ಪಾಕಿಸ್ತಾನದ ಮೇಲೆ ಭಾರತದ ಮಿಲಿಟರಿ ದಾಳಿ……,
1 min read
ಪಾಕಿಸ್ತಾನದ ಮೇಲೆ ಭಾರತದ ಮಿಲಿಟರಿ ದಾಳಿ,
ವಿಶ್ವ ಮಿಲಿಟರಿ ಮಾರುಕಟ್ಟೆಯ ದಿಕ್ಸೂಚಿಯನ್ನೇ ಬದಲಿಸಿದೆ.ವಿಶ್ವ ಮಿಲಿಟರಿ ಮಾರುಕಟ್ಟೆ ಭಾರತ ಕೇಂದ್ರೀಕೃತವಾಗಲಿದೆ
ಪೆಹಲ್ಗಾವ್ ದಲ್ಲಿ ಹಿಂದೂಗಳನ್ನ ಗುರಿಯಾಗಿಸಿ ಇದೆ ಪಾಕಿಸ್ತಾನ ಪ್ರೇರಿತ, ಪ್ರಯೋಜಿತ ಭಯೋತ್ಪಾದಕರು ಗುಂಡು ಹೊಡೆದು ಹತ್ಯೆ ಮಾಡಿದ ಘಟನೆಗೆ ಪ್ರತಿಕಾರವಾಗಿ ಪಾಕಿಸ್ತಾನ ದ ವಿರುದ್ಧ ಭಾರತ ನಡೆಸಿದ ದಾಳಿಗೆ ಪಾಕಿಸ್ತಾನ ಸಂಪೂರ್ಣ ಸ್ತಬ್ಧ ವಾಗಿ ಹೋಯಿತು.
ಪ್ರಪಂಚದಲ್ಲಿ ಯಾವುದೇ ಪ್ರಮುಖ ಘಟನೆ ನಡೆದರು ಅದರ ಮೇಲೆ ಬೆಟ್ಟಿಂಗ್ ಸಾವಿರಾರು ಕೋಟಿ ಲೆಕ್ಕದಲ್ಲಿ ನಡೆಯುತ್ತದೆ, ಹಾಗೆ ಮೊನ್ನೆ ಭಾರತ ಪಾಕಿಸ್ತಾನದ ಮೇಲೆ ನಡೆದ ದಾಳಿಯ ವಿಚಾರವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾರಿ ಬೆಟ್ಟಿಂಗ್ ಭರಾಟೆ ಜೋರಾಗಿತ್ತು ಅನ್ನುವ ಮಾಹಿತಿ ಇದೆ,ಈ ಬೆಟ್ಟಿಂಗೆ ಸಂಬಂಧಪಟ್ಟಂತೆ ಭಾರತ ನಡೆಸಿದ ದಾಳಿಗೆ ಪಾಕಿಸ್ತಾನ ಚೈನಾ ನಿರ್ಮಿತ ಹಾಗೂ ಟರ್ಕಿ ನಿರ್ಮಿತ ಅಸ್ತ್ರಗಳೊಂದಿಗೆ ತೀವ್ರ ಪ್ರತಿರೋಧ ಕೊಡುತ್ತದೆ ಹಾಗೂ ಇದು ಎರಡು ದೇಶಗಳ ಮಧ್ಯೆ ಯುದ್ಧವಾಗಿ ಮಾರ್ಪಟ್ಟು ಹಲವು ದಿನಗಳ ಕಾಲ ನಡೆಯುತ್ತದೆ ಅನ್ನುವ ವಿಶ್ವಾಸ ಬೆಟ್ಟಿಂಗ್ ದಾರರಿಗೆ ಇತ್ತು.
