ಅಯ್ಯಪ್ಪ,ಗಣಪತಿ, ಸುಬ್ರಮಣ್ಯ ,ಮಂಜುನಾಥ….
1 min read
ಅಯ್ಯಪ್ಪ,ಗಣಪತಿ, ಸುಬ್ರಮಣ್ಯ ,ಮಂಜುನಾಥ
ನಾ
ವು ಯಾವುದೇ ಖಾಸಗಿ ಹಾಸ್ಪಿಟಲ್ ಗೆ ಹೋದಾಗ ಅಲ್ಲಿ ಗೋಡೆಯ ಮೇಲೆ ದೊಡ್ಡ ಎಲ್ಇಡಿ ಟಿವಿಯನ್ನು ನೇತು ಹಾಕಿರುತ್ತಾರೆ ಅದರಲ್ಲಿ ಸಾಮಾನ್ಯವಾಗಿ ಡಿಸ್ಕವರಿ,ಜಿಯೋಗ್ರಫಿ ಚಾನೆಲ್ ಗಳು ಬರುತ್ತಿರುತ್ತದೆ ನೋಡು ತ್ತಾ ಕುಳಿತರೇ ಸಮಯ ಓದುದ್ದೆ ಗೊತ್ತಾಗೋದಿಲ್ಲ ಏಕೆಂದರೆ ವಿಪರೀತ ರೋಗಿಗಳಿರುವ ಕಾರಣ ಟೈಮ್ ಪಾಸ್ ಗಾಗಿ ಆ ಚಾನೆಲ್ ಅನ್ನು ಹಾಕುತ್ತಾರೆ ನೋಡುತ್ತಾ ಕುಳಿತಿರುವ ಸಂದರ್ಭದಲ್ಲಿ ಒಂದು ವಿಡಿಯೋ ಬರುತ್ತದೆ ಹಬ್ಬಾ ಮೈ ಜುಮ್ ಎನ್ನಬೇಕು ಅಂದರೆ ಹಸಿರಾದ ಹುಲ್ಲಿನ ಮೇಲೆ ಜಿಂಕೆ ತನ್ನ ಪಾಡಿಗೆ ಹುಲ್ಲನ್ನು ತಿನ್ನುತ್ತಿರುತ್ತದೆ ಅದಕ್ಕೆ ಯಾವುದೇ ಆಲೋಚನೆ ಇರುವುದಿಲ್ಲ ಅದರ ಪಾಡಿಗೆ ಅದು ಹುಲ್ಲನ್ನು ಮೇಯಿತಿರುತ್ತದೆ ಆದರೆ ಆ ಜಿಂಕೆಯ ಬೇಟೆಗಾಗಿ ಪಕ್ಕದಲ್ಲಿ ಪೊದೆಯ ಸಮೀಪ ಒಂದು ಹುಲಿ ಹೊಂಚು ಹಾಕುತ್ತಾ ಇರುತ್ತದೆ ನಿಧಾನವಾಗಿ ಜಿಂಕೆಯ ಸಮೀಪ ಬರುತ್ತಿರುತ್ತದೆ ಅದನ್ನು ನೋಡಿದ ಮರದ ಮೇಲೆ ಕುಳಿತಿರುವ ಪಕ್ಷಿಗಳು ವಿಚಿತ್ರವಾದ ಶಬ್ದವನ್ನು ಮಾಡುತ್ತಾವೆ ಆ ಶಬ್ದ ಭಯವನ್ನು ಹುಟ್ಟಿಸುತ್ತದೆ ಆಗ ಎಚ್ಚೆತ್ತುಕೊಂಡ ಜಿಂಕೆ ಅಪಾಯ ಕಾದಿದೆ ಎಂದು ತಿಳಿದು ಅಲ್ಲಿಂದ ಕಾಲ್ ಕಿತ್ತು ಓಡಲು ಪ್ರಾರಂಭಿಸುತ್ತದೆ ಆದರೆ ಪಕ್ಕದಲ್ಲಿ ಹೊಂಚು ಹಾಕಿದ ಹುಲಿ ಹೆಂಗು ತಿಂದ ಮಂಗನಂತೆ ಅಲ್ಲೇ ಆ ಜಿಂಕೆ ಓಡುವುದನ್ನು ನೋಡುತ್ತದೆ ಅಂದರೆ ಜಿಂಕೆಗೂ ಪಕ್ಷಿಗಳಿಗೂ ಯಾವುದೇ ಸಂಬಂಧ ಇಲ್ಲ ಆದರೆ ಜಿಂಕೆಯನ್ನು ಉಳಿಸಲು ಆ ಪಕ್ಷಗಳು ಮಾಡಿದ ಸಹಾಯಕ್ಕೆ ಜಿಂಕೆಯು ಸದಾ ಚಿರಋಣಿ ಅಲ್ಲವೇ …….