ಬದಲಾಗಲಿದೆ ಕರ್ನಾಟಕ ಪೊಲೀಸರ ಟೋಪಿ*….
1 min read
*ಬದಲಾಗಲಿದೆ ಕರ್ನಾಟಕ ಪೊಲೀಸರ ಟೋಪಿ*
*ತೆಲಂಗಾಣ ಶೈಲಿಯ ತೆಳು* *ಟೋಪಿಗೆ ಸಿಎಂ ಒಪ್ಪಿಗೆ?*
ಪ್ರಸ್ತುತ ಕರ್ನಾಟಕ ರಾಜ್ಯದ ಪೊಲೀಸರು ಧರಿಸುತ್ತಿರುವ ಟೋಪಿಯಲ್ಲಿ ಬದಲಾವಣೆ ಆಗಲಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳಿಗೆ ‘ಸ್ಲೋಚ್ ಕ್ಯಾಪ್’ಗೆ ಪರ್ಯಾಯವಾಗಿ ತೆಲಂಗಾಣ ಪೊಲೀಸರ ಮಾದರಿಯ ತೆಳುವಾದ ಟೋಪಿಯನ್ನು ಆಯ್ಕೆ ಮಾಡಲಾಗಿದ್ದು ಇದಕ್ಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಿದ್ದಾರೆ.
ಬೆಂಗಳೂರು ಪೊಲೀಸ್ ಕೇಂದ್ರ ಕಚೇರಿಯಲ್ಲಿ ನಡೆದ ವಾರ್ಷಿಕ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಪೊಲೀಸರ ಟೋಪಿ ಬದಲಾವಣೆಗೆ ಶುಕ್ರವಾರ ಒಪ್ಪಿಗೆ ನೀಡಿದರು. ಈ ಸಂದರ್ಭದಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳ ಪೊಲೀಸರು ಬಳಸುವ ವಿವಿಧ ಟೋಪಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಎಲ್ಲಾ ಟೋಪಿಗಳನ್ನು ಪರಿಶೀಲನೆ ಮಾಡಿ ನಂತರ ತೆಲಂಗಾಣ ಪೊಲೀಸರ ತೆಳುವಾದ ಮತ್ತು ಧರಿಸಲು ಸುಲಭವಾದ ಕ್ಯಾಪ್‌ಗೆ ಒಪ್ಪಿಗೆ ನೀಡಲಾಗಿದೆ.