ಆದರೆ ಭಾರತ ಸರ್ಕಾರದ ದೃಢವಾದ ನಾಯಕತ್ವ, ಸೈನ್ಯದ ಪರಾಕ್ರಮ ಹಾಗೂ ಸೈನ್ಯ ಬಳಸಿದ ಆಧುನಿಕ ತಂತ್ರಜ್ಞಾನದ ಯುದ್ಧ ಸಾಮಗ್ರಿಗಳು ಪಾಕಿಸ್ತಾನವನ್ನು ಕೇವಲ ಮೂರೇ ದಿನಗಳ ದಾಳಿಯಲ್ಲಿ ನಿತ್ರಾಣ ಮಾಡಿತು ಇದು ವಿದೇಶಿಗರಿಗೆ ಆಶ್ಚರ್ಯ ಚಿಕಿತವನ್ನುಂಟು ಮಾಡಿತು.
ಭಾರತೀಯ ವಾಯುದಳ,ನೌಕಾಪಡೆ ಮತ್ತು ಭೂ ಸೇನೆ ತಾಂತ್ರಿಕ ಶಕ್ತಿಯನ್ನು ಇಡೀ ಜಗತ್ತಿಗೆ ಪರಿಚಯಿಸಿತು
ಮಿಲಿಟರಿ ಶಕ್ತಿ ಅಂದರೆ ಅದು ಅಮೆರಿಕ ಮತ್ತು ರಷ್ಯನ್ನರ ಸ್ವತ್ತು ಅನ್ನುವ ಕಾಲ ಇತ್ತೀಚಿನವರೆಗೂ ಇತ್ತು . ಇತ್ತೀಚಿಗೆ ಚೀನಾ ತಾನು ತುಂಬಾ ಶಕ್ತಿಶಾಲಿ ರಾಷ್ಟ್ರ ಅನ್ನುವುದನ್ನ ತಾನೇ ಹೇಳಿಕೊಂಡು ಬರುತ್ತಿತ್ತು,ಅದು ವಿಶ್ವ ಮಟ್ಟದಲ್ಲಿ ಮಿಲಿಟರಿ ಶಕ್ತಿಯಾಗಿ ರೂಪಗೊಂಡಿದೆ ಅನ್ನುವ ಭಾವನೆ ವಿಶ್ವ ಮಿಲಿಟರಿ ಮಾರುಕಟ್ಟೆಯಲ್ಲಿ ಪ್ರಚಲಿತವಾಗಿತ್ತು, ಇದೆಲ್ಲವನ್ನು ಮೀರಿದ ಹೊಸ ಲೆಕ್ಕಾಚಾರವನ್ನು ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡುವುದರ ಮುಖಾಂತರ ಹುಟ್ಟು ಹಾಕಿತು
ಈ ಹಿಂದೆ ಭಾರತ ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ಮಾಡಿದಾಗ ಅಮೆರಿಕ ಪಾಕಿಸ್ತಾನಕ್ಕೆ ಕೊಟ್ಟ ಅತ್ಯಾಧುನಿಕ ವಿಮಾನ ಅನ್ನುವ F 16 ಫೈಟರ್ ಜೆಟ್ಟನ್ನು ಭಾರತದ ಮಿಗ್ 29 (ಔಟ್ ಡೇಟೆಡ್ ಇದ್ದ )ವಿಮಾನ ಹೊಡೆದುರುಳಿಸಿದಾಗ ಅದು ಮಿಗ್ 29 ವಿಮಾನದ ಕಾರ್ಯ ಕ್ಷಮತೆ ಗಿಂತ ಪೈಲೆಟ್ ನ ಕಾರ್ಯ ಕ್ಷಮೆತೆಗೆ ಹಿಡಿದ ಕನ್ನಡಿ ಅಂತ ಹೇಳಲಾಗಿತ್ತು, ಅದು ಅಕ್ಷರ ಸಹ ನಿಜವಾಗಿತ್ತು. ಆವಾಗಲೇ ಭಾರತೀಯ ಸೈನಿಕರ ಮನಸ್ಥೈರ್ಯ ಎಂತದ್ದು ಅನ್ನುವುದು ವಿಶ್ವಕ್ಕೆ ಪರಿಚಯವಾಗಿತ್ತು, ಇದರಿಂದ ಅಮೆರಿಕಕ್ಕೂ ಸ್ವಲ್ಪ ಮುಖಭಂಗವಾಗಿತ್ತು .
