ನಿವೇಶನ ರಹಿತರು ಸರ್ಕಾರಿ ಜಾಗ ಗುರುತಿಸಿಕೊಡಿ.ಮೂಡಿಗೆರೆ.
1 min read
ಮೂಡಿಗೆರೆ ತಾಲ್ಲೂಕು ಕಸಬಾ ಹೋಬಳಿ ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುನ್ನಹಳ್ಳಿ ಗ್ರಾಮದ ಕೆಲ್ಲೂರಿನ ಸರ್ವೆ ನಂಬರ್ 82 ರಲ್ಲಿ ಖಾಲಿ ಇರುವ ಸರ್ಕಾರಿ ಜಮೀನನ್ನು ಪಂಚಾಯಿತಿ ಈ ಹಿಂದೆ ನಿವೇಶನ ರಹಿತರಿಗೆ ಮಂಜೂರು ಮಾಡಲು ನಿರ್ಣಯ ಅಗೀಕರಿಸಿತು.
10 ವರ್ಷದಿಂದ ನಿವೇಶನಕ್ಕಾಗಿ ಇದೇ ಗ್ರಾಮದ ನಿವೇಶನ ರಹಿತರು ಸತತ ಹೋರಾಟ ಮಾಡುತ್ತಾ ಬರುತ್ತಿದ್ದರು ಅಧಿಕಾರಿಗಳು ಸರ್ಕಾರಿ ಜಾಗ ಲಭ್ಯವಿಲ್ಲ ಎಂದು ಉತ್ತರಿಸುತ್ತಿದ್ದರು.
ನಿವೇಶನ ರಹಿತರು ಸರ್ಕಾರಿ ಜಾಗ ಗುರುತಿಸಿ
ನಿವೇಶನಕ್ಕಾಗಿ ಪಂಚಾಯಿತಿ ಮುಂದೆ ಮನವಿ ಸಲ್ಲಿಸಿದ್ದಾಗ ಪಂಚಾಯಿತಿಯವರು ನಿರ್ಣಯ ಕೈಗೊಂಡರು. ಅಧಿಕಾರಿಗಳು ಕೃಷಿ ಇಲ್ಲದ ಖಾಲಿ ಜಮೀನಿಗೆ ಅಕ್ರಮ ಭೂ ಮಂಜೂರಾತಿ ಮಾಡಿಕೊಟ್ಟಿರುವುದು ಮೂಡಿಗೆರೆಯಲ್ಲಿ ಮತ್ತೆ ಅಕ್ರಮ ಭೂ ಮಂಜೂರಾತಿ ಮೂಲಕ ಬಡವರಿಗೆ ಸಿಗುವ ಭೂಮಿಯನ್ನು ವಿನಃ ಕಾರಣಗಳಿಂದ ಅಧಿಕಾರಿಗಳು ಬಡವರ ವಿರೋಧಿ ನಿಲುವು ಹೊಂದಿರುವುದರಿಂದ ಈ ಪತ್ರಿಕಾಗೋಷ್ಠಿಯಲ್ಲಿ ನಿವೇಶನ ರಹಿತರಿಗೆ ಶೀಘ್ರ ಭೂ ಮಂಜೂರಾತಿಗೆ ಅಗ್ರಹಿಸುತ್ತಿದ್ದೇವೆ.
ಈ ಸಂದರ್ಭದಲ್ಲಿ.
ಹರೀಶ್ ಕೆಲ್ಲೂರು, ಚಂದ್ರೇಶ್, ರಮೇಶ್ ಕೆಳಗೂರು, ಶಿವಪ್ರಸಾದ್, ಹರೀಶ್ ನಲಿಕೆ, ಹೂವಪ್ಪ, ರಮೇಶ್ ಕೆಲ್ಲೂರು,ಜನಾರ್ದನ್, ಪತ್ರಿಕಾಗೋಷ್ಠಿಯಲ್ಲಿ ಇದ್ದರು