ತ್ಯಾಗದ ಹಬ್ಬ ಅದುವೇ ಈದುಲ್ ಅಝ್ಹಾ*….
1 min read
*ತ್ಯಾಗದ ಹಬ್ಬ ಅದುವೇ ಈದುಲ್ ಅಝ್ಹಾ*
ಬಕ್ರೀದ್ ಹಬ್ಬದ ಇತಿಹಾಸ ಬಹಳ ಪ್ರಾಚೀನವಾಗಿದೆ ಮತ್ತು ಇದು ಇಸ್ಲಾಮಿಕ್ ಧರ್ಮದಲ್ಲಿ ಬಹುಮುಖ್ಯವಾದ ಹಬ್ಬವಾಗಿದೆ. ಬಕ್ರೀದ್ನ್ನು ಈದುಲ್
ಅಝ್ಹಾ ಎಂದೂ ಇದನ್ನು ಕರೆಯುತ್ತಾರೆ, ಇದರ ಅರ್ಥ “ತ್ಯಾಗದ ಹಬ್ಬ” ಎಂದಾಗಿದೆ.
ಬಕ್ರೀದ್ ಹಬ್ಬವು ಪ್ರವಾದಿ ಇಬ್ರಾಹಿಂ (ಅಲೆಹಿಸ್ಸಲಾಮ್) ಅವರ ತ್ಯಾಗಬಲಿದಾನವನ್ನು ಸ್ಮರಿಸುವ ದಿನವಾಗಿದೆ.
ಇಸ್ಲಾಮಿಕ್ ಕಥಾನಕಗಳ ಪ್ರಕಾರ
ಪ್ರಪಂಚದ ಸೃಷ್ಟಿಕರ್ತ ಏಕನಾದ ಅಲ್ಲಾಹನು (ದೇವರು) ಪ್ರವಾದಿ ಇಬ್ರಾಹಿಂ ಅವರನ್ನು ಪರೀಕ್ಷಿಸಲು, ಅವರ ಅತ್ಯಂತ ಪ್ರೀತಿಯ ಮಗನಾದ ಇಸ್ಮಾಯೀಲ್ (ಅಲೆಹಿಸ್ಸಲಾಮ್) ರನ್ನು ಕುರ್ಬಾನಿ (ಬಲಿದಾನ) ಮಾಡಬೇಕೆಂದು ಆದೇಶಿಸುತ್ತಾನೆ.
ಇಬ್ರಾಹಿಂ ಅವರು ತಮ್ಮ ಮಗನನ್ನು ಬಲಿದಾನ ಮಾಡಲು ಸಿದ್ಧರಾಗುತ್ತಾರೆ.
ಆದರೆ ಅವರ ನಿಷ್ಠೆ ಮತ್ತು ಧರ್ಮನಿಷ್ಠೆಯನ್ನು ಪರೀಕ್ಷಿಸಿದ ಸೃಷ್ಟಿಕರ್ತ ಅಲ್ಲಾಹು, ಕೊನೆಗೆ ಮಗನನ್ನು ಉಳಿಸಿ, ಬದಲು ಒಂದು ಮೇಕೆಯನ್ನು ಬಲಿಯಾಗಿ ಒದಗಿಸುತ್ತಾನೆ.
ಈ ಘಟನೆಗೆ ಸ್ಮರಣಾರ್ಥವಾಗಿ ಪ್ರತಿ ವರ್ಷ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಆಚರಿಸುತ್ತಾರೆ
ಜಾಗತಿಕ ಮುಸ್ಲಿಮರ ಹಜ್ಜ್ ಯಾತ್ರೆಯ ಸಮಯದಲ್ಲಿ ಬಕ್ರೀದ್ ಬರುತ್ತದೆ.
ಇದು ದುಲ್ಹಜ್ ತಿಂಗಳ 10ನೇ ದಿನವಾಗಿದೆ.
ಈದುಲ್ ಅಝ್ಹಾ ದಿನ ಮುಸ್ಲಿಮರು ವಿಶೇಷ ನಮಾಝ್ (ಈದ್ ಪ್ರಾರ್ಥನೆ) ಸಲ್ಲಿಸುತ್ತಾರೆ.
ಆ ಬಳಿಕ ಧಾರ್ಮಿಕ ತ್ಯಾಗದ ರೂಪದಲ್ಲಿ ಕುರಿ, ಎಮ್ಮೆ,ಎತ್ತು ,ಕೋಣ ಅಥವಾ ಮೇಕೆಯನ್ನು ಬಲಿ ಕೊಡುತ್ತಾರೆ.
ಆ ಮಾಂಸವನ್ನು ಮೂರು ಭಾಗ ಮಾಡಲಾಗುತ್ತದೆ — ಒಂದು ಭಾಗ ಕುಟುಂಬಕ್ಕೆ, ಒಂದು ಭಾಗ ಸ್ನೇಹಿತರಿಗೆ ಮತ್ತು ಇನ್ನೊಂದು ಭಾಗ ಬಡವರಿಗೆ ಹಂಚಲಾಗುತ್ತದೆ.
ಸಹಾನುಭೂತಿ, ದಾನ, ಸಮಾನತೆ ಮತ್ತು ದೇವರ ಬದ್ಧತೆಯನ್ನು ಪ್ರತಿಪಾದಿಸುವ ಹಬ್ಬವಾಗಿದೆ.
ತ್ಯಾಗ ಬಲಿದಾನ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಈದುಲ್ ಅಝ್ಹಾ (ಬಲಿ ಪೆರ್ನಾಳ್)ನಾಡಿನ ಸಮಸ್ತಗೆ ಸುಖ,ನೆಮ್ಮದಿ, ಐಶ್ವರ್ಯ, ಏಕತೆಯನ್ನು ಹೊತ್ತು ತರಲಿ.
*🖱️ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ*
*ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರು, ಸ್ಥಾಪಕಾಧ್ಯಕ್ಷರು, ಬಂಧುತ್ವ ಚಾರಿಟೇಬಲ್ ಟ್ರಸ್ಟ್*