ಆದರೆ ಮೊನ್ನೆ ನಡೆದ ದಾಳಿಯಲ್ಲಿ ಫ್ರಾನ್ಸ್ ದೇಶದ ರಫೆಲ್ ವಿಮಾನದ ತಾಕತ್ತು ಮತ್ತು ಅದರಲ್ಲಿ ಅಳವಡಿಸಿದ್ದ ರಾಕೆಟ್ ಬಾಂಬ್ ಗಳ ನಿಜವಾದ ಶಕ್ತಿ ಪ್ರದರ್ಶನ ವಿಶ್ವಕ್ಕೆ ಆಯಿತು, ಇದರಿಂದ ಫ್ರಾನ್ಸ್ ನ ರಾಫೆಲ್ ವಿಮಾನಗಳ ಸಾಮರ್ಥ್ಯವನ್ನು ವಿಶ್ವಕ್ಕೆ ಜಾಹೀರಾತು ನೀಡಿದಂತಾಯಿತು ಇದರಿಂದ ರಫೆಲ್ ವಿಮಾನಗಳ ಬೇಡಿಕೆ ಮುಂದಿನ ದಿನಗಳಲ್ಲಿ ಅಧಿಕವಾಗುವುದು ಗ್ಯಾರಂಟಿ.
ಹಾಗೆ ರಷ್ಯಾ ನಿರ್ಮಿತ ಎಸ್ 400 ಎಂಬ ಕ್ಷಿಪಣಿ ಹಾಗೂ ವಿಮಾನ ಮತ್ತು ಡ್ರೋನ್ ನಿರೋಧಕ ಕ್ಷಿಪಣಿ ವ್ಯವಸ್ಥೆಯ ರಕ್ಷಣಾ ಸಾಮರ್ಥ್ಯವನ್ನು ಅದರ ನಿಖರತೆಯನ್ನ ಸಹ ವಿಶ್ವ ನೋಡಿತು
ಹಾಗೆ ಭಾರತದ ಕ್ಷಿಪಣಿ, ಡ್ರೋನ್ ವಿಮಾನ ಪ್ರತಿಬಂದಕ ವ್ಯವಸ್ಥೆ ADS ( advance air defence system ) ಆಕಾಶ್ ಎರಡು ಸ್ತರದ ಕ್ಷಿಪಣಿ, ಇಸ್ರೇಲ್ ಮತ್ತು ಭಾರತದ ಜಂಟಿಯಾಗಿ ನಿರ್ಮಿಸಿದ ಬರಾಕ್ ADS ಗಳ ನಿಖರತೆ ಮತ್ತು ಕಾರ್ಯ ಶೈಲಿ ಜಗತ್ತನ್ನ ಹುಬ್ಬೇರಿಸುವಂತೆ ಮಾಡಿದ್ದು ನಿಜ
ಇನ್ನು ಬ್ರಮ್ಮೋಸ್ ಕ್ಷಿಪಣಿ ಯಾವುದೇ ರೆಡಾರ್ ಗು ಸಿಗದ, ಪ್ರಪಂಚದ ಯಾವುದೇ ಕ್ಷಿಪಣಿ interceptor ಗು ಸಿಗದೆ ತನ್ನ target ಅನ್ನು ದ್ವಂಸ ಮಾಡುವ ವಿದ್ವಂಸಕ ಗುಣ ಅಮೇರಿಕ ಹಾಗೂ ಚೀನಾ ದೇಶದ ನಿದ್ದೆ ಗೆಡಿಸಿವೆ
ಪಾಕಿಸ್ತಾನದಲ್ಲಿದ್ದ ಅಮೇರಿಕ ದ