ಈಗ ದಲಿತ ಸರ್ಕಾರಿ ಸರ್ಕಾರಿ ನೌಕರರ ವಿಚಾರಕ್ಕೆಬರೋಣ ಅಂಬೇಡ್ಕರ್ ಕೊಟ್ಟ ಮೀಸಲಾತಿಯಿಂದ ಸರ್ಕಾರಿ ಹುದ್ದೆಯನ್ನು ಪಡೆದಿರುತ್ತಾರೆ ಅವರು ಬಹು ಸಂಖ್ಯಾತ ದಲಿತರಿಗಿಂತ ಒಂದು ಹೆಜ್ಜೆ ಮೇಲೆ ಹೋಗಿ ಮರದ ಮೇಲೆ ಕುಳಿತಿದ್ದಾರೆ. ಅವರ ಸಮೂದಾಯದ ಅನೇಕರು ವಿದ್ಯೆ ಇಲ್ಲ ಬುದ್ಧಿ ಇಲ್ಲ ದಿನಗೂಲಿ ಕೆಲಸ ಮಾಡುತ್ತಾ ಆ ಜಿಂಕೆಯಂತೆ ಸಾಧು ಪ್ರಾಣಿಯಂತೆ ದುಡಿಯುತ್ತಿದಾರೆ ಆದರೂ ಅವರ ಮೇಲೆ ಪ್ರಭುತ್ವ ನಾನಾ ರೀತಿಯ ದಾಳಿ ಮಾಡುತ್ತಿದೆ, ಭೂಕಬಳಿಕೆ, ಒತ್ತುವರಿ , ದಲಿತ ಸಮೂದಾಯದವರಿಗೆ ಸೇರಿದ ಭೂ ದಾಖಲೆಗಳ ನಾಶ, ಇನ್ನೂ ಮುಂತಾದ ರೀತಿಯಲ್ಲಿ ದಲಿತರ ಮೇಲೆ ಸವಾರಿ ಮಾಡುತ್ತಿದೆ . ಆದರೆ ಮರದ ಮೇಲೆ ಕುಳಿತಿರುವ ಸರ್ಕಾರಿ ನೌಕರರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ವ್ಯಾಘ್ರ ಮಾಡುತ್ತಿರವ ಹೊಂಚಿಗೆ ಸಹಾಯ ಮಾಡುತ್ತಾ ,, ನೊಂದವರನ್ನು ಎಚ್ಚರಿಸದೇ ಭಕ್ಷಿಸಲು ಸಹಾಯ ಮಾಡುತ್ತಿದ್ದಾರೆ ಇದರ ಅರ್ಥ ….ಇಷ್ಟೇ ಅಂದರೆ ದಲಿತ ಸಮುದಾಯ ಎಚ್ಚರಗೊಳ್ಳಬೇಕಾದ್ದು ಮೀಸಲಾತಿಯಿಂದ ಒಂದು ಹೆಜ್ಜೆ ಮೇಲೆ ಹೋದಂತಹ ಸರ್ಕಾರಿ ನೌಕರರು ಪ್ರಭುತ್ವ ಮತ್ತು ತೋಷಿತ ಸಮುದಾಯದ ನಡುವೆ ಸಂಪರ್ಕ ಕೊಂಡಿಯಂತೆ ಕೆಲಸ ಮಾಡಬೇಕು ಆಗ ಮಾತ್ರ ಶೋಷಿತ ಸಮುದಾಯ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ.ಆ ಕೆಲಸವನ್ನು ಇತ್ತೀಚಿಗೆ ನಿಧಾನ ಹೊಂದಿದಂತಹ ದಿವಂಗತ ಕೆ.