್ ಜುಗಾರಿಕ್ರಾಸ್, ತುಮಕೂರಿನ ಶಿಲ್ಪ ಅಲೆಮಾರಿಯ ಅಂಡಮಾನ್, ಶಿವಮೊಗ್ಗದ ರಾಧಾ ಹೆಜ್ಜೆ ಮೂಡದ ಹಾದಿ, ನಂದೀಶ್ ಬಂಕೇನಹಳ್ಳಿ ಕರ್ವಾಲೊ ಕೃತಿಯ ಸಾಲುಗಳನ್ನು ಓದಿದರು. ಹಾಸನ, ಚಿಕ್ಕಮಗಳೂರು, ಬೆಂಗಳೂರು, ತುಮಕೂರು, ಮಂಡ್ಯ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ರಾಮನಗರ, ಮೈಸೂರು, ಧಾರಾವಾಡದಿಂದ ಚಾರಣ ಗರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಾಂತ್ರಿಕ ಸಹಾಯಕ ನವದೀಪ್, ತೇಜಸ್ವಿ ಪ್ರತಿಷ್ಠಾನದ ತಾಂತ್ರಿಕ ಸಹಾಯಕ ಪ್ರಜ್ವಲ್, ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿಗಳಾದ ಸತೀಶ್, ಸಂಗೀತಾ, ಕೀಟತಜ್ಞ ಡಾ.ಅವಿನಾಶ್, ಸ್ಥಳೀಯರಾದ ಸುಂದರೇಶ್ ಬಂಕೇನಹಳ್ಳಿ, ಸುಬ್ಬರಾಯ ಬಿದಿರುತಳ, ಸುಧಾಕರ್, ಹರೀಶ್, ಸುನೀಲ್, ಶ್ರೀಕಾಂತ್, ಪೂರ್ಣೇಶ್, ಶಂಕುತಲ, ಮಮತಾ, ಗಂಗಾಧರಪ್ಪ ಮುಂತಾದವರು ಇದ್ದರು.

About Author

Leave a Reply

Your email address will not be published. Required fields are marked *

You may have missed