F 16 ಯುದ್ಧ ವಿಮಾನ,ಚೀನಾ ನಿರ್ಮಿತ ADS, ರೆಡಾರ್, ಯುದ್ಧ ವಿಮಾನವನ್ನ ಅಲುಗಾಡಲು ಬಿಡದೆ ಅವರ ದೇಶದ ವಾಯು ನೆಲದಲ್ಲೆ ಹೊಡೆದು ಉರುಳಿಸಿದ್ದು ವಿಶ್ವ ಮಟ್ಟದಲ್ಲಿ ಚೀನಾ ಮಿಲಿಟರಿ ಉಪಕರಣಗಳ ಮೇಲೆ ಇದ್ದ ನಂಬಿಕೆ ಯನ್ನ ನಾಶ ಮಾಡಿದೆ,ಇದು ಅದರ ಉತ್ಪನ್ನ ಗಳ ಮಾರಾಟಕ್ಕೆಜಾಗತೀಕ ವಾಗಿ ದೊಡ್ಡ ಹೊಡೆತ ಕೊಟ್ಟಿದೆ,
ಇನ್ನು ಭಾರತ ನಿರ್ಮಿತ ರೆಡಾರ್, ವಾಯು ರಕ್ಷಣಾ ವ್ಯವಸ್ಥೆ, ಆಕಾಶ್ ಕ್ಷಿಪಣಿ, ಬ್ರಮ್ಮೋಸ್ ಕ್ಷಿಪಣಿ, ಇನ್ನು ಉಪಯೋಗ ಮಾಡದ LASER, electric warfare ಉಪಕರಣ ಗಳಿಗೆ ಜಾಗತಿಕ ವಾಗಿ ಮನ್ನಣೆ ದೊರೆಯಲಿದೆ, ಈ ದಾಳಿಯಲ್ಲಿ ಭಾರತೀಯ ಉಪಕರಣಗಳ ಗುಣಮಟ್ಟ ಮತ್ತು ಅದರ ದರ, ಉಳಿದ ದೇಶದ ಗ್ರಾಹಕರನ್ನ ಸೆಳೆಯುತ್ತದೆ
ಭಾರತೀಯ ಮಿಲಿಟರಿ ಉಪಕರಣಗಳ ಮಾರುಕಟ್ಟೆ ದರ ಬೇರೆ ದೇಶಗಳಿಗೆ ಹೋಲಿಸದರೆ 8 ರಿಂದ 9 ಪಟ್ಟು ಅಗ್ಗವಾಗಿದೆ,ಮತ್ತು ನಂಬಿಕೆ ಅರ್ಹವಾಗಿದೆ.ಇದು ಅಮೇರಿಕಾ ಮತ್ತು ಚೀನಾ ಕೆಲವು ಇರೋಪಿಯನ್ ದೇಶಗಳ ಗಳಿಕೆಗೆ surgical strike ಆಗಿದೆ, ಆದರಿಂದ ಈ ದೇಶಗಳು ಮಾದ್ಯಮದ ಮುಖಾಂತರ ಭಾರತ ದೇಶಿ ಉಪಕರಣ, ರಫೆಲ್ ಯುದ್ಧ ವಿಮಾನ ಮತ್ತು ರಷ್ಯಾ ದೇಶದ ADS ಉಪಕರಣಗಳ ಬಗ್ಗೆ ತಪ್ಪು ಮಾಹಿತಿ ಹರಡುತ್ತಿವೆ
ಪಾಕಿಸ್ತಾನಕ್ಕೆ ಬೆಂಬಲಕ್ಕೆ ಹೋಗಿ ಚೀನಾ, ಗೂಟ ಕೊಟ್ಟು ಗೂಟ ಹೊಡೆಸಿಕೊಂಡಿದೆ.
