लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೊಬೈಲ್ ಬಳಸಿ ಸಹ ಪ್ರಯಾಣಿಕರಿಗೆ ಕಿರಿಕಿರಿ ಮಾಡಿದರೆ ಕ್ರಮ…..

1 min read

ಮೊಬೈಲ್ ಬಳಸಿ ಸಹ ಪ್ರಯಾಣಿಕರಿಗೆ ಕಿರಿಕಿರಿ ಮಾಡಿದರೆ ಕ್ರಮ. ಬಸ್‌ನಲ್ಲಿ ರಗಳೆ ಮಾಡಿದರೆ ಇಳಿಸ್ತಾರೆ, ಹುಷಾ‌ರ್!

ಬಸ್‌ನಲ್ಲಿ ಸಹ ಪ್ರಯಾಣಿಕರಿಗೆ ತೊಂದರೆಯಾಗುವಂತೆ ಮೊಬೈಲ್‌ನಲ್ಲಿ ಜೋರಾಗಿ ಹಾಡು ಹಾಕುವುದು, ಗಟ್ಟಿಯಾಗಿ ಮಾತನಾಡುವುದು, ಬೇರೆಯವರಿಗೆ ಕಿರಿಕಿರಿ ಆಗುವಂತೆ ಸಿನಿಮಾ ನೋಡುವುದು ಮೊದಲಾದ ರಗಳೆಗಳನ್ನು ತಪ್ಪಿಸಲು ಸಾರಿಗೆ ಇಲಾಖೆಯು ಮುಂದಾಗಿದೆ. ಇಂಥ ಪ್ರಯಾಣಿಕರ ವಿರುದ್ಧ ಇನ್ನು ಮುಂದೆ ಬಸ್ ಸಿಬ್ಬಂದಿಯು ಕ್ರಮ ಜರುಗಿಸಬಹುದು. ಅಂಥ ಪ್ರಯಾಣಿಕರನ್ನು ಬಸ್ ನಿಂದ ಇಳಿಸಲೂ ಅವಕಾಶ ನೀಡಲಾಗಿದೆ.

ಬಸ್‌ನಲ್ಲಿ ಪ್ರಯಾಣಿಕರಿಗೆ ಮೊಬೈಲ್ ತಲೆನೋವು ತಪ್ಪಿಸಲು ಹಾಗೂ ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕಲು ಹೈಕೋರ್ಟ್ ಸೂಚನೆ ಮೇರೆಗೆ ಸಾರಿಗೆ ಇಲಾಖೆಯು ಮಹತ್ವದ ಆದೇಶ ಹೊರಡಿಸಿದೆ. ಇತ್ತೀಚಿನ ದಿನಗಳಲ್ಲಿ ಜನರು ಮೊಬೈಲ್‌ಗೆ ಅವಲಂಬಿತರಾಗಿದ್ದು, ಬಸ್ಸಿನಲ್ಲಿ ವಿನಂತಿಗೆ ಬಗ್ಗದಿದ್ದರೆ ಬಸ್ಸಿನಿಂದ ಇಳಿಸಿ…

ಕರ್ನಾಟಕ ಮೋಟಾರು ವಾಹನಗಳ ನಿಯಮಗಳು-1989, ನಿಯಮ 94(1) (ವಿ) ಅನ್ನು ಉಲ್ಲಂಘಿಸಿ ನಿಗಮದ ಬಸ್ಸುಗಳಲ್ಲಿ ಮೊಬೈಲ್ ಮೂಲಕ ಜೋರು ಶಬ್ದ ಮಾಡುವುದನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಪ್ರಯಾಣಿಕರಿಗೆ ಕರ್ತವ್ಯ ನಿರತ ಸಿಬ್ಬಂದಿ ಸೂಕ್ತ ತಿಳಿವಳಿಕೆ ನೀಡಬೇಕು. ಹೆಚ್ಚಾಗಿ ಶಬ್ದ ಬರುವಂತೆ, ಪ್ರಯಾಣಿಕರಿಗೆ ತೊಂದರೆಯಾಗುವಂತೆ ಮೊಬೈಲ್ ಬಳಸುತ್ತಿದ್ದರೆ, ಬಳಸದಂತೆ ವಿನಂತಿಸಿಕೊಳ್ಳಬೇಕು. ಮನವಿಗೆ ಸ್ಪಂದಿಸದಿದ್ದರೆ ನಿಯಮಾನುಸಾರ ಚಾಲಕ ಅಥವಾ ನಿರ್ವಾಹಕ ಬಸ್ಸಿನಿಂದ ಆ ಪ್ರಯಾಣಿಕನನ್ನು ಇಳಿಸಬೇಕು. ಆತ ಕೆಳಕ್ಕೆ ಇಳಿಯುವವರೆಗೂ ಬಸ್ಸನ್ನು ಅಲ್ಲೇ ನಿಲ್ಲಿಸುವುದು ಹಾಗೂ ಕೆಳಕ್ಕಿಳಿದ ಪ್ರಯಾಣಿಕಗೆ ಬಸ್ ದರವನ್ನು ಹಿಂತಿರುಗಿಸಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಪ್ರಯಾಣಿಸುವ ಸಹ ಪ್ರಯಾಣಿಕರ ಕಡೆಗೆ ಗಮನ ಕೊಡದೆ ತಮ್ಮಿಷ್ಟದಂತೆ ಜೋರಾಗಿ ಹಾಡು, ಸಿನಿಮಾ, ವಾರ್ತೆ ಮೊದಲಾದ ಆಡಿಯೊ ಅಥವಾ ವಿಡಿಯೊಗಳನ್ನು ಜೋರಾಗಿ ಸಾಮಾನ್ಯವಾಗಿದೆ. ಹಾಕುವುದು ಇತರರಿಗೆ ಸಾರ್ವಜನಿಕ ಸ್ಥಳಗಳಲ್ಲಿ ತೊಂದರೆಯಾಗುವಂತೆ ಮೊಬೈಲ್ ಬಳಸುವುದು ಸಬ್ಯವಲ್ಲ, ಬಸ್‌ ನಲ್ಲಿ ಪ್ರಯಾಣಿಸುವಾಗಲಂತೂ ಅನೇಕರು ಈ ಮೊಬೈಲ್ ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಬಗೆಗಿನ ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಹೊರಾಟಗಾರರು ತಿಳಿಸಿದ್ದಾರೆ…
ಕಿರಿಕಿರಿಯಾಗುತ್ತದೆಂಬ ಸಾಮಾನ್ಯ ಜ್ಞಾನವೂ ಇಲ್ಲದೆ ವರ್ತಿಸುವ ಉದಾಹರಣೆಗಳಿವೆ. ಇದನ್ನು ತಪ್ಪಿಸುವಂತೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಿಸುವಂತೆ ತುಮಕೂರಿನ ವಕೀಲ ರಮೇಶ್ ನಾಯಕ್ ಎಲ್. ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.

ವಿಚಾರಣೆ ನಡೆಸಿದ . ನ್ಯಾಯಾಲಯ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೆ ನಿರ್ದೇಶನ ನೀಡಿತ್ತು. ಇದರ ಅನ್ವಯ ಇಲಾಖೆಯು ಎಲ್ಲಾ ಸಾರಿಗೆ ನಿಗಮಗಳಿಗೆ ಕಟ್ಟುನಿಟ್ಟಿನ ಕ್ರಮ ಅನುಷ್ಠಾನಕ್ಕೆ ಖಡಕ್ ಸೂಚನೆ ನೀಡಿದೆ.

About Author

Leave a Reply

Your email address will not be published. Required fields are marked *