ಫ್ರಿಡ್ಜ್ ಒಳಗೆ ಹೆಡೆಯೆತ್ತಿ ಕುಳಿತ ದೈತ್ಯಗಾತ್ರದ ನಾಗರಹಾವು!*
1 min read
*ಫ್ರಿಡ್ಜ್ ಒಳಗೆ ಹೆಡೆಯೆತ್ತಿ ಕುಳಿತ ದೈತ್ಯಗಾತ್ರದ ನಾಗರಹಾವು!*
ಬೇಸಿಗೆಯ ಝಳ ಜೋರಾಗಿದೆ. ಉರಿ ಬಿಸಿಲಿಗೆ ವಿಷಜಂತುಗಳು ಮನೆಯೊಳಗೆ ಎಂಟ್ರಿ ಕೊಡುತ್ತವೆ. ಶೂ ಒಳಗೆ ಅಥವಾ ಮನೆಯ ಸಂದಿಗಳಲ್ಲಿ ಅವಿತು ಕುಳಿತುಕೊಳ್ಳುತ್ತವೆ. ಇದಕ್ಕೆ ಸಂಬಂಧ ಪಟ್ಟ ಅದೆಷ್ಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿರುವುದನ್ನು ನೋಡಿರಬಹುದು. ಆದರೆ ಇಲ್ಲಿನ ವಿಡಿಯೋದಲ್ಲಿ ಮನೆಯ ಫ್ರಿಡ್ಜ್ ಒಳಗೆ ನಾಗರ ಹಾವೊಂದು ಹೆಡೆಯೆತ್ತಿ ಕುಳಿತು ಕೊಂಡಿದೆ. ಬಾಗಿಲು ತೆರೆಯುತ್ತಿದ್ದಂತೆ ಎಡೆ ಅಗಲಿಸಿದೆ.
ಹಾವುಗಳೆಂದರೆ ಎಲ್ಲರಿಗೂ ಭಯ, ಎಷ್ಟೇ ಧೈರ್ಯವಂತರಾಗಿದ್ದರೂ ಹಾವನ್ನು ಕಂಡೊಡನೆ ಒಂದು ಮೈಲಿ ದೂರ ಓಡಿ ಬಿಡುತ್ತಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ನಗರ ಪ್ರದೇಶ ಹಾಗೂ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಬೇಸಿಗೆ ಬಂದರಂತೂ ವಿಷಕಾರಿ ಹಾವುಗಳು ಮನೆಯೊಳಗೂ ಕಾಣಸಿಗುತ್ತದೆ. ಹಾವುಗಳು ಮನೆಯ ಮೂಲೆಯಲ್ಲಿ ಅವಿತುಕೊಂಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗುವುದಿದೆ.
ಈ ವಿಡಿಯೋದಲ್ಲಿ ಫ್ರಿಡ್ಜ್ ಬಾಗಿಲು ತೆರೆಯುತ್ತಿದ್ದಂತೆ ನಾಗರಹಾವೊಂದು ಹೆಡೆಯೆತ್ತಿ ಕುಳಿತುಕೊಂಡಿರುವುದನ್ನು ಕಾಣಬಹುದು. ದೂರ ನಿಂತುಕೊಂಡೆ ಮಹಿಳೆಯೊಬ್ಬರು ಬಾಗಿಲು ತೆಗೆದಿದ್ದಾರೆ. ಆದರೆ ಈ ನಾಗರಹಾವು ಎಲ್ಲಿಂದ ಬಂದಿತು? ಹೇಗೆ ಫ್ರಿಡ್ಜ್ ಯೊಳಗೆ ಬಂದಿತು? ಎನ್ನುವ ಬಗ್ಗೆ ಮಾಹಿತಿ ತಿಳಿದಿಲ್ಲ.