ಪುರುಷ ಸಮಾಜದ ಸಿದ್ಧಮಾದರಿಯನ್ನು ಮೆಟ್ಟಿನಿಂತ ನಮ್ಮತ್ತೆ” ….
1 min read
” ಪುರುಷ ಸಮಾಜದ ಸಿದ್ಧಮಾದರಿಯನ್ನು ಮೆಟ್ಟಿನಿಂತ ನಮ್ಮತ್ತೆ” ….. ನಮ್ಮ ತಂದೆಯವರ ಮೊದಲ ಅಕ್ಕ, ದೇವಮ್ಮ (90) ವರ್ಷ ನಿನ್ನೆ ವಯೋಸಹಜ ಅನಾರೋಗ್ಯದಿಂದ ಮರಣ ಹೊಂದಿದರು ಆ ಗಟ್ಟಿಗಿತ್ತಿಯ ಬಗ್ಗೆ ಒಂದೆರಡು ಸಾಲುಗಳನ್ನು ಬರೆದಿದ್ದೇನೆ ಸ್ವಲ್ಪ ಕಣ್ಣಾಡಿಸಿ………………., ನಮ್ಮ ಕುಟುಂಬದ ಹಿರಿಯ ಜೀವ ಅದು. ನಮ್ಮ ತಂದೆಯವರ ಮೊದಲ ಅಕ್ಕ ಶಿಸ್ತಿಗೆ ಹೆಸರಾಗಿದ್ದ ನಮ್ಮತ್ತೆ, ಜೀವನದಲ್ಲಿ ಏಳು ಬೀಳುಗಳನ್ನು ಕಂಡವರು. ನಮ್ಮತ್ತೆ ಬೇಲೂರು ತಾಲ್ಲೂಕಿನ ಕೊಗೋಡು ಸಮೀಪದ ಬೊಮ್ಮನಹಳ್ಳಿ ಗ್ರಾಮದ ರಾಮಯ್ಯ ನವರನ್ನು ಮದುವೆಯಾಗಿ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಮರು ವರ್ಷವೇ, ರಾಮಯ್ಯ ಅನಾರೋಗ್ಯದಿಂದ ಮರಣ ಹೊಂದಿದರು. ಪುಟ್ಟ ಮಗು ತಂದೆಯನ್ನು ನೋಡಲೆ ಇಲ್ಲ ಆ ಕಾಲದಲ್ಲಿ ಪತಿ ಇಲ್ಲದ್ದಿದ್ದರೆ ಬದುಕು ಹೇಗೆ ಊಹಿಸಿ?? ಎಲ್ಲೆಲ್ಲೋ ಒಂದೊಂದು ಮನೆ ಬಡತನ, ಅನಾರೋಗ್ಯ, ಅನಕ್ಷರತೆ, ಜಾತಿ ದೌರ್ಜನ್ಯ, ಅಸ್ಪೃಶ್ಯತೆಆಚರಣೆ, ಕೌಟುಂಬಿಕ ದೌರ್ಜನ್ಯದಂತಹ ಪರಿಸ್ಥಿತಿಯಲ್ಲೂ ಮಗಳನ್ನು ಸಾಕಿ ಸಲುಹಿದ್ದು, ಒಂದಿಷ್ಟು ವಿಧ್ಯಾಭ್ಯಾಸ ಕೊಡಿಸಿದ್ದು ಆ ಕಾಲಕ್ಕೆ ದೊಡ್ಡ ಸಾಧನೆಯೇ ಸರಿ….. ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡರು ಮರು ಮದುವೆಯಾಗದೇ ಮಗಳನ್ನು ಸಾಕಿ ಸಲುಹಿದ ಆ ತಾಯಿ ತುಂಬಾ ಧೈರ್ಯಶಾಲಿ. ಮಗಳಿಗೆ ಮದುವೆ ಮಾಡಿ ಅಳಿಯ ಮಗಳೊಂದಿಗೆ ವಾಸವಾಗಿದ್ದ ನಮ್ಮತ್ತೆ, ಬಹಳ ಶಿಸ್ತಿನ ಸಿಪಾಯಿಯಂತೆ ಬದುಕಿದ್ದವರು.. ನಡೆಯಲ್ಲಿಯು ಗಾಂಭೀರ್ಯತೆ , ನುಡಿಯಲ್ಲಿ ಯು ಗಾಂಭೀರ್ಯತೆ! ಅವರು ಮಾತನಾಡುತ್ತಿದ್ದರೇ ಯಾರು ಸಹ ಮರು ಮಾತಾನಾಡುತ್ತಿರಲಿಲ್ಲ ಅಷ್ಟು ಅರ್ಥ ಗರ್ಭಿತವಾಗಿ ಸ್ಪಷ್ಟವಾಗಿ ಮಾತನಾಡುತ್ತಿದ್ದರು. ಉಡುಗೆ ತೊಡುಗೆಯಲ್ಲಿ ಅವರನ್ನು ಮೀರಿಸುವವರೇ ಇರಲಿಲ್ಲ… ಅವರು ತ್ಯಾಗದ ಬದುಕಿನ ನೂರಾರು ಘಟನೆಯಲ್ಲಿ ಒಂದು ಘಟನೆಯನ್ನು ಹೇಳಲೇ ಬೇಕು, ಕುಟುಂಬದ ಆಸ್ತಿ ವಿಚಾರದಲ್ಲಿ ನಮ್ಮ ಅಪ್ಪನದು ಯಾವುದೇ ರೀತಿಯ ತಪ್ಪು ಇಲ್ಲದಿದ್ದರೂ ಕೊಲೆ ಮಾಡಲು ಪ್ರಯತ್ನಿಸಿ ಬಲಗೈ ಕತ್ತರಿಸಿದಾಗ ವರ್ಷನೂ ಗಟ್ಟಲೆ ನಮ್ಮ ಅಪ್ಪನಿಗೆ ಸೇವೆ ಸಲ್ಲಿಸಿದ ಆ ಕರುಣಾಮಯಿ.. ಊರಿನಲ್ಲಿ ನಮ್ಮದು ತುಂಬು ದೊಡ್ಡ ಕುಟುಂಬ ಆರು ಜನ ಅಣ್ಣ ತಮ್ಮಂದಿರ ಮನೆಗಳು ಇದ್ದರು, ಅಲ್ಲಿಗೆ ನಮ್ಮತ್ತೆ ಹೋಗುತ್ತಿದಿದ್ದು ಬಹಳ ಕಡಿಮೆ ನಾವೆಂದರೆ ನಮ್ಮತ್ತೆಗೆ ಪಂಚಪ್ರಾಣ ಎಂತಹ ಸಂದರ್ಭದಲ್ಲಿಯು ತವರುಮನೆಗೆ ಬಂದರೆ ನಮ್ಮ ಮನೆಯಲ್ಲಿ ಬಡತನ ಇದ್ದರು ಊಟಕ್ಕೆ ಇಲ್ಲದಿದ್ದರೂ ನಮ್ಮ ಮನೆಯಲ್ಲಿಯೇ ವಾಸ್ತವ್ಯ …. ನಮ್ಮತ್ತೆ ನಮ್ಮ ಮನೆಗೆ ಬಂದರೆ ನಮಗೆಲ್ಲಾ ಎಲ್ಲಿಲ್ಲದ ಸಡಗರ ಸಂಭ್ರಮ ವಾಗುತ್ತಿತ್ತು.. ಅತ್ತೆ ಹೇಳುತ್ತಿದ್ದ ಬದುಕಿನ ನೀತಿ ಪಾಠಗಳು ಇಂದು ನಮ್ಮನ್ನು ಅನೇಕ ರೀತಿಯಲ್ಲಿ ಪ್ರೇರೇಪಿಸಿದೆ. ಬಹುಶಃ ನಾವು ಉನ್ನತ ಮಟ್ಟದ ಶಿಕ್ಷಣ ಕಲಿಯಲು ನಮ್ಮ ಅತ್ತೆಯ ಬದುಕಿನ ಪಾಠ ನಮಗೆ ಪ್ರೆರಣೆ ನಮ್ಮ ತಂದೆ ತಾಯಿಗೆ ನಾವು ಯಾವತ್ತೂ ಬಯ್ಯಲಿಲ್ಲ, ಹೊಡೆಯಲಿಲ್ಲ, ಮಾನಾಸಿಕವಾಗಿ ತೊಂದರೆ ನೀಡಲಿಲ್ಲ ಅದು ನಮ್ಮತ್ತೆ ನಮಗೆ ಕಲಿಸಿದ ನೀತಿ ಪಾಠ.. ಪುಸ್ತಕದಿಂದ ಕೇವಾಲ ಪರೀಕ್ಷೆಗಾಗಿ ಕಲಿಯಬಹುದೇ ಹೊರತು ಮಾನವೀಯ ಮೌಲ್ಯಗಳನ್ನು ಇಂತಹ ಹಿರಿಯ ಜೀವಗಳಿಂದ ಅವರ ಅನುಭವದ ಮಾತುಗಳಿಂದ ಕಲಿಯಬಹುದು . ಹಿರಿಯರ ಒಂದೊಂದು ಮಾತುಗಳು ಮುತ್ತುಗಳಂತೆ ಹಿರಿಯರನ್ನು ಗೌರವಿಸಬೇಕು ಅವರಿಂದ ಕಲಿಯಬೇಕು……. ಸಾಮಾಜಿಕಹೋರಾಟಗಾರರೆಂದರೆ ನಮ್ಮ ತ್ತೆಗೆ ತುಂಬಾ ಗೌರವ ಅವರು ಈ ಸಮಾಜಕ್ಕಾಗಿ ದುಡಿಯುವವರೆಂಬ ಸತ್ಯ ನಮ್ಮತ್ತೆಗೆ ಅಂದೇ ಗೊತ್ತಿತ್ತು. ಒಮ್ಮೆ ಅಂಗಡಿ ಚಂದ್ರಣ್ಣ ಹಾಗೂ ನಾನು ನಮ್ಮತ್ತೆಯ ಮೊಮ್ಮಗ ಪರಮೇಶ್ ಸಮಸ್ಯೆಯಲ್ಲಿರುವಾಗ ಬಗೆಹರಿಸಿದ್ದೆವು ಆ ಸಂದರ್ಭದಲ್ಲಿ ಹೋರಾಟಗಾರರಾದ ಅಂಗಡಿ ಚಂದ್ರಣ್ಣ ಅವರನ್ನು ನಮ್ಮತ್ತೆಯ ಮನೆಗೆ ಕರೆದುಕೊಂಡು ಹೋದಾಗ….. ಆ ಹಿರಿಯ ಜೀವದ ಸಡಗರ ಸಂಭ್ರಮ ಅಷ್ಟಿಷ್ಟಲ್ಲ. ಹೋರಾಟಗಾರರನ್ನು ಗೌರವಿಸುವ ಮನಸ್ಥಿತಿ ನಮ್ಮತ್ತೆಯದು…. ಮನೆಗೆ ಯಾರೇ ಬಂದರು ಪ್ರೀತಿಯಿಂದ ಮಾತನಾಡಿಸಿ ಊಟ ನೀಡುತ್ತಿದ್ದಿದ್ದು ನಮ್ಮತ್ತೆಯ ಹುಟ್ಟು ಗುಣ.. ಬಹುಶಃ ಈ ಬರಹ ಆ ಗಟ್ಟಿಗಿತ್ತಿಯ ಬಗ್ಗೆ ಪೀಠಿಕೆ ಅಷ್ಟೇ ……####
ಆದರೇ ಇದರಿಂದ ಕಲಿಯಬೇಕಾದದ್ದು ಇಷ್ಟೇ!!! ಈ ನಾಡಿನ ಪ್ರತಿ ಹೆಣ್ಣು ಮಕ್ಕಳು ಕೀಳಿರಿಮೆಯಿಂದ ಹೊರಬರಬೇಕಾಗಿದೆ ಧ್ಯೆರ್ಯಶಾಲಿಗಳಾಗಿ ಪುರುಷ ಸಮಾಜದ ಸಿದ್ದ ಮಾದರಿಯನ್ನು ಹೆದರಿಸಬೇಕಾಗಿದೆ. ಇಂದು ನಮ್ಮನ್ನೆಲ್ಲ ಅಗಲಿದ “ನಮ್ಮ ಕುಟುಂಬದ ಗಟ್ಟಿ ಗಿತ್ತಿ ಈ ನಾಡಿನ ಎಲ್ಲಾ ವರ್ಗದ ನೊಂದ ಮಹಿಳೆಯರಿಗೆ ಆದರ್ಶವಾಗಲಿ…. ಕೌಟುಂಬಿಕವಾಗಿ ಯಾವುದೇ ಸಮಸ್ಯೆಗಳು ಎದುರಾದರು ಮಹಿಳೆಯರು ಎದೆಗುಂದದೆ ಧೈರ್ಯದಿಂದ ಎದುರಿಸಬೇಕಾಗಿದೆ. ಆತ್ಮಹತ್ಯೆ ಎಲ್ಲಾ ಸಮಸ್ಯೆಗೆ ಪರಿಹಾರವಲ್ಲ. ಮಹಿಳೆಯರು ಬಾಲ್ಯದಲ್ಲಿ ತಂದೆಯ ಆಶ್ರಯದಲ್ಲಿ, ಮದುವೆಯಾದ ನಂತರ ಗಂಡನ ಆಶ್ರಯದಲ್ಲಿ, ವೃದ್ಯಾಪ್ಯದಲ್ಲಿ ಗಂಡು ಮಕ್ಕಳ ಆಶ್ರಯದಲ್ಲಿ ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆ ಬದುಕಬೇಕೆಂಬಾ ಪುರುಷ ಸಮಾಜದ ಸಿದ್ಧ ಮಾದರಿಯನ್ನು ಮೆಟ್ಟಿನಿಂತು ಸಮಸ್ಯೆ ಸವಾಲುಗಳನ್ನು ಎದುರಿಸಬೇಕಾಗಿದೆ. ನಮ್ಮತ್ತೆ ನೊಂದ ಮಹಿಳೆಯರಿಗೆ ಆದರ್ಶವಾಗಲಿ. “ದೇವಮ್ಮ ಅಮರ್ ಹೇ”.🌹🌹🌹🌹🌹🌹🌹🌹🌹🌹……….✍️ ಹರೀಶ್ ನಲ್ಕೆ