ಇಂದು ಭಾರತದ ರಕ್ಷಣ ಉತ್ಪನ್ನ ಗಳ ಮೇಲೆ ವಿಶ್ವದ ಮಿಲಿಟರಿ ಮಾರುಕಟ್ಟೆ ಯಲ್ಲಿ ಅದಮ್ಯ ವಿಶ್ವಾಸ ಬಂದಿದ್ದು ಮುಂದಿನ ದಿನಗಳಲ್ಲಿ ಭಾರತದ ರಕ್ಷಣ ಕ್ಷೇತ್ರದ ಯುದ್ಧ ಉಪಕರಣ ಗಳ ಉತ್ಪನ್ನ ಮೇಲೆ ಹಲವು ದೇಶಗಳು ಅವಲಂಬಿತಾ ವಾಗಿ ಭಾರತ ಕೇಂದ್ರೀತ ಮಾರುಕಟ್ಟೆ ನಿರ್ಮಾಣ ವಾಗಲಿದೆ
ಇಂದು ಪಾಕಿಸ್ತಾನದ ಮೇಲೆ ದಾಳಿಗೆ ವ್ಯಯವಾದ ಹಣ, ಮುಂದಿನ ದಿನಗಳಲ್ಲಿ ಮಿಲಿಟರಿ ಸಾಮಾಗ್ರಿಗಳ ರಫ್ತಿ ನಲ್ಲಿ ಹಲವು ಪಟ್ಟು ಅಧಿಕ ಬರಲಿದೆ
ರಷ್ಯಾ ದ ADS system S 400 ಗು ಅಧಿಕ ಸಾಮರ್ಥ್ಯದ ಸಂಪೂರ್ಣ ಭಾರತೀಯ ನಿರ್ಮಿತ ADS ನ್ನು ಭಾರತ 2026 ರ ಒಳಗೆ ಪರೀಕ್ಷಿಸಲಿದೆ
ಇನ್ನು ರಶಿಯಾ ದೊಂದಿಗೆ ಜಂಟಿಯಾಗಿ 600 km ರೇಂಜ್ ನ ADS S 500 ನ್ನು ತಯಾರಿಸಲಿದೆ, ಇನ್ನು ಜಪಾನ್ ನೊಂದಿಗೆ 6 ಜನರೇಶನ್ ಫೈಟರ್ ಜೆಟ್ ನಿರ್ಮಾಣ ದ ಬಗ್ಗೆ ಮಾತುಗಳು ಕೇಳಿಬರುತ್ತಿವೆ
ಭಾರತೀಯ ರಕ್ಷಣಾ ಕ್ಷೇತ್ರದಲ್ಲಿ ದೇಶಿ ಖಾಸಗಿ ಕಂಪನಿ ಗಳಿಗೆ ಅನುಮತಿ ನೀಡಿರುವುದು ಸಹ ದೇಶದ ರಕ್ಷಣಾ ಸಾಮರ್ಥ್ಯ ಹೆಚ್ಚಲು ಕಾರಣವಾಗಿದೆ, ಮೊನ್ನೆ ದಾಳಿಯಲ್ಲಿ ಭಾರತ ಬಳಸಿದ ಡ್ರೋನ್ ಗಳು ಖಾಸಗಿ ಕಂಪನಿ ಗಳ ನಿರ್ಮಾಣ
ಈ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ದಾಳಿಯಲ್ಲಿ ಕೆಲವು ಶಸ್ತ್ರಾಸ್ತ್ರ ಕೆಲವೊಂದಿಷ್ಟು ತಂತ್ರಜ್ಞಾನ ಮಾತ್ರ ಪ್ರದರ್ಶನ ಗೊಂಡಿರುವುದು, ಇನ್ನು ಜಗತ್ತಿಗೆ ಗೊತ್ತಿಲ್ಲದಿರುವ ಶಸ್ತ್ರಾಸ್ತ್ರಗಳು ಅದೆಷ್ಟು ಇರಬಹುದು
ಬರಹ…✍️ ಅವರೇಕಾಡು ಪೃಥ್ವಿ