ಶಿವರಾಮ್ IAS ಅವರು ಮಾಡಿದರು ಅಂದರೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಷ್ಟು ಹಣ ಇದೆ ಆ ಅನುದಾನ ದಲಿತರಿಗೆ ಹೇಗೆ ಹಂಚಿಕೆಯಾಗಬೇಕೆಂದು ಯೋಚಿಸಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಸಮುದಾಯಕ್ಕೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿಕೊಳ್ಳಲು ನೆರವಾಗಿದ್ದರು … ಆದರೆ ಇಂದಿನ ಎಷ್ಟೋ ದಲಿತ ಸರ್ಕಾರಿ ನೌಕರರು ತನಗಿಂತ ಬೇರೆ ಯಾರೂ ಬೆಳೆಯಬಾರದು ಎಂಬಾ ಉದ್ದೇಶದಿಂದಾಗಿ ಯಾರಿಗೂ ಯಾವುದೇ ಸಹಾಯ ಮಾಡದೆ ತನ್ನ ಕಚೇರಿ,ಮನೆ ,ದೇವಸ್ಥಾನ ಹೆಂಡತಿ ಮಕ್ಕಳು,ಧರ್ಮಸ್ಥಳ ಶೃಂಗೇರಿ, ಕಟೀಲು, ಸುಬ್ರಹ್ಮಣ್ಯ ಇಷ್ಟಕ್ಕೆ ಸೀಮಿತವಾಗಿ ದಲಿತ ಕೇರಿಗಳಿಗೆ ಬಾರದೆ ಪಟ್ಟಣದಲ್ಲಿ ಮನೆಯನ್ನು ಮಾಡಿಕೊಂಡು ನವ ಬ್ರಾಹ್ಮಣರಾಗಿ ಹೈಟೆಕ್ ಜೀವನ ಮಾಡುತ್ತಾ ಬದುಕುತ್ತಿದ್ದಾರೆ….. ಇನ್ನೂ ನಿವೃತ್ತಿ ಹೊಂದಿದ ದಲಿತ ಸರ್ಕಾರ ನೌಕರರು ಅದೇಕೋ ಗೊತ್ತಿಲ್ಲ ಬುದ್ಧನನ್ನು ಪೂಜೆ ಮಾಡಲು ಪ್ರಾರಂಭಿಸಿದ್ದಾರೆ ಅಲ್ಲಿ ಬುದ್ಧನ ನಿಜವಾದ ಆಶಯವನ್ನು ಗಾಳಿಗೆ ತೂರಿ ಬುದ್ದನಲ್ಲಿಯೇ ಅಯ್ಯಪ್ಪ,ಗಣಪತಿ, ಸುಬ್ರಮಣ್ಯ ,ಮಂಜುನಾಥ ದೇವರನ್ನು ಕಾಣುತ್ತಾ ಬುದ್ಧನನ್ನು ಆರಾಧಿಸುತ್ತಿದ್ದಾರೆ ಎಂತಾ ವಿಚಿತ್ರ ಅಲ್ಲವೇ,? ಈ ಸ್ಥಿತಿಗೆ ಏನೆನ್ನಬೇಕೆಂದು ಗೊತ್ತಾಗುತ್ತಿಲ್ಲ ನಿಮಗೆ ಗೊತ್ತಾದರೆ ದಯವಿಟ್ಟು ಕಾಮೆಂಟ್ ಮಾಡಿ,???? ನಿಮ್ಮ ನಿರೀಕ್ಷೆಯಲ್ಲಿ ……………….
ಬರಹ…ಹರೀಶ್ ನಲ್ಕೆ ✍️
ಸಂಶೋಧನಾ ಬರಹಗಾರರು

