…..ನಿಧನ….
1 min read……..ನಿಧನ….
ನಿತೇಶ್ ಪತಿ(36) ಇನ್ನಿಲ್ಲ.
ಮೂಡಿಗೆರೆ ತಾಲೂಕು. ಬೆಳಗೋಡು ಗ್ರಾಮದ ಉದ್ಯಮಿ.
ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಪ್ರತಿಷ್ಠಿತ Foils pack ಪ್ರಿಂಟಿಂಗ್ ಮತ್ತು ಪ್ಯಾಕೇಜಿಂಗ್ ಕಂಪನಿ ಮಾಲೀಕ ಬಿ.ಎಂ. ಉಮಾಪತಿ ಹಾಗೂ ಶ್ರೀಮತಿ ಪೂರ್ಣಿಮಾ ಕಣಚೂರು ಅವರ ಪುತ್ರರಾದ ನಿತೇಶ್ ಪತಿ ತಾನೂ ಸ್ವತಃ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.
ಶುಕ್ರವಾರ ಸಂಜೆ ಹೋಟೆಲ್ ನಲ್ಲಿ ಊಟ ಮಾಡುತ್ತಾ ಕುಳಿತ್ತಿದ್ದ ನಿತೇಶ್ ಪತಿ ಹಠಾತ್ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ.
ನಿತೇಶ್ ಪತಿಯವರು ತನ್ನ ತಂದೆಯಂತೆಯೇ ಯುವ ಉದ್ಯಮಿಯಾಗಿ ಉತ್ತಮ ಹೆಸರು ಮಾಡಿದ್ದರು. ತಾನೇ ಸ್ವತಃ ಕಂಪನಿ ಪ್ರಾರಂಭಿಸಿ ಉತ್ತಮ ಸಾಧನೆ ಮಾಡಿದ್ದರು. ಇವರ ಕುಟುಂಬದ ಉದ್ಯಮಗಳಲ್ಲಿ ಸುಮಾರು 100 ಮಂದಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.
ಇವರ ಕುಟುಂಬ ಮೂಡಿಗೆರೆ ಸುತ್ತಮುತ್ತಲ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ಕೊಡುಗೈ ದಾನಿಗಳಾಗಿದ್ದರು.
ನಿತೇಶ್ ಅವರು ಪತ್ನಿ, ಐದು ವರ್ಷದ ಮಗು, ತಂದೆ ತಾಯಿ ಮತ್ತು ಸಹೋದರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ..
ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಸಮನಹಳ್ಳಿ ಚಿತಾಗಾರದಲ್ಲಿ ನಡೆಯಲಿದೆ