लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹಣದಾಹಕ್ಕೆ ನರ ಹತ್ಯೆ ಮಾಡಿದ ಆರ್‌.ಸಿ.ಬಿ ಮತ್ತು ವ್ಯವಸ್ಥೆ ಲೋಕವೆಸಗಿದ ಕೆ.ಎಸ್. ಸಿ. ಎ…

1 min read

ಜೂನ್ 4ರಂದು ಆರ್. ಸಿ. ಬಿ.ಸಂಭ್ರಮಾಚರಣೆ ವೇಳೆ ಕಾಲು ತುಳಿತಕ್ಕೆ 11 ಜನ ಯುವಕ ಯುವತಿಯರು,ಇಂಜಿನಿಯರ್ ವಿದ್ಯಾರ್ಥಿಗಳು, ಉದ್ಯೋಗಿ ಗಳನ್ನು ಬಲಿಯಾದರು. ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ರಾಜಕೀಯ ಒಳ ಸಂಚು ಹಾಗೂ ಅತಿಯಾದ ಕ್ರಿಕೆಟ್ ದುರಭಿಮಾನದಿಂದ ಇಂತಹ ದುರ್ಘಟನೆಗಳು ನಡೆಯಲು ಕಾರಣ. ಈ ದುರ್ಘಟನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನೇರವಾಗಿ ಹೊಣೆಯಾದರೆ ಹಣದಾಹಕ್ಕೆ ನರ ಹತ್ಯೆ ಮಾಡಿದ ಆರ್‌.ಸಿ.ಬಿ ಮತ್ತು ವ್ಯವಸ್ಥೆ ಲೋಕವೆಸಗಿದ ಕೆ.ಎಸ್. ಸಿ. ಎ. ನೇರ ಹೊಣೆಗಾರರಾಗಿರುತ್ತಾರೆ. ಮತ್ತು ಬಲಿಯಾದವರು ಭಾರತದ ಭವಿಷ್ಯತ್ತಿನ ಪ್ರಜೆಗಳು, ಅವರ ಜೀವದ ಬೆಲೆ ಕೇವಲ 10 ಲಕ್ಷ ಅಲ್ಲ, 50 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಬೇಕೆಂದು ಕೃಷ್ಣಪ್ಪ. ಕೆ.ಕೆ( T. U. C. I.)ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರು ಒತ್ತಾಯಿಸಿದ್ದಾರೆ.
2007ರಲ್ಲಿ ಭಾರತ ತಂಡ ಟಿ 20 ಯಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾಗ, ಮುಂದಿನ ಋತುವಿನಲ್ಲಿ ಅಂದರೆ 2008ರಲ್ಲಿ ಬಿಸಿಸಿಐ ಅನುಮತಿ ಮೇರೆಗೆ ಹಲವಾರು ಶ್ರೀಮಂತ ಉದ್ಯಮಿಗಳು, ಕಾರ್ಪೊರೇಟರುಗಳು ವಿದೇಶ ಬಂಡವಾಳಗಾರರು, ದೇಶದ ಭವಿಷ್ಯ ನಿರ್ಮಿಸಬೇಕಾಗಿದ್ದ ಯುವಕರ,ರಾಷ್ಟ್ರದ ಆರ್ಥಿಕತೆ ಸೃಷ್ಟಿಸುವ ಕಾರ್ಮಿಕರ,ಮತ್ತು ರೈತರ ಮೂಲ ಸಮಸ್ಯೆಗಳನ್ನು ಪ್ರಶ್ನಿಸಿದಂತೆ ವಿಚಲಿತಗೊಳಿಸಲೆಂದು 2008ರಲ್ಲಿ ಐಪಿಎಲ್ ಎಂಬ ವಾಣಿಜ್ಯ ಕ್ರೀಡೆಯನ್ನು ಆಯೋಜಿಸಿ 8 ತಂಡಗಳ ರಚನೆ ಮಾಡಿ ಅ 8 ತಂಡಗಳಲ್ಲಿ ಆರ್‌ಸಿಬಿ ತಂಡವನ್ನು ( ಸಂಸ್ಥೆ ) ಪ್ರಪ್ರಥಮವಾಗಿ ಒಡೆತನ ಹೊಂದಿದ್ದು ಮಧ್ಯದ ದೊರೆ ವಿಜಯ್ ಮಲ್ಯ. ತನಗೆ ಅತಿ ಹೆಚ್ಚು ಮಾರಾಟ ಹಾಗೂ ಲಾಭ ತಂದು ಕೊಡುತ್ತಿದ್ದ ರಾಯಲ್ ಚಾಲೆಂಜ್ ಎಂಬ ವಿಸ್ಕಿಯ ಹೆಸರನ್ನೇ ಇದಕ್ಕೆ ಇಟ್ಟು ಅದಾದ ನಂತರ ಅದರ ಮುಂದೆ “ರಾಯಲ್ ಚಾಲೆಂಜರ್ ಬೆಂಗಳೂರ್ “ಎಂಬ ಹೆಸರಿನೊಂದಿಗೆ ಪ್ರಚಲಿತಗೊಂಡಿತು. ಕೆಲವೇ ವರ್ಷದಲ್ಲಿ ಉದ್ಯಮದ ನಷ್ಟ ಅನುಭವಿಸಿದ ಕಾರಣ, ಈ ಸಂಸ್ಥೆಯನ್ನು ಬ್ರಿಟನ್ನಿನ” ಡಿಯ ಜಿಯೋ ” ಎಂಬ ಸಂಸ್ಥೆಗೆ 2016ರಲ್ಲಿ 476 ಕೋಟಿಗೆ ಮಾರಾಟ ಮಾಡಲಾಯಿತು. ಆರ್‌.ಸಿ.ಬಿ.ಯ ಪಥಮೇಶ್ ಮಿಶ್ರ ಎಂಬ ವಿದೇಶಿ ಚೇರ್ಮನ್.
ಒಂದು ಕಡೆ ದೇಶದ ಆದಾಯ ಕುಸಿಯುತಿದಾರೆ, 40 ರಿಂದ 45% ಜನ ಎರಡು ಹೊತ್ತು ಊಟವಿಲ್ಲದೆ ಪರದಾಡುತ್ತಿದ್ದಾರೆ ಎಂದು ವರದಿಯಾಗಿದೆ. ಎರಡು ಕೋಟಿ ಯುವಕ ಯುವತಿಯರಿಗೆ ಉದ್ಯೋಗ ಭರವಸೆಯಾಗಿಯೇ ಉಳಿದಿದೆ. ಮಹಿಳೆಯರಿಗೆ ಸರಿಯಾದ ಸ್ಥಾನಮಾನ ರಕ್ಷಣೆ ಇಲ್ಲದೆ ಹೋಗಿದೆ. ಕಾರ್ಮಿಕರ 44 ಕಾರ್ಮಿಕ ಕಾಯ್ದೆಗಳನ್ನು ರದ್ದು ಮಾಡಿ 4 ಸಂಹಿತೆಯನ್ನು ಮಾಡಲು ಹೊರಟಿರುವ ಸರ್ಕಾರ ರೈತರ ಹೋರಾಟ ಇಡೀ ಪ್ರಪಂಚವೇ ಪ್ರಶ್ನಿಸುವಂತೆ ಆಗಿದೆ. ನಮ್ಮ ನೆಲ,ಜಲ,ಸಕಲ ಸಂಪತ್ತನ್ನೆಲ್ಲ ವಿದೇಶ ಕಂಪನಿಗಳಿಗೆ ಮಾರಿ, ಇಲ್ಲಿ ಜಾತಿವಾದ, ಕೋಮುವಾದ,ಮತೀಯವಾದಗಳನ್ನು ಬಿತ್ತಿ, ಇಂತಹ ಐಪಿಎಲ್,ದೇವರು, ಧರ್ಮ, ಜಾತಿ ಹೆಸರಿನಲ್ಲಿ ವಿಭಜಿಸುವ ಈ ಸಂದರ್ಭದಲ್ಲಿ ವಿದ್ಯಾರ್ಥಿ ಯುವಕರು,ಕಾರ್ಮಿಕರು, ರೈತಾಪಿ ವರ್ಗದವರು ಜಾಗೃತಿಗೊಂಡು ತಮ್ಮ ಹಕ್ಕುಗಳ ಜೊತೆಗೆ ಮೂಲಭೂತ ಸಮಸ್ಯೆಗೆ ಹೋರಾಡುವ ಅನಿವಾರ್ಯತೆ ಇದೆ. ಪ್ರತಿಯೊಂದು ವ್ಯಕ್ತಿಗೂ ಒಂದೊಂದು ಕ್ರೀಡೆಯ ಮೇಲೆ ಅಭಿಮಾನವಿರುತ್ತದೆ,ಆದರೆ ಅದು ಮಿತಿಮೀರಿ ದುರಭಿಮಾನವಾದರೆ, ಇಂತ ಘಟನೆಗಳು ಮರುಕಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಕ್ರೀಡೆಯಲ್ಲಿ ಹಣ ಮಾಡಿದವರು ಇಷ್ಟರವರಿಗೆ ಮಡಿದವರ ಬಗ್ಗೆ ಸಂತಾಪ ಸೂಚನೆ ಮಾಡದಿರುವುದು ವಿಪರ್ಯಾಸ.

About Author

Leave a Reply

Your email address will not be published. Required fields are marked *

You may have missed