*ಪ್ರೀತಮ್ ಎಸ್ ಪಿ ಲೂರ್ಡ್ಸ್ ಶಾಲೆಯ ಟಾಪರ್*….
1 min read
*ಪ್ರೀತಮ್ ಎಸ್ ಪಿ ಲೂರ್ಡ್ಸ್ ಶಾಲೆಯ ಟಾಪರ್*
ಮೂಡಿಗೆರೆ : 20024- 25 ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶುಭನಗರದ ಪ್ರೀತಮ್ ಅವರು 617 ಅಂಕ ತೆಗೆದುಕೊಂಡಿದ್ದು ಪ್ರೀತಮ್ ಅವರಿಗೆ ಶುಭ ನಗರದ ಯುವಕರ ಬಳಗದಿಂದ ಅಭಿನಂದಿಸಲಾಯಿತು.
ಜನ್ನಾಪುರ ಶುಭನಗರದ ಮಮತಾ ಮತ್ತು ಪ್ರಸನ್ನ ದಂಪತಿಗಳ ಪುತ್ರ ಪ್ರೀತಮ್ ಎಸ್ ಪಿ ಅವರು ಬೆಂಗಳೂರಿನ ನಂದಿನಿ ಲೇಔಟ್ ಲೂರ್ಡ್ಸ್ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು ಪ್ರಸಕ್ತ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 617 ಅಂಕ ಪಡೆಯುವ ಮೂಲಕ ಲೂರ್ಡ್ಸ್ ಶಾಲೆಯ ಟಾಪರ್ ಆಗಿದ್ದು ಪ್ರೀತಮ್ ಅಂತಹ ಪುತ್ರನನ್ನು ಪಡೆದ ತಂದೆ ತಾಯಿಗಳು ನಿಜಕ್ಕೂ ಧನ್ಯರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಲೂರ್ಡ್ಸ್ ಪ್ರೌಢ ಶಾಲೆಗೆ ಮತ್ತು ಶುಭ ನಗರ ಗ್ರಾಮಕ್ಕೆ ಹೆಸರು ತಂದ ಪ್ರೀತಮ್ ಅವರಿಗೆ ಜನ್ನಾಪುರ ಶುಭ ನಗರದ ಯುವಕರ ಬಳಗದಿಂದ ಅಭಿನಂದಿಸಲಾಯಿತು ಅಭಿನಂದನಾ ಸಂದರ್ಭದಲ್ಲಿ ಗ್ರಾಮದ ಅವಿನಾಶ್, ಸುನಿಲ್ ಮಣ್ಣಿಕೆರೆ, ಸಂತೋಷ್, ಅಭಿ ಹಾಗೂ ಗ್ರಾಮದ ಯುವಕರ ಬಳಗದವರು ಪಾಲ್ಗೊಂಡಿದ್ದರು.
ವರದಿ
ಸಿ. ಎಲ್ ಪೂರ್ಣೇಶ್
ಚಕ್ಕುಡಿಗೆ.