लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿಶ್ವ ಕ್ಯಾನ್ಸರ್ ದಿನ..ಫೆಬ್ರವರಿ -4

ಇದರ ಪ್ರಯುಕ್ತ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ದಿನಾಂಕ 21.02.2025 ಶುಕ್ರವಾರದಂದು ಎಂಜಿಎಂ ಆಸ್ಪತ್ರೆ ಮೂಡಿಗೆರೆ ಇಲ್ಲಿ ಹಮ್ಮಿಕೊಂಡಿದ್ದು ಈ ಶಿಬಿರಕ್ಕೆ ಮಂಗಳೂರು ನಗರದ ಪ್ರತಿಷ್ಠಿತ ಆಸ್ಪತ್ರೆ ಕೆಎಂಸಿ ವೈದ್ಯರು ಮತ್ತು ಸಿಬ್ಬಂದಿ ವರ್ಗ ಮೂಡಿಗೆರೆಯ ರೋಟರಿ ಸಂಸ್ಥೆ ಮತ್ತು ಎನ್‌.ಸಿ.ಡಿ ಕ್ಲಿನಿಕ್ ಮೂಡಿಗೆರೆ ಮತ್ತು ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ (ಎನ್.ಓ.ಎಚ್. ಪಿ ) ಇವರ ಸಹಯೋಗದೊಂದಿಗೆ ಇಂದು ನಡೆಸಲಾಯಿತು. ಹಾಗೂ ಸಾರ್ವಜನಿಕರಿಗೆ ಕ್ಯಾನ್ಸರ್ ಕಾಯಿಲೆ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸಿ ಉಚಿತ ತಪಾಸಣೆಯನ್ನು ಕೈಗೊಂಡು ಶಂಕಿತ ರೋಗಿಗಳಿಗೆ ಪ್ಯಾಪ್ ಸ್ಮಿಯರ್ ತೆಗೆಯಲಾಯಿತು ಮತ್ತು ಸಂಕಿತ ರೋಗಿಗಳಿಗೆ ಮೇಲ್ದರ್ಜೆ ಆಸ್ಪತ್ರೆಯಾದ ಕೆ.ಎಂ.ಸಿ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು.

ಈ ಶಿಬಿರದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು, ತಜ್ಞ ವೈದ್ಯರುಗಳು, ಎ.ಆರ್‌.ಎಸ್‌ ಸಮಿತಿ ಸದಸ್ಯರು, ರೋಟರಿ ಸಂಸ್ಥೆ ಅಧ್ಯಕ್ಷರು ಮತ್ತು ಸದಸ್ಯರು ಎನ್ ಸಿ ಡಿ ಕ್ಲಿನಿಕ್ ಸಿಬ್ಬಂದಿಗಳು ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಲಾಯಿತು.

About Author

Leave a Reply

Your email address will not be published. Required fields are marked *