ಕರ್ನಾಟಕ ರಾಜ್ಯ ಆದಿದ್ರಾವಿದ ಸಮಾಜ ಸೇವಾ ಸಂಘ (ರಿ.) ಇವರ ಮನವಿ..
1 min read
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;
ಕರ್ನಾಟಕ ರಾಜ್ಯ ಆದಿದ್ರಾವಿದ ಸಮಾಜ ಸೇವಾ ಸಂಘ (ರಿ.) ಇವರ ಮನವಿ..



ಕರ್ನಾಟಕ ರಾಜ್ಯ ಆದಿದ್ರಾವಿದ ಸಮಾಜ ಸೇವಾ ಸಂಘ (ರಿ.)
KARNATAKA STATE ADIDRAVIDA SAMAJA SEVA SANGHA (R)
ಬಾರತದಲ್ಲಿನ ಶೋಷಿತ ಸಮುದಾಯಗಳನ್ನು …ಸಮಾಜದ ಮುಖ್ಯ ವಾಹಿನಿಗೆ ತರುವ ಸಲುವಾಗಿ ನಮ್ಮ ಸಂವಿದಾನದ ಪರಿಛ್ಚೇದ 341.ರ ಪ್ರಕಾರ ರಾಜ್ಯದಲ್ಲಿ 101.ಪರಿಶಿಷ್ಟ ಜಾತಿಗಳನ್ನು ಗುರುತಿಸಿ ಈ ಸಮುದಾಯಗಳಿಗೆ ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಈ ಮೀಸಲಾತಿಯ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಶಿಕ್ಷಣ, ಉದ್ಯೋಗ, ರಾಜಕೀಯ ಶಕ್ತಿ ಪಡೆದು ಪ್ರಗತಿ ಹೊಂದಬೇಕು ಎಂಬುದು ಇದರ ಪ್ರಮುಖ ಉದ್ದೇಶವಾಗಿದೆ.
ಆದರೆ, ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಸಾಮಾಜಿಕವಾಗಿ, ಆರ್ಥಿಕವಾಗಿ ತೀರಾ ಹಿಂದುಳಿದಿರುವ ಸಮುದಾಯಗಳ ಸಬಲೀಕರಣ ಇನ್ನೂ ಸರಿಯಾಗಿ ನಡೆದಿಲ್ಲ. ಹೀಗಾಗಿ ಮೀಸಲಾತಿಯ ಪ್ರಯೋಜನವನ್ನು ಎಲ್ಲಾ ಜಾತಿಗಳಿಗೂ ಸಮಾನವಾಗಿ ಹಂಚಲು ಕಳೆದ 2-3 ದಶಕಗಳಿಂದ ಒಳ ಮೀಸಲಾತಿಯ ಕೂಗು ಕೇಳಿಬಂದಿದೆ. ಈ ಸಂಬಂಧ ಒಳಮೀಸಲಾತಿ ಹೋರಾಟಗಾರರ ಒತ್ತಡಕ್ಕೆ ಮಣಿದು ಸರ್ಕಾರಗಳು ಕೆಲವು ಆಯೋಗಗಳನ್ನು ರಚಿಸಿ ಪರಿಶಿಷ್ಟ ಜಾತಿಗಳಲ್ಲಿನ ವರ್ಗೀಕರಣಕ್ಕೆ ಮುಂದಾದವು.
