लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
19/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿಧಾನಪರಿಷತ್ತಿಗೆ ಈಗ ಬೇಕಿರುವುದು ನಾಡಿನ ಹಿರಿಯ ಸಾಹಿತಿ, ಜನಪರ ಚಿಂತಕ ಬರಗೂರು ರಾಮಚಂದ್ರಪ್ಪನಂತವರೊಬ್ಬರು*.

1 min read

ಅವಿನ್ ಟಿವಿ ಸುದ್ದಿಜಾಲ ✒️: *ವಿಧಾನಪರಿಷತ್ತಿಗೆ ಈಗ ಬೇಕಿರುವುದು ನಾಡಿನ ಹಿರಿಯ ಸಾಹಿತಿ, ಜನಪರ ಚಿಂತಕ ಬರಗೂರು ರಾಮಚಂದ್ರಪ್ಪನಂತವರೊಬ್ಬರು*.

*ಸರ್ಕಾರ ಈ ಬಗ್ಗೆ ಗಮನಹರಿಸಬಹುದೇ?*

*ಈ ಕುರಿತು ಹಿರಿಯ ಬರಹಗಾರರಾದ ಟಿ ಕೆ ತ್ಯಾಗರಾಜ್ ಅವರ ಅನಿಸಿಕೆಯೊಂದನ್ನು ಅವಿನ್ ಟಿವಿ ಸುದ್ದಿಜಾಲ ತನ್ನ ಓದುಗರಿಗಾಗಿ ಈ ಮೂಲಕ ಉಣಬಡಿಸಿದೆ.*
————————————–
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆ.ಪಿ.ಸಿ.ಸಿ. ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ,
ವಿಧಾನ ಪರಿಷತ್ತಿಗೆ ಇನ್ನೂ ನಾಮಕರಣ ಪ್ರಕ್ರಿಯೆ ಮುಗಿದಿಲ್ಲವಾದರೆ ನೀವು ತಕ್ಷಣಕ್ಕೆ ಗಮನಿಸಬೇಕಾದ ಹೆಸರು ಕನ್ನಡನಾಡಿನ ಪ್ರಖರ ಚಿಂತಕ, ಮಹತ್ವದ ಸಾಹಿತಿ, ಚಲನಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ.

ಮನುಷ್ಯರ ನಡುವೆ ಪ್ರೀತಿ ಬೆಸೆಯುವ, ಧರ್ಮಗಳ ನಡುವೆ ಸಾಮರಸ್ಯ ಮೂಡಿಸುವ, ಅಪ್ಪಟ ಜಾತ್ಯತೀತ ಪ್ರಗತಿಪರ ವ್ಯಕ್ತಿ ಬರಗೂರು.

ಇವರು ಬಡಬಡಿಕೆಯ, ಗದ್ದಲ, ಗೊಂದಲ ಎಬ್ಬಿಸುವ ಹುಸಿ ಕ್ರಾಂತಿಕಾರಿಯಲ್ಲ ಎಂಬುದು ಇಡೀ ನಾಡಿಗೇ ಗೊತ್ತು.

ನಿಖರವಾಗಿ, ಗುರಿ ತಪ್ಪದಂತೆ ಮಾತನಾಡುವ ಪ್ರಬುದ್ಧ ಮತ್ತು ಜವಾಬ್ದಾರಿಯುತ ನಾಗರಿಕ, ಘನತೆ ಕಾಪಾಡಿಕೊಂಡಿರುವ ಅಪ್ಪಟ ಮನುಷ್ಯ.

ನಾನು ಅವರನ್ನು ಅರವತ್ತೈದರ ಆಸುಪಾಸಿನವರು ಅಂದುಕೊಂಡಿದ್ದೆ. ನಂತರ‌ ಗೊತ್ತಾದದ್ದು ಅವರಿಗೆ 78 ವರ್ಷ. ವಯಸ್ಸು ಕೇವಲ ಸಂಖ್ಯೆ ಎನ್ನುವುದು ಬರಗೂರು ಅವರನ್ನು ನೋಡಿದರೇ ಗೊತ್ತಾಗುತ್ತದೆ. ಮುಖ್ಯಮಂತ್ರಿಯಾದ ನಿಮಗೂ 76 ವರ್ಷ.

ಇವತ್ತಿಗೂ ಕ್ರಿಯಾಶೀಲರಾಗಿ ಜನಪರ ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಾ ಜನಜಾಗೃತಿ ಮೂಡಿಸುತ್ತಿರುವ ಬರಗೂರು ವಿಧಾನ ಪರಿಷತ್ತಿಗೆ ಗೌರವ ತರಬಲ್ಲರು.

ಈ‌ ನಾಡಿನ ವರ್ತಮಾನದ ಅಪರೂಪದ ಚೇತನವಾಗಿರುವ ಬರಗೂರು ಆಡಳಿತರೂಡ ಸರ್ಕಾರ ಮತ್ತು ವಿರೋಧ ಪಕ್ಷ ಈ ಎರಡಕ್ಕೂ ಏಕಕಾಲದಲ್ಲಿ ಚಾಟಿ ಏಟು ನೀಡಿ ಮನುಷ್ಯತ್ವದ ಪಾಠ ಹೇಳುವರು. ಅವರ ಮಾತಿಗೆ ಅಂತಹ ಶಕ್ತಿ ಇದೆ.

ಆದರೆ ಅವರಿಗೆ ಈ ಬಗ್ಗೆ ಆಸಕ್ತಿ ಇದೆಯೂ ಇಲ್ಲವೋ ಗೊತ್ತಿಲ್ಲ. ನಿಜವಾಗಿ ಅವರು ಕನ್ನಡದ ಸಾಂಸ್ಕೃತಿಕ ಪ್ರತಿನಿಧಿ. ಅವರ ಪ್ರತಿಮೆ ಮತ್ತು ಜನಪರ ಕಾಳಜಿಯನ್ನು ಯಾರು ಮರೆಯುವಂತಿಲ್ಲ.

ಬರಗೂರಂತವರನ್ನು ಮೇಲ್ಮನೆ ಸದಸ್ಯರನ್ನಾಗಿ ಮಾಡಿದರೆ ಸರ್ಕಾರದ ಗೌರವವು ಹೆಚ್ಚಾಗುತ್ತದೆ. ಸರ್ಕಾರ ಸಕಾರಾತ್ಮಕವಾಗಿ ಚಿಂತಿಸುವುದೇ ಕಾದು ನೋಡಬೇಕಿದೆ !!
•••••••••••••
ಡಿ.ಎಂ.ಮಂಜುನಾಥಸ್ವಾಮಿ
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *