ಬ್ರೇಕ್ ಡೌನ್ ಕೆಲಸ ಸ್ಥಗಿತ. ಜಿಲ್ಲಾದ್ಯಕ್ಷ.ಚಿಕ್ಕಮಗಳೂರು…..
1 min read
ಬ್ರೇಕ್ ಡೌನ್ ಕೆಲಸ ಸ್ಥಗಿತ.
ಜಿಲ್ಲಾದ್ಯಕ್ಷ.ಚಿಕ್ಕಮಗಳೂರು.
ಗೌರವಾನ್ವಿತ ವಿದ್ಯುತ್ ಗುತ್ತಿಗೆದಾರರಲ್ಲಿ ಈ ಮೂಲಕ ತಿಳಿಸುವುದೇನೆಂದರೆ ಇಂದು ಚಿಕ್ಕಮಗಳೂರಿನ ಜಿಲ್ಲಾ ಸಮಿತಿಯ ಕಛೇರಿಯಲ್ಲಿ ಬ್ರೇಕ್ ಡೌನ್ ಕಾಮಗಾರಿಯ ಬಗ್ಗೆ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಬ್ರೇಕ್ ಡೌನ್ ಕೆಲಸ ಮಾಡುವ ಗುತ್ತಿಗೆದಾರರು ತಮ್ಮ ತಮ್ಮಅಭಿಪ್ರಾಯವನ್ನು ವ್ಯಕ್ತ ಪಡಿಸಿ ಮೆಸ್ಕಾಂನಿಂದ ಪ್ರತ್ಯೇಕ ಅಲೋಯನ್ಸ್ ನೀಡಿದಿರುವ ಬಗ್ಗೆ ಚರ್ಚಿಸಿ ಅಲೋಯನ್ಸ್ ನೀಡುವವರೆಗೆ ಜಿಲ್ಲೆಯಾದ್ಯಂತ ಬ್ರೇಕ್ಡೌನ್ ಕಾಮಗಾರಿಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಿರುತ್ತಾರೆ..
ಮೂಡಿಗೆರೆಯ ನಮ್ಮ ಗುತ್ತಿಗೆದಾರರು ಸೋಮವಾರ(28-04-2025) ದಿಂದ ಬ್ರೇಕ್ ಡೌನ್ ಕೆಲಸ ಸ್ಥಗಿತಗೊಳಿಸಬೇಕಾಗಿ ಜಿಲ್ಲಾಧ್ಯಕ್ಷರು ವಿನಂತಿಸಿರುತ್ತಾರೆ. ಅದುದರಿಂದ ಬ್ರೇಕ್ ಡೌನ್ ಕೆಲಸ ಮಾಡುವ ನಮ್ಮ ಗುತ್ತಿಗೆದಾರರು ಬ್ರೇಕ್ ಡೌನ್ ಕೆಲಸವನ್ನು ಸ್ಥಗಿತಗೊಳಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ. ಮೇಲ್ಕಂಡ ದಿನಾಂಕದಿಂದ ಯಾರಾದರೂ ಬ್ರೇಕ್ ಡೌನ್ ಕೆಲಸ ಮಾಡುವುದು ತಿಳಿದಲ್ಲಿ ಅಂತಹ ಕೆಲಸ ಮಾಡುವವರಿಗೆ ಇಪ್ಪತ್ತು(20000) ಸಾವಿರ ದಂಡ ವಿಧಿಸಲು ತೀರ್ಮಾನಿಸಲಾಗಿದೆ.