ಇದು ಕವಿ ಸಮಯ:….
1 min read
*ಇದು ಕವಿ ಸಮಯ:* ಒಬ್ಬ ಒಳ್ಳೆಯ ಕವಿ ಕೆಟ್ಟ ಮನುಷ್ಯನಾಗಿ ವರ್ತಿಸಿದ ಉದಾಹರಣೆಗಳು ನಮ್ಮೊಳಗೆ ಸಾಕಷ್ಟಿವೆ. ಅದೇ ಕೆಟ್ಟ ಮನುಷ್ಯನ ಒಳ್ಳೆಯ ಕವಿತೆಯಿಂದ ಪ್ರಭಾವಿತರಾದ ಜನರು ಹಲವರಿದ್ದಾರೆ.
ಒಬ್ಬ ಸಾಮಾನ್ಯ ಮನುಷ್ಯನ ಹೃದಯ ಬಡಿಯುವುದಕ್ಕೂ ಕವಿಯೊಬ್ಬರ ಹೃದಯ ಮಿಡಿಯುವುದಕ್ಕೂ ವ್ಯತ್ಯಾಸವಿದೆ. ಇಂತಹ ಸಂಗತಿಗಳೆಲ್ಲ ಪ್ರೇಯಸಿಯೊಬ್ಬಳ, ಪ್ರಿಯಕರನೊಬ್ಬನ ಭಾರವಾದ ಧ್ವನಿಯಂತೆ ನಿರಂತರವಾಗಿ ಕಾಡುತ್ತವೆ, ಕಾಡಿ ಕೆಣಕುತ್ತಾ ~ ತಿಣುಕುತ್ತಾ ಸಾಗುತ್ತವೆ, ಸಾಗುತ್ತಲೇ ಇರುತ್ತವೆ.
ಹಾಗಾಗಿ ಯಾವುದೇ ಮನುಷ್ಯ ಸಂಪೂರ್ಣವಾಗಿ ಒಳ್ಳೆಯವನು ಅಲ್ಲ, ಸಂಪೂರ್ಣವಾಗಿ ಕೆಟ್ಟವನು ಅಲ್ಲ. ಸ್ವಾರ್ಥವನ್ನು ಬಿಟ್ಟು ಬದುಕಿದ ಉದಾಹರಣೆ ಕಾಣಸಿಗದು.
ಇದುವೇ ಜೀವನ.
•••••••••••••••••
ಡಿ.ಎಂ.ಮಂಜುನಾಥಸ್ವಾಮಿ…