ಈ ನಿಟ್ಟಿನಲಿ… ರಚನೆಯಾದ ನಿವೃತ್ತ ನ್ಯಾ. ವಿ. ಜೆ. ಸದಾಶಿವ ಆಯೋಗ, ಜೆ. ಸಿ. ಮಾಧುಸ್ವಾಮಿ ಸಮಿತಿ ವರದಿಯು ಜಾರಿಗೊಳ್ಳಲಿಲ್ಲ… ಆದರೆ ಸುಪ್ರೀಂ ಕೋರ್ಟ್ ಆದೇಶವೊಂದರ ಬೆನ್ನಲ್ಲಿ. ಬಳ ಮೀಸಲಾತಿಗೆ ಅಗ್ರಹ ಹೆಚ್ಚಾದುದರಿಂದ ಸರ್ಕಾರ ನಿವೃತ್ತ ನ್ಯಾ. ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗವನ್ನು ರಚಿಸಿ ಈ ಬಗ್ಗೆ, ಪರಿಶೀಲನಗೆ ಮುಂದಾಯಿತು. ಈ ಆಯೋಗವು ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡಲು ಪರಿಶಿಷ್ಟ ಜಾತಿಗಳ ವರ್ಗಿಕರಣಕ್ಕೆ ಡಾಟಾ ಸಂಗ್ರಹ ಮಾಡುವ ಅವಶ್ಯಕತೆಯಿದೆ, ಇದಕ್ಕಾಗಿ ಪರಿಶಿಷ್ಟ ಜಾತಿಗಳ ಜನಗಣತಿ ನಡೆಸಲು ಶಿಫಾರಸ್ಸು ಮಾಡಿತ್ತು. ಈ ಹಿನ್ನೆಲೆಯಲಿ.. ಈಗ ಸರ್ಕಾರ ಈ ಆಯೋಗದ ಮೂಲಕ ಪರಿಶಿಷ್ಟ ಜಾತಿಗಳ ಜನಗಣತಿಗೆ ಮುಂದಾಗಿದೆ. ಆದುದರಿಂದ ನಿನ್ನೆಯಿಂದ ಜಿಲ್ಲೆಯಲ್ಲೂ ಪರಿಶಿಷ್ಟ ಜಾತಿಗಳ ಜಾತಿಗಣತಿ ಆರಂಭವಾಗಿದೆ. ಈ ಸಮೀಕ್ಷೆಯಲಿ.. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಆದಿದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಜಾತಿ ಪ್ರಮಾಣಪತ್ರ ಪಡೆಯುತ್ತಿರುವ ಜಾತಿಗಳ ಮೂಲ ಜಾತಿಯನ್ನು ಸೂಚಿಸುವಂತೆ ಕೇಳಿಕೊಳ್ಳ ಲಾಗುತ್ತಿದೆ. ಈ ವೇಳೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಸೇರಿದಂತೆ ರಾಜ್ಯದ ವಿವಿಧ ಜಿಲೆ.ಗಳಲಿ., ಹರಡಿರುವ ತುಳುನಾಡು ಮೂಲದ ಶ್ರೀ ಸತ್ಯಸಾರಮಾನಿ ಕಾನದ-ಕಟದ ದೈವಗಳನ್ನು ಕುಲದೈವಗಳೆಂದು ಆರಾಧಿಸುವ ತುಳು ಭಾಷಿಕ ಆದಿದ್ರಾವಿಡ ಸಮುದಾಯ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.
ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.) ಇದರ ತೀರ್ಮಾನದಂತೆ ಮತ್ತು ನಿವೃತ್ತ ನ್ಯಾ. ನಾಗಮೋಹನ ದಾಸ್ ಆಯೋಗ ಹಾಗೂ ಕಾನೂನು ತಜ್ಞರ ಸಲಹೆಯ ಮೇರೆಗೆ, ನಮ್ಮ ತುಳುಭಾಷಿಕ, ಶ್ರೀ ಸತ್ಯಸಾರಮಾನಿ ಕಾನದ-ಕಟದ ಆರಾಧಕ ಆದಿದ್ರಾವಿಡ ಸಮುದಾಯವು ಸಮೀಕ್ಷೆಯ ವೇಳೆ ಆದಿದ್ರಾವಿಡ ಜಾತಿಯ ಮೂಲ ಜಾತಿ ಅಥವಾ ಉಪಜಾತಿಯ ಆಯ್ಕೆ ವಿಷಯದಲಿ. ‘ಗೊತ್ತಿಲ್ಲ..” ಎಂಬುದಾಗಿ ಸಮೀಕ್ಷೆದಾರರಿಗೆ ತಿಳಿಸಬೇಕು ಎಂದು ಸಮುದಾಯದ ಸರ್ವ ಸದಸ್ಯರಲ್ಲಿ ಸಂಘವು
