ಕನ್ನಡ ಉಳಿಸಿ ಬೆಳೆಸುವುದು ಎಲ್ಲರ ಹೊಣೆ. ಡಾ. ಮೋಹನ್ ರಾಜಣ್ಣ.
1 min read
ಕನ್ನಡ ಉಳಿಸಿ ಬೆಳೆಸುವುದು ಎಲ್ಲರ ಹೊಣೆ. ಡಾ. ಮೋಹನ್ ರಾಜಣ್ಣ.
ಮೂಡಿಗೆರೆ…ಇದೊಂದು ವಿಶೇಷ ಕನ್ನಡದ ಹಬ್ಬ. ಕನ್ನಡ ವನ್ನು ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿ ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಡಾ. ಮೋಹನ್ ರಾಜಣ್ಣ ಹೇಳಿದರು.
ಅವರು ಇಂದುಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ )ಗೋಣಿಬೀಡು. ಶ್ರೀ ಪುಷ್ಪಗಿರಿ ಸದನ ದಲ್ಲಿ ಹಮ್ಮಿ ಕೊಂಡಿದ್ದ ಕರ್ನಾಟಕ ಸುವರ್ಣ ಸಂಭ್ರಮ -50.ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಕನ್ನಡಾಂಬೆ ಭುವನೇಶ್ವರಿ ದೇವಿಯ ಭಾವಚಿತ್ರ ಕ್ಕೆ ಪುಪ್ಪಾರ್ಚನೆ ಮಾಡಿ ಮಾತನಾಡಿದರು.
ಕನ್ನಡ ಭಾಷೆ ಉಳಿಸಿ ಎಂದು ನಾವು ಯಾರನ್ನು ಬೇಡಿ ಕೊಳ್ಳಬಾರದು. ಏಕೆಂದರೆ ಭಾಷೆಯನ್ನು ಬಳಸುವುದು. ಉಳಿಸುವ ಹೊಣೆ ಗಾರಿಕೆ ಕನ್ನಡಿಗರಾದ ನಮ್ಮದೇ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಮತಿ ಉಮಾಮೋಹನ್ ವಹಿಸಿ ಮಾತನಾಡುತ್ತಾ ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡದಲ್ಲಿ ವ್ಯವಹಾರಿಸಿ ನಾಡಿನ ಹಿರಿಮೆ ಹೆಚ್ಚಿಸಿ ಎಂದರು.
ಟ್ರಸ್ಟಿ. ಸಿ.ಸಿ.ರಾಜಣ್ಣ.ಬಾಂಧವ್ಯ. ಡಿಂಪಲ್. ಗಂಗಾಧರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.

