*ಅಪ್ರಾಪ್ತ ಬಾಲಕಿ ಜನ್ಮವಿತ್ತ ನವಜಾತ ಶಿಶು ಹತ್ಯೆ ಪ್ರಕರಣ*
1 min read
*ಅಪ್ರಾಪ್ತ ಬಾಲಕಿ ಜನ್ಮವಿತ್ತ ನವಜಾತ ಶಿಶು ಹತ್ಯೆ ಪ್ರಕರಣ*
*ಮೂವರು ಆರೋಪಿಗಳು ಅಂದರ್*
ಕೊಡಗು ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದ್ದ, ಅಪ್ರಾಪ್ತ ಬಾಲಕಿಯೋರ್ವಳು ಜನ್ಮ ನೀಡಿದ್ದ ಮಗುವನ್ನು ಹತ್ಯೆಗೈಲಾಗಿದೆ ಎಂದು ಹೇಳಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಮೃತ ನವಜಾತ ಶಿಶುವಿನ ತಾಯಿ, ಅಜ್ಜಿ ಹಾಗೂ ಅಜ್ಜ ಬಂಧನಕ್ಕೊಳಗಾದವರಾಗಿದ್ದಾರೆ.
ಅಕ್ಟೋಬರ್ 17ರಂದು ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷ ಪ್ರಾಯದ ಬಾಲಕಿಯೊಬ್ಬಳು ರಹಸ್ಯವಾಗಿ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಪ್ರಸೂತಿಯಾಗಿ 4 ದಿನ ಕಳೆದರೂ ನವಜಾತ ಶಿಶು ಕಂಡುಬಂದಿರಲಿಲ್ಲ. ಆಸ್ಪತ್ರೆಯಿಂದ ಆ ಶಿಶು ನಾಪತ್ತೆಯಾಗಿತ್ತು. ಒಂದು ವಾರ ಕಳೆದ ನಂತರ ನವಜಾತ ಶಿಶುವಿನ ಮೃತದೇಹ ಗುಂಡಿಯಲ್ಲಿ ಪತ್ತೆಯಾಗಿತ್ತು. ಮೊದಲಿಗೆ ಹೆತ್ತಾಕೆಯೇ ಮಗುವನ್ನು ನಾಪತ್ತೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ನಂತರ ಅಜ್ಜಿಯೇ ಕೊಂದು ಹೂತಿಟ್ಟಿದ್ದ ಶಂಕೆ ವ್ಯಕ್ತವಾದಾಗ ಶಿಶು ಜನಿಸಿಯೇ ಇಲ್ಲ ಎಂದು ಅಜ್ಜಿ ವಾದಿಸಿದ್ದರು.
ಆದರೆ ಗುಂಡಿಯಲ್ಲಿ ನವಜಾತ ಶಿಸುವಿನ ಮೃತದೇಹ ದೊರೆತಿದ್ದರಿಂದ ತನಿಖೆ ಮುಂದುವರೆದು ಅದರ ತಾಯಿ, ಅಜ್ಜಿ ಹಾಗೂ ಅಜ್ಜನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ತಾನು ಗರ್ಭಿಣಿ ಆಗಲು 13 ವರ್ಷದ ಬಾಲಕ ಕಾರಣ ಎಂದು ಬಾಲಕಿ ಆರೋಪಿಸಿದ್ದಳು. ಹೀಗಾಗಿ ಬಾಲಕನ ವಿರುದ್ಧ ಕೂಡ ಎಫ್ಐಆರ್ ದಾಖಲಾಗಿತ್ತು. ಆದರೆ ಶಿಶುವಿನ ಡಿಎಸ್ಎ ಪರೀಕ್ಷೆ ನಡೆಸುವಂತೆ ಆತನ ಪೋಷಕರು ಆಗ್ರಹಿಸಿದ್ದರು.
ವರದಿ…..
*ಕ್ಯೂಟ್ ಕೂರ್ಗ್ ನ್ಯೂಸ್*