*ಈ ರೀತಿ ನಮೂದಿಸುವುದರಿಂದ, ನಮ್ಮ ಸಮುದಾಯ ಮುಂದಿನ ದಿನಗಳಲಿ. ನಮ್ಮದು ಪ್ರತ್ಯೇಕ ಮೂಲ ಜಾತಿ ಅಥವಾ ಉಪಜಾತಿ ಇಲ್ಲದ ಆದಿ ದ್ರಾವಿಡ ಸಮುವಾಯ ಎಂದು ಪ್ರತ್ಯೇಕವಾಗಿ ಗುರುತಿಸುವುದಕ್ಕೆ ಸಹಕಾರಿಯಾಗುತ್ತದೆ. ಅಲ್ಲದೆ, ಪರಿಶಿಷ್ಟ ಜಾತಿ ಪಟ್ಟಿಯಲಿ.. ನಮ್ಮ ಸಮುದಾಯದ ಉಪಜಾತಿಯನ್ನು ಸೇರ್ಪಡೆಗೊಳಿಸುವುದಕ್ಕೆ ಇದು ಸಹಕಾರಿಯಾಗಲಿವೆ. ಇದಕ್ಕಾಗಿ ನಮ್ಮ ಸಮುದಾಯದ ನಡುವೆ ಒಂದು ಒಮ್ಮತದ ನಿರ್ಧಾರಕ್ಕೆ ಬರುವ ಸಲುವಾಗಿ ಕರ್ನಾಟಕ ರಾಜ್ಯ ಆದಿ ‘ದ್ರಾವಿಡ ಸಂಘ ಶ್ರಮಿಸುತ್ತಿದ್ದು, ಈ ನಿಟ್ಟಿನಲ್ಲಿ ಇನ್ನೂ ನಾಲೈಯ ಸುತ್ತು ಸಮುದಾಯದ ಸಂಘಟನೆಗಳ ಪ್ರಮುಖರ, ವಿದ್ಯಾವಂತರ, ವಿಚಾರವಂತರ, ಹಿರಿಯರ, ಕಿರಿಯರ ಸಂವಾದ ಸಭೆ ನಡೆಸಿ, ಸೂಕ್ತ ವಿಚಾರ ವಿನಿಮಯ ನಡೆಸಿ ಸರಿಯಾದ ನಿರ್ಧಾರಕ್ಕೆ ಬರಲಾಗುವುದು. ಸಮುದಾಯಕ್ಕೆ ಒಂದು ಗೌರವಾನ್ವಿತ ಉಪಜಾತಿ ಹೆಸರು ಸೇರ್ಪಡೆಗೊಳಿಸುವ ಬಗ್ಗೆ, ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ಹೋರಾಟಕ್ಕೆ ಮುಂದಾಗಿದೆ.
ಇದು ಅತ್ಯಂತ ಮಹತ್ವದ ಸಮೀಕ್ಷೆಯಾಗಿರುವುದರಿಂದ, ಯಾವುದೇ ವದಂತಿ, ಅಪಪ್ರಚಾರಗಳಿಗೆ ಕಿವಿಗೊಡದೆ, ಈ ವಿಚಾರವನ್ನು ಸಾಧ್ಯವಾದಷ್ಟು ಸಮುದಾಯದ ಜನರಿಗೆ ಗರಿಷ್ಠ ಪ್ರಮಾಣದಲಿ., ತಿಳಿಸಿ, ಸಮುದಾಯದ ಭವಿಷ್ಯದ ದೃಷ್ಟಿಯಿಂದ ಶ್ರೀ ಸತ್ಯ ಸಾರಮಾನಿ ಕಾನದ – ಕಟದ ಆರಾಧಕ ತುಳು ಭಾಷಿಕ ಆದಿ ದ್ರಾವಿಡ ಸಮುದಾಯದ ಮೂಲ ಜಾತಿ ಅಥವಾ ಉಪಜಾತಿ ಗೊತ್ತಿಲ್ಲ, ಎಂದೇ ನಮೂದಿಸುವಂತೆ ಸಮುದಾಯದ ಸದಸ್ಯರಲ್ಲಿ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ವಿನಂತಿಸುತ್ತದೆ..
ಎಂದು ಕರ್ನಾಟಕ ದ್ರಇದ್ದಾಜ ಸೇವಾ ಸಂಘದ ರಾಜ್ಯ ಅಧ್ಯಕ್ಷರಾದ ಗಣೇಶ್ ಪ್ರಸಾದ್. ಮೂಡಬಿದ್ರೆ.ಹೇಳಿದರು.
ಈ ಸಂದರ್ಭದಲ್ಲಿ
ಸಂತೋಷ್ ಡಿ ಸಾಲಿಯಾನ.
ರಾಜ್ಯ ಪ್ರಚಾರ ಸಮಿತಿ ಉಸ್ತುವಾರಿ.
ಸಹ ಕಾರ್ಯದರ್ಶಿ.ಡಿ.ಬಿ.ಸುರೇಶ್.
ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾದ ಸುರೇಶ್ ಆರ್ಡಿಕೊಪ್ಪ.ಚಿಕ್ಕಮಗಳೂರು ತಾಲೂಕು ಅದ್ಯಕ್ಷರಾದ ಗುರುವಪ್ಪ.ತೊಳೂರುಗುಡ್ಡ..
ರಾಜುಗಬ್ಗಲ್..
ಶಿವಪ್ಪಬಾಳೂರು.ಇದ್ದರು.

