लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
16/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಲೆನಾಡಿಗೆ ಕೀರ್ತಿ ತಂದ.ಜಯರಾಂ. ಚಕ್ಕುಡಿಗೆ…

ಮೂಡಿಗೆರೆ ತಾಲೂಕಿನ ಚಕ್ಕುಡಿಗೆ ಗ್ರಾಮದ ದಿವಂಗತ ಶಿವಪ್ಪ ಗೌಡ ಮತ್ತು ದಿವಂಗತ ಕಮಲಮ್ಮ ರವರ ಪುತ್ರ ಲೆಫ್ಟಿನೆಂಟ್ ಕರ್ನಲ್ ಸಿ ಎಸ್ ಜಯರಾಂ ರ

ವರು ಕಳೆದ ಮೂವತ್ತೈದು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಇಂದು ಮಧ್ಯ ಪ್ರದೇಶದ ಜಬ್ಬಲ್ಪುರ ದಲ್ಲಿರುವ ಮಧ್ಯ ಭಾರತ ಮುಖ್ಯಾಲಯ ದಲ್ಲಿ ನಿವೃತ್ತಿ ಹೊಂದಿ ಅವರನ್ನು ಬೀಳ್ಕೊಡಲಾಯಿತು. ಇವರು ಮೂವತ್ತೈದು ವರ್ಷಗಳ ಸೇವೆಯಲ್ಲಿ ದೇಶದ ಪ್ರಮುಖ ಬಾಗಗಳಾದ ಲೇಹ್- ಲಡ್ಡಾಕ್, ಜಮ್ಮು- ಕಾಶ್ಮೀರ, ನಾಗಲ್ಯಾಂಡ್, ಪಂಜಾಬ್, ರಾಜಸ್ತಾನ, ಹಿಮಾಚಲ ಪ್ರದೇಶ, ಪಶ್ಮೀಮಾ ಬಂಗಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ,ಮಧ್ಯಪ್ರದೇಶ ಇತ್ಯಾದಿ ಜಾಗಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.
ಇವರು ಸೇನೆಯ ಪ್ರಮುಖ ಕಾರ್ಯಾಚರಣೆಗಳಾದ ಆಪರೇಷನ್ ವಿಜಯ್, ಆಪರೇಷನ್ ಪರಾಕ್ರಮ, ಆಪರೇಷನ್ ರಕ್ಷಕ, ಕೌಂಟರ್ ಇನ್ಸರ್ಜನ್ಸಿ ಮತ್ತು ಕೌಂಟರ್ ಟೆರರಿಸಂ ಹಾಗು ಮೊನೆ ನಡೆದ ಆಪರೇಶನ್ ಸಿಂಧೂರ್ ನಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ, ಇವರ ಕರ್ಥ್ಯವ್ಯ ನಿಷ್ಠೆ ಹಾಗು ಪ್ರಾಮಾಣಿಕತೆಗೆ ಕೇಂದ್ರ ಸರ್ಕಾರ ಇವರನ್ನು ಇನ್ನೂ ನಾಲ್ಕು ವರ್ಷಗಳ ಕಾಲ ದೇಶ ಸೇವೆ ಮಾಡುವ ಅವಕಾಶ ವನ್ನು ಮಾಡಿ ಕೊಡಲಾಗಿದೆ. ಈಗ ಇವರು ಉತ್ತರಪ್ರದೇಶ ದಲ್ಲಿರುವ ಬರೇಲಿ ಗೆ ಮುಂದಿನ ತಮ್ಮ ಸೇವೆಗಾಗಿ ತೆರಳುತ್ತಿದ್ದಾರೆ. ಇವರ ದೇಶ ಸೇವೆಗೆ ಹಾಗು ಮುಂದಿನ ಕಾರ್ಯಕ್ಕೆ ಶುಭ ಹಾರೈಸೋಣ

About Author

Leave a Reply

Your email address will not be published. Required fields are marked *

You